ಸುಳ್ಳು ಸುದ್ದಿ ಹರಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಸತೀಶ್ ಜಾರಕಿಹೊಳಿ

ಕಮಿಷನ್ ಹಣದಿಂದ ಹೆಲಿಕಾಪ್ಟರ್ ಖರೀದಿಸಿದ್ದಾರೆ’ ಎಂಬ ಆರೋಪಗಳ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.
Minister Satish Jarkiholi, his residence at Kuvempu Nagar in Belagavi
ಸಚಿವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿಯ ಕುವೆಂಪು ನಗರದಲ್ಲಿರುವ ನಿವಾಸ
Updated on: 

ಬೆಳಗಾವಿ: ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಆರೋಪಗಳನ್ನು ಎದುರಿಸಲು ನ್ಯಾಯಾಲಯಕ್ಕೆ ಬರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.

‘ಕಮಿಷನ್ ಹಣದಿಂದ ಹೆಲಿಕಾಪ್ಟರ್ ಖರೀದಿಸಿದ್ದಾರೆ’ ಎಂಬ ಆರೋಪಗಳ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.

ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ. ಅವರು ನ್ಯಾಯಾಲಯಕ್ಕೆ ಬಂದು ಉತ್ತರಿಸಲಿ” ಎಂದು ಹೇಳಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ನಡೆಯುತ್ತಿರುವ ವಿವಾದದ ಬಗ್ಗೆ ಮಾತನಾಡಿ, ಕಾಂಗ್ರೆಸ್‌ಗೆ SIR ಬಗ್ಗೆ ಯಾವುದೇ ಭಯವಿಲ್ಲ. ಈ ಪ್ರಕ್ರಿಯೆ ಬಗ್ಗೆ ಬಿಜೆಪಿಯವರೇ ಆತಂಕಗೊಂಡಿದ್ದಾರೆ. “ನಾವು ಯಾವುದೇ ಮತಗಳನ್ನು ಅಳಿಸಿಲ್ಲ, ಹೊಸ ಮತಗಳನ್ನು ಸೇರಿಸಿಲ್ಲ. ಬಿಜೆಪಿ ನಾಯಕರಲ್ಲಿ ಗೊಂದಲವಿದೆ ಎಂದು ಹೇಳಿದರು.

ಇದೇ ವೇಳೆ ಸಾವಿರಾರು ಫಾರ್ಮ್‌-7 ಅರ್ಜಿಗಳನ್ನು ಸಲ್ಲಿಸಲು ಬಿಜೆಪಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ ಅವರು, ಒಂದು ಸಂಸ್ಥೆ ಫಾರ್ಮ್‌ಗಳನ್ನು ಮುದ್ರಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಅವುಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಯಾರ ಹೆಸರುಗಳನ್ನು ಅಳಿಸಬೇಕು ಎಂಬುದನ್ನು ಬಿಜೆಪಿ ಈಗಾಗಲೇ ನಿರ್ಧರಿಸಿಕೊಂಡಿರುವಂತೆ ಕಾಣುತ್ತಿದೆ” ಎಂದು ದೂರಿದರು. ಫಾರ್ಮ್‌ಗಳನ್ನು ಯಾವ ಸಂಸ್ಥೆ ಮುದ್ರಿಸಿದೆ ಎಂಬುದು ತನಿಖೆಯಿಂದ ಬಹಿರಂಗವಾಗಲಿದೆ ಎಂದು ಹೇಳಿದರು.

ಕೊಪ್ಪಳದ ಮತದಾರರಿಗೆ ಸಂಬಂಧಿಸಿದ ಫಾರ್ಮ್‌-7 ಬೆಂಗಳೂರಿನಲ್ಲಿ ಹೇಗೆ ಮುದ್ರಣವಾಗಲು ಸಾಧ್ಯ?” ಎಂದು ಪ್ರಶ್ನಿಸಿದ ಅವರು, ಈ ಪ್ರಕ್ರಿಯೆ ಪೂರ್ವನಿಯೋಜಿತವಾಗಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

Minister Satish Jarkiholi, his residence at Kuvempu Nagar in Belagavi
ಕಬ್ಬಿನ MSP ಹೆಚ್ಚಿಸಿ, ಟನ್‌ಗೆ 6 ಸಾವಿರ ರೂ ನಿಗದಿ ಮಾಡಿ: ಕೇಂದ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಗ್ರಹ

‘ಇ.ಡಿ.ಯಿಂದ ಯಾವುದೇ ನೋಟಿಸ್ ಬಂದಿಲ್ಲ’

ಬಳಿಕ ಜಾರಿ ನಿರ್ದೇಶನಾಲಯದಿಂದ (ED) ಸಂಭವನೀಯ ಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದರು.

ನನಗೆ ಇ.ಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೆ ನಾನು ಉತ್ತರಿಸುತ್ತೇನೆ. ನೋಟಿಸ್ ಜಾರಿಯಾದರೆ ನಮಗಿಂತ ಮೊದಲೇ ಮಾಧ್ಯಮಗಳಿಗೆ ಮಾಹಿತಿ ಸಿಗಬಹುದು ಎಂದು ಹೇಳಿದರು.

ಕಬ್ಬು ಅಥವಾ ಸಕ್ಕರೆಯ ಬೆಲೆಯನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com