ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರ ಗೆಳತಿ, ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನೈಜಿರಿಯನ್ ಪ್ರಜೆಗಳ ಕಾಟದಿಂದ ರೋಸಿ ಹೋಗಿದ್ದು, ಕೋರ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
Darshan-Pavithra Gowda
ದರ್ಶನ್-ಪವಿತ್ರಾ ಗೌಡ
Updated on: 

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಈಗ ಹೊಸ ಟೆನ್ಷನ್ ಶುರುವಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರ ಗೆಳತಿ, ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನೈಜಿರಿಯನ್ ಪ್ರಜೆಗಳ ಕಾಟದಿಂದ ರೋಸಿ ಹೋಗಿದ್ದು, ಕೋರ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಬ್ಯಾರಕ್‌ ಬದಲಾವಣೆ ಮಾಡುವಂತೆ ಕೋರಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಗೆ ಅಸ್ತು ಎಂದಿದ್ದ ಕೋರ್ಟ್‌, ಬ್ಯಾರಕ್ ಬದಲಾಯಿಸುವಂತೆ ಸೂಚನೆ ನೀಡಿತ್ತು. ಆದರೆ ಇದುವರೆಗೂ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿ ವರದಿ ಸಲ್ಲಿಸದ‌ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ ಆಗಿದೆ. ಇಂದೇ ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಡೆಡ್ ಲೈನ್ ನೀಡಿದೆ.

Darshan-Pavithra Gowda
ಕೋರ್ಟ್​ನಲ್ಲಿ ಸತತ ಮೂರು ಗಂಟೆಗಳ ಕಾಲ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ಪ್ರದೋಷ್; ದರ್ಶನ್ ಬಗ್ಗೆ ಹೇಳಿದ್ದೇನು?

ಸೆಪ್ಟೆಂಬರ್ 7ರಂದು ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಬಂದು ಒಂದು ತಿಂಗಳು ಕಳೆದರೂ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿಲ್ಲ ಎಂದು ಪವಿತ್ರಾ ಗೌಡ ಮತ್ತೆ ಅರ್ಜಿ ಸಲ್ಲಿಸಿದ್ದರು.

ನೈಜಿರಿಯನ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಪವಿತ್ರಾ ಗೌಡ ಕಣ್ಣೀರು ಸಹ ಹಾಕಿದ್ದರು. ಆಗ ಸೆ.26ರೊಳಗೆ ವರದಿ ನೀಡುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿತ್ತು. ಆದರೂ ಜೈಲಾಧಿಕಾರಿಗಳು ವರದಿ ನೀಡಿರಲಿಲ್ಲ. ಹೀಗಾಗಿ ಅಕ್ಟೋಬರ್ 5ರಂದು ಮಾಫಿ ಸಾಕ್ಷಿ ಪ್ರಕ್ರಿಯೆ ಆರಂಭಕ್ಕೂ ಮುನ್ನ ಪವಿತ್ರಾ ಗೌಡ ಪರ ವಕೀಲರು ಈ ವಿಚಾರನ್ನು ಮತ್ತೆ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಜೈಲಾಧಿಕಾರಿಗಳು ಇನ್ನೂ ವರದಿ ನೀಡದ್ದಕ್ಕೆ ನ್ಯಾಯಾಧೀಶರು ಗರಂ ಆಗಿದ್ದು, ಇಂದು ತಪ್ಪದೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಪವಿತ್ರಾ ಗೌಡ ಅವರನ್ನ 32 ಆರೋಪಿಗಳಿದ್ದ ಬ್ಯಾರಕ್ ಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ನೈಜಿರಿಯಾ ಆರೋಪಿಗಳ ಕಿರುಕುಳದ ಬಗ್ಗೆ ಕೋರ್ಟ್ ಗಮನಕ್ಕೆ ತಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com