ಬಹುತೇಕ ಮುಸ್ಲಿಮರು ಮಾಜಿ ದಲಿತರು, ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್

ಇಂದು ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಸ್ಲಿಂ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ ಎಂದರು.
Many Muslims are former Dalits, says Minister Rizwan Arshad
ರಿಜ್ವಾನ್ ಅರ್ಷದ್
Updated on: 

ಬೆಂಗಳೂರು: ಇಂದಿನ ಬಹುತೇಕ ಮುಸ್ಲಿಮರು ಹಿಂದೆ ಎಸ್‌ಸಿ(SC), ಎಸ್‌ಟಿ(ST) ಸಮುದಾಯಕ್ಕೆ ಸೇರಿದ್ದರು. ನಾವೂ ಮಾಜಿ ದಲಿತರು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಸೋಮವಾರ ಹೇಳಿದ್ದಾರೆ.

ಇಂದು ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಸ್ಲಿಂ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ ಎಂದರು.

ದಲಿತ ಕೇರಿಗಳು ಎಲ್ಲೆಲ್ಲಿ ಇರುತ್ತವೆಯೋ, ಮುಸ್ಲಿಮರು ಕೂಡ ಅದೇ ಪರಿಸರದಲ್ಲಿ ವಾಸಿಸುತ್ತಾರೆ. ನಮ್ಮ ಪೂರ್ವಿಕರು ಯಾವ ಕಾರಣಕ್ಕಾಗಿ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಧರ್ಮ ಬದಲಾವಣೆಯಾದ ಮಾತ್ರಕ್ಕೆ ಮೈಯಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ನಮ್ಮ ನಡುವೆ ಯಾವುದೇ ಭೇದಭಾವವಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮುಸ್ಲಿಮರೆಲ್ಲರೂ ಮಾಜಿ ದಲಿತರು ಎಂದು ಸಚಿವರು ಹೇಳಿದರು.

Many Muslims are former Dalits, says Minister Rizwan Arshad
SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ದಲಿತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಕಷ್ಟ-ಕಾರ್ಪಣ್ಯಗಳನ್ನೇ ಮುಸ್ಲಿಂ ಸಮುದಾಯವೂ ಎದುರಿಸುತ್ತಿದೆ ಎಂದ ಸಚಿವರು, ನೀವು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ, ನಾವೂ ಅದೇ ರೀತಿಯ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ದಲಿತ ಸಮುದಾಯದ ಪೂಜ್ಯ ಸ್ವಾಮೀಜಿಗಳು ಮುಸ್ಲಿಮರ ಪರವಾಗಿಯೂ ನಿಲ್ಲಬೇಕು, ನಮ್ಮ ಕಷ್ಟಗಳಿಗೂ ಧ್ವನಿಯಾಗಬೇಕು ಎಂದು ವೇದಿಕೆಯಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com