ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ: ಮಹಾಜನ್ ವರದಿಯೇ ಅಂತಿಮ ಎಂದ ಪಾಲಿಕೆ, ಕನ್ನಡಿಗರ ಘರ್ಜನೆಗೆ ಹೆದರಿದ ಎಂಇಎಸ್ ಪುಂಡರು

ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಹಾಗೂ "ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ" ಎಂಬ ಐತಿಹಾಸಿಕ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
Belagavi City Corporation Passes Historic Resolution Declaring Belagavi Inseparable Part Of Karnataka, Deals Big Blow To Maharashtra
ಮಹಾಜನ್ ವರದಿಯೇ ಅಂತಿಮ ಎಂದ ಪಾಲಿಕೆAI Image
Updated on: 

ಬೆಳಗಾವಿ: ಬೆಳಗಾವಿ ನಮ್ಮದೇ ಎಂದು ಬೊಬ್ಬೆ ಹೊಡೆಯುತ್ತಿದ್ದ ಮಹಾರಾಷ್ಟ್ರಕ್ಕೆ 21 ವರ್ಷಗಳ ಬಳಿಕ ಕನ್ನಡಿಗರು ಒಂದಾಗಿ ಸರಿಯಾಗಿಯೇ ಠಕ್ಕರ್ ನೀಡಿದ್ದಾರೆ. ಹೌದು, ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಹಾಗೂ "ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ" ಎಂಬ ಐತಿಹಾಸಿಕ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದೆ. ಈ ಮೂಲಕ ಗಡಿ ವಿವಾದ ಹಾಗೂ ಭಾಷಾ ರಾಜಕೀಯದ ಕಾರಣಕ್ಕೆ ಸದಾ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದ್ದ ಬೆಳಗಾವಿ ಪಾಲಿಕೆಯಲ್ಲಿ, ಈ ಮಹತ್ವದ ಗೊತ್ತುವಳಿ ಪಾಸ್ ಆಗಿರುವುದು ಕನ್ನಡ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಬೆಳಗಾವಿಗಾಗಿ ಪಕ್ಷಭೇದ ಮರೆತು ಒಂದಾದ ನಾಯಕರು

ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 29 ರಂದು ಪಾಲಿಕೆಗೆ ಪತ್ರ ಬರೆದು, 1988ರ ವಿಧಾನಸಭೆಯ ನಿರ್ಣಯದಂತೆ ಕರ್ನಾಟಕ ಪರ ಗೊತ್ತುವಳಿ ಪಾಸ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಪಾಲಿಕೆ ಸೂಪರ್‌ಸೀಡ್ (ಅಮಾನತು) ಆಗುವ ಭೀತಿಯೂ ಇತ್ತು. ಅದರಂತೆ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಸರ್ಕಾರದ ಪತ್ರವನ್ನು ಸಭೆಯ ಗಮನಕ್ಕೆ ತಂದ ತಕ್ಷಣ, ಮೇಯರ್ ಪ್ರೀತಿ ಕಾಮಕರ್ ಅವರು ನಿರ್ಣಯಕ್ಕೆ ಅನುಮೋದನೆ ದೊರೆತಿದೆ ಎಂದು ರೂಲಿಂಗ್ ನೀಡಿದರು. ಈ ನಿರ್ಣಯಕ್ಕೆ ಪಕ್ಷಭೇದ ಮರೆತು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಮೇಜು ತಟ್ಟಿ ಬೆಂಬಲ ಸೂಚಿಸಿದರು. ಈ ವೇಳೆ, ಎಂದಿನಂತೆ ತನ್ನ ಗಡಿ ಕ್ಯಾತೆ ಪ್ರದರ್ಶಿಸಿದ ಎಂಇಎಸ್ ಬೆಂಬಲಿತ ಸದಸ್ಯರು ಈ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಭಾ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

Belagavi City Corporation Passes Historic Resolution Declaring Belagavi Inseparable Part Of Karnataka, Deals Big Blow To Maharashtra
Asian Games 2026: ಚಿನ್ನ-ಬೆಳ್ಳಿ ಗೆದ್ದು ಮಿಂಚಿದ ಕರುನಾಡ ಕುವರಿ ಪೂವಮ್ಮ; ಕರ್ನಾಟಕದ ಬಹುಮಾನ ನೀತಿಗೆ ಅಸಮಾಧಾನ, ರಾಜ್ಯ ಸರ್ಕಾರದ ಅಸಡ್ಡೆಗೆ ಬೇಸರ..!

ಮುಂದುವರೆದು, ಪಾಲಿಕೆಯ ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಪರ ಹೋರಾಟಗಾರರು ಹಾಗೂ ಕರವೇ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಭರ್ಜರಿ ವಿಜಯೋತ್ಸವ ಆಚರಿಸಿದ್ದಾರೆ. ಈ ಮೂಲಕ ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡದ ಸಾರ್ವಭೌಮತ್ವ ಮತ್ತೊಮ್ಮೆ ಅಧಿಕೃತವಾಗಿ ಸಾಬೀತಾಗಿದೆ.

21 ವರ್ಷಗಳ ಬಳಿಕ ಸಿಕ್ಕ ಠಕ್ಕರ್

ಈ ಹಿಂದೆ 2005ರಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಆಡಳಿತವಿದ್ದಾಗ ಬೆಳಗಾವಿ ಪಾಲಿಕೆಯಲ್ಲಿ "ಮಹಾರಾಷ್ಟ್ರ ಪರ" ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಪರವಾಗಿ ಬಳಸಿಕೊಳ್ಳುತ್ತಿತ್ತು. ಇದೀಗ 21 ವರ್ಷಗಳ ಬಳಿಕ ಕರ್ನಾಟಕ ಪರ ನಿರ್ಣಯ ಅಂಗೀಕರಿಸುವ ಮೂಲಕ ಅದಕ್ಕೆ ತಕ್ಕ ತಿರುಗೇಟು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com