ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ: 16 ಗಂಟೆಯಲ್ಲಿ ಬೆಂಗಳೂರು ಟು ಮುಂಬೈ; ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣದ ರೇಟ್ ಎಷ್ಟು?

ಭಾರತೀಯ ರೈಲ್ವೆಯು ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ದೇಶದ ಪ್ರಮುಖ ಮಾರ್ಗಗಳಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಪೈಕಿ ಮುಂಬೈ-ಬೆಂಗಳೂರು ಹಾಗೂ ದೆಹಲಿ-ವಾರಣಾಸಿ ಮಾರ್ಗಗಳ ತಾತ್ಕಾಲಿಕ ವೇಳಾಪಟ್ಟಿ, ಮಾರ್ಗ ಮತ್ತು ದರಗಳ ಸಂಪೂರ್ಣ ವಿವರ ಇಲ್ಲಿದೆ:
Vande Bharat Sleeper Train
ವಂದೇ ಭಾರತ್ ಸ್ಲೀಪರ್ ರೈಲುOnline Desk
Updated on: 

ಬೆಂಗಳೂರು: ದೂರದ ಊರುಗಳಿಗೆ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಸಮಯದ ವ್ಯರ್ಥ, ದಣಿವು ಎಂಬ ಕಾಲ ಇನ್ನು ಮುಗಿಯಿತು. ಅತ್ಯಾಧುನಿಕ ಸೌಲಭ್ಯ, ವಿಮಾನದಂತಹ ಆರಾಮದಾಯಕ ಅನುಭವ ನೀಡಲು ಸಜ್ಜಾಗಿರುವ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರದಲ್ಲೇ ಹಳಿಗೆ ಇಳಿಯಲಿವೆ. ಅದರಲ್ಲೂ ಬೆಂಗಳೂರು ಹಾಗೂ ಮುಂಬೈ ನಡುವಿನ ಪ್ರಯಾಣಿಕರಿಗೆ ಈ ರೈಲು ಸಂಚಾರ ಕ್ರಾಂತಿಕಾರಿ ಬದಲಾವಣೆ ತರಲಿದೆ. ಅಷ್ಟಕ್ಕೂ ಈ ರೈಲು ಯಾವಾಗ ಹೊರಡುತ್ತದೆ? ತಲುಪುವ ಸಮಯವೇನು? ಯಾವೆಲ್ಲ ನಿಲ್ದಾಣಗಳಲ್ಲಿ ನಿಲ್ಲುತ್ತದೆ? ಟಿಕೆಟ್ ದರ ಎಷ್ಟು ನಿಗದಿಯಾಗಬಹುದು? ನಿಮ್ಮೆಲ್ಲಾ ಕುತೂಹಲಕ್ಕೆ ಉತ್ತರ ಇಲ್ಲಿದೆ:

ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು

ಇದೇ ನವೆಂಬರ್ 1 ರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು / SMVT ಬೆಂಗಳೂರು ಮತ್ತು ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಚರಿಸಲಿದ್ದು, ಸುಮಾರು 1,000 ಕಿ.ಮೀ ದೂರವನ್ನು 16 ಗಂಟೆಗಳಲ್ಲಿ ಕ್ರಮಿಸಲಿದೆ. ಈ ಮೂಲಕ ಇದು ಸಾಮಾನ್ಯ ರೈಲುಗಳಿಗಿಂತ (ಉದಾಹರಣೆಗೆ ಉದ್ಯಾನ್ ಎಕ್ಸ್‌ಪ್ರೆಸ್) ಸುಮಾರು 5 ರಿಂದ 6 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸಲಿದೆ. ಅದರಂತೆ, ಸೋಮವಾರ ಹೊರತುಪಡಿಸಿ ರೈಲು ಸಂಖ್ಯೆ 27652 ಬೆಂಗಳೂರಿನಿಂದ ರಾತ್ರಿ 10:00 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 1:50 ಕ್ಕೆ ಮುಂಬೈ ತಲುಪಲಿದೆ. ರೈಲು ಸಂಖ್ಯೆ 27651 ಮಂಗಳವಾರ ಹೊರತುಪಡಿಸಿ ಮುಂಬೈನಿಂದ ರಾತ್ರಿ 10:30 ಕ್ಕೆ ಹೊರಟು, ಮರುದಿನ ಮಧ್ಯಾಹ್ನ 2:50 ಕ್ಕೆ ಬೆಂಗಳೂರು ತಲುಪಲಿದೆ. ಇನ್ನು ಮಾರ್ಗ ಮಧ್ಯ ಕಲ್ಯಾಣ್, ಪುಣೆ, ಸೋಲಾಪುರ, ಕಲಬುರಗಿ, ರಾಯಚೂರು, ಗುಂತಕಲ್ ಮತ್ತು ಅನಂತಪುರದಂತಹ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಹಾಗಾದ್ರೆ, ಅಂದಾಜು ರೇಟ್ ಎಷ್ಟು?

