

ಬೀದರ್: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಬೀದರ್ ಪೊಲೀಸರ ಸಹಕಾರದೊಂದಿಗೆ ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಆ್ಯಂಡ್ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಬೀದರ್ ನ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ಬಂಧಿಸಲಾಗಿದೆ.
ಭಾರತದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹೊರಬಂದು ಪಾಕಿಸ್ತಾನದ ಪರವಾಗಿ ಶಹಜಾದ್ ಭಟ್ಟಿ ಉಗ್ರ ಚಟುವಟಿಕೆ ನಡೆಸುತ್ತಿದ್ದಾನೆ. ಇತನ್ನೊಂದಿಗೆ ಸಂಪರ್ಕ ಶಂಕೆ ಹಿನ್ನೆಲೆ ಯುಎಪಿಎ ಕಾಯ್ದೆಯಡಿ ವಿಶಾಲ್ ಮೇತ್ರೆಯನ್ನ ಎನ್ಐಎ ತಂಡ ಬಂಧಿಸಿದೆ. ವಿಶಾಲ್ ಮೇತ್ರೆಗೆ ಅಪರಾಧ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಕೋರ್ಟ್ ಪ್ರಕ್ರಿಯೆ ನಡೆಯುತ್ತಿದ್ದು, ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ’ ಎಸ್‌ಪಿ ಪ್ರದೀಪ್ ಗುಂಟಿ ಪ್ರತಿಕ್ರಿಯಿಸಿದ್ದಾರೆ.