ಮತ್ತೊಂದು ನೇಮಕಾತಿಯಲ್ಲೂ ಅಕ್ರಮ? CID ದಾಳಿಯಲ್ಲಿ ಸಿಕ್ಕ ಡೀಲ್ ನೋಟ್ ಬೆನ್ನಲ್ಲೇ, ಸಾರಿಗೆ ಇಲಾಖೆಯ 150 MVI ನೇಮಕಾತಿ ಪಟ್ಟಿ ವಾಪಸ್ ಪಡೆದ KPSC

ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ನಡುವೆಯೇ, ಮತ್ತೊಂದು ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಂದ ಪರಿಣಾಮ, ಇದೀಗ ನೇಮಕಾತಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು ರದ್ದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
KPSC
ಕರ್ನಾಟಕ ಲೋಕಸೇವಾ ಆಯೋಗOnline Desk
Updated on: 

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ನಡುವೆಯೇ, ಮತ್ತೊಂದು ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಂದ ಪರಿಣಾಮ, ಇದೀಗ ನೇಮಕಾತಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು ರದ್ದು ಮಾಡಿದೆ.

ಹೌದು, ಕರ್ನಾಟಕ ಲೋಕಸೇವಾ ಆಯೋಗವು (KPSC) ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗಿದ್ದ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಹಿಂಪಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಇತ್ತೀಚೆಗೆ ನಡೆದ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಕುರಿತು ಸಿಐಡಿ ನಡೆಸುತ್ತಿದ್ದ ತನಿಖೆಯ ವೇಳೆ, ಮಾಜಿ ಅಧಿಕಾರಿಯೊಬ್ಬರ ಮನೆಯಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಈ ದಾಖಲೆಗಳಲ್ಲಿ ಆರ್‌ಟಿಓ ಮೋಟಾರು ವಾಹನ ನಿರೀಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಹೆಸರುಗಳು ಮತ್ತು ಅವರು ನೀಡಬೇಕಾಗಿದ್ದ ಬಾಕಿ ಹಣದ ವಿವರಗಳಿದ್ದ ಡೀಲ್ ನೋಟ್ ಸಿಕ್ಕಿ ಬಿದ್ದಿತ್ತು. ಈ ಅಕ್ರಮಗಳ ಹಿನ್ನೆಲೆಯಲ್ಲಿ, ಆಗಸ್ಟ್ 20 ರಂದು ನಡೆದ ಆಯೋಗದ ಸಭೆಯ ತೀರ್ಮಾನದಂತೆ ಕೆಪಿಎಸ್‌ಸಿ ಕಾರ್ಯದರ್ಶಿಗಳು ಪ್ರಕಟಣೆ ಹೊರಡಿಸಿ, ಈ ಹಿಂದೆ ಏಪ್ರಿಲ್ 16, 2025 ರಂದು ಪ್ರಕಟಿಸಲಾಗಿದ್ದ ಮೋಟಾರು ವಾಹನ ನಿರೀಕ್ಷಕರ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಹಿಂಪಡೆದುಕೊಂಡಿದ್ದಾರೆ. ಜೊತೆಗೆ, ಆಯೋಗದ ಪ್ರಕಟಣೆಯ ಪ್ರಕಾರ, ಹಿಂಪಡೆಯಲಾದ ಈ ಹೆಚ್ಚುವರಿ ಆಯ್ಕೆ ಪಟ್ಟಿಯ ಬದಲಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಮರು-ಪರಿಷ್ಕರಿಸಲು ನಿರ್ಧರಿಸಲಾಗಿದೆ.

KPSC
KPSC ನೇಮಕಾತಿ ಹಗರಣ: ಎಸ್‌ಐಟಿ ರಚನೆಗೆ ಸುಪ್ರೀಂ ಕೋರ್ಟ್ ತಡೆ; ಸಮರ್ಥ ಅಧಿಕಾರಿಗಳ ಪಟ್ಟಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ

ನೇಮಕಾತಿಯ ಹಿನ್ನೆಲೆ ಏನು?

ಕರ್ನಾಟಕ ಲೋಕಸೇವಾ ಆಯೋಗವು (KPSC) ಮೋಟಾರು ವಾಹನ ನಿರೀಕ್ಷಕರ (MVI) ಒಟ್ಟು 150 ಎಂವಿಐ ಹುದ್ದೆಗಳ (127 ಸಾಮಾನ್ಯ + 23 ಹೈದರಾಬಾದ್-ಕರ್ನಾಟಕ ಕೋಟಾ) ಭರ್ತಿಗಾಗಿ, ಲಿಖಿತ ಪರೀಕ್ಷೆಯನ್ನು ಬಹಳ ವರ್ಷಗಳ ಹಿಂದೆ, ಅಂದರೆ ಡಿಸೆಂಬರ್ 2016 ರಲ್ಲಿ ನಡೆಸಿತ್ತು. ಆರಂಭದಲ್ಲಿ 141 ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಸಿದ್ಧಪಡಿಸಲಾಗಿತ್ತು. ತದನಂತರ ಕೆಪಿಎಸ್‌ಸಿ ಏಪ್ರಿಲ್ 16, 2025 ರಂದು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಈಗ ಸಿಐಡಿ ವರದಿ ಆಧರಿಸಿ ಇದನ್ನು ಹಿಂಪಡೆಯಲಾಗಿದೆ.

ಏತನ್ಮಧ್ಯೆ, ಈ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯದ ನಿರ್ದೇಶನಗಳು ಮತ್ತು ಮೂಲ ಅಧಿಸೂಚನೆಯ ನಿಯಮಗಳನ್ನು ಸರಿಯಾಗಿ ಪಾಲಿಸದೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ತಪ್ಪು ಮನವರಿಕೆಯಾದ ತಕ್ಷಣ ಆಯೋಗವು ಪಟ್ಟಿಯನ್ನು ಹಿಂಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com