ರೈಲ್ವೆಯ ಮೂಲ ದರದ ಲೆಕ್ಕಾಚಾರದ ಪ್ರಕಾರ ಅಂದಾಜು ಟಿಕೆಟ್ ದರಗಳು: AC 3-Tier (3A): ₹2,684 ರಿಂದ ₹2,750, AC 2-Tier (2A): ₹3,466 ರಿಂದ ₹3,550, First AC (1A): ₹4,250 ರಿಂದ ₹4,350 ಇರಬಹುದು ಎನ್ನಲಾಗಿದೆ. ಆದರೆ, ಊಟ ಹಾಗೂ ಜಿಎಸ್‌ಟಿ ಸೇರಿ ಬದಲಾಗಬಹುದು.

Vande Bharat Sleeper Train
ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನವೆಂಬರ್ 1ಕ್ಕೆ ಚಾಲನೆ!

ನವದೆಹಲಿ - ವಾರಣಾಸಿ ವಂದೇ ಭಾರತ್ ಸ್ಲೀಪರ್ ರೈಲು

ಇದು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ತೀರ್ಥಯಾತ್ರಿಕರು, ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ ಈ ರಾತ್ರಿ ಪ್ರಯಾಣದ ರೈಲು ಗಣನೀಯವಾಗಿ ಸಮಯ ಉಳಿಸಲಿದೆ. ಅದರಂತೆ, ರೈಲು ಸಂಖ್ಯೆ 27422 ನವದೆಹಲಿಯಿಂದ ರಾತ್ರಿ 9:40ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6:45 ಕ್ಕೆ ವಾರಣಾಸಿ ತಲುಪಲಿದೆ. ಮತ್ತೊಂದೆಡೆ, ರೈಲು ಸಂಖ್ಯೆ 27421 ವಾರಣಾಸಿಯಿಂದ ರಾತ್ರಿ 8:50 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:55 ಕ್ಕೆ ನವದೆಹಲಿ ತಲುಪಲಿದೆ. ಅದರಂತೆ, ಇದು ವಾರದಲ್ಲಿ 6 ದಿನಗಳು ಶನಿವಾರ ಹೊರತುಪಡಿಸಿ ಸಂಚರಿಸಲಿದೆ. ರೈಲ್ವೆಯ ಮೂಲ ದರದ ಲೆಕ್ಕಾಚಾರದ ಪ್ರಕಾರ ಅಂದಾಜು ಟಿಕೆಟ್ ದರಗಳು:  AC 3-Tier (3A): ಅಂದಾಜು ₹2,050 - ₹2,150, AC 2-Tier (2A): ಅಂದಾಜು ₹2,550 - ₹2,650, First AC (1A): ಅಂದಾಜು ₹3,150 - ₹3,250 ಇರಬಹುದು ಎನ್ನಲಾಗಿದೆ. ಆದರೆ, ಊಟ ಹಾಗೂ ಜಿಎಸ್‌ಟಿ ಸೇರಿ ಬದಲಾಗಬಹುದು.

ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಮುಖ ವೈಶಿಷ್ಟ್ಯಗಳು

  • RAC ಟಿಕೆಟ್‌ಗಳಿಲ್ಲ: ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ Reservation Against Cancellation (RAC) ಸೌಲಭ್ಯ ಇರುವುದಿಲ್ಲ. ಕೇವಲ ಕನ್ಫರ್ಮ್ ಆದ ಸೀಟುಗಳನ್ನು