'ನಿಮ್ಮದೇ ಕ್ಷೇತ್ರದಲ್ಲಿ 5,964 ರಸ್ತೆ ಗುಂಡಿಗಳಿವೆ, ರೀಲ್ಸ್ ಸಚಿವರೇ, ಇದೇನಾ ನಿಮ್ಮ ಮಾದರಿ ರಾಜಧಾನಿ..?'

ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ ತೋರುವ ಸರ್ಕಾರ, ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಪ್ರಚಾರ ಮಾಡುತ್ತದೆ. ಆದರೆ, ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ..?
Krishna Byre Gowda
ಸಚಿವ ಕೃಷ್ಣ ಬೈರೇಗೌಡ
Updated on: 

ಬೆಂಗಳೂರು: ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು AI ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. “ರೀಲ್ಸ್ ಸಚಿವರಾದ ಕೃಷ್ಣ ಬೈರೇಗೌಡ ಅವರೇ, ಇದೇನಾ ನಿಮ್ಮ ಮಾದರಿ ರಾಜಧಾನಿ?” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ ರಸ್ತೆಗಳನ್ನು ಕೃತಕ ಬುದ್ಧಿಮತ್ತೆ ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. ಇದು ನಗರದ ಒಂದು ವಿಭಾಗದ ಲೆಕ್ಕ ಮಾತ್ರವಾಗಿದ್ದು, ಬೆಂಗಳೂರಿನ ಇತರ ಭಾಗಗಳಲ್ಲೂ ಸಾವಿರಾರು ಗುಂಡಿಗಳಿರುವುದು ಇದೇ ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಒಂದೆಡೆ ‘ವಿಶ್ವಮಟ್ಟದ ಬೆಂಗಳೂರು’ ಎಂದು ಪ್ರಚಾರ ಮಾಡಲಾಗುತ್ತಿದೆ. ಮತ್ತೊಂದೆಡೆ ರಾಜಧಾನಿಯ ರಸ್ತೆಗಳ ಸ್ಥಿತಿ ಅಯೋಮಯವಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳೇ ಕಾಣಿಸುತ್ತಿವೆ ಎಂದು ಟೀಕಿಸಿದ್ದಾರೆ.

ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ ತೋರುವ ಸರ್ಕಾರ, ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಪ್ರಚಾರ ಮಾಡುತ್ತದೆ. ಆದರೆ ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ್ದಾರೆ.

Krishna Byre Gowda
'ಮುಖ್ಯಮಂತ್ರಿಗಳೇ.. ನಿಮ್ಮ ಸರ್ಕಾರದ ಹಣಕಾಸಿನ ನಿರ್ವಹಣೆಯ ವೈಫಲ್ಯಕ್ಕೆ ಕರ್ನಾಟಕದ ಜನರು ಏಕೆ ಬೆಲೆ ತೆರಬೇಕು..?'

ಪ್ರತಿದಿನ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಮಳೆ ಬಂದಾಗ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

“ಕೃಷ್ಣ ಬೈರೇಗೌಡ ಅವರೇ, ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಇನ್ನು ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ನಿರ್ವಹಣೆಯ ಹೊಣೆಗಾರಿಕೆ ಯಾರದ್ದು? ಎಂದು ಪ್ರಶ್ನಿಸಿದ್ದಾರೆ.

ರಾಜಧಾನಿಯ ಜನರಿಗೆ ಭಾಷಣ, ಪ್ರಚಾರ ಹಾಗೂ ಹೊಸ ಶುಲ್ಕಗಳ ಅಗತ್ಯವಿಲ್ಲ. ಅವರಿಗೆ ಬೇಕಿರುವುದು ಗುಂಡಿ ಮುಕ್ತ ರಸ್ತೆಗಳು, ಸುರಕ್ಷಿತ ಸಂಚಾರ ಹಾಗೂ ಸಮರ್ಪಕ ನಗರ ನಿರ್ವಹಣೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ‘ಬ್ರಾಂಡ್ ಬೆಂಗಳೂರು’ ಎಂದರೆ ಏನು ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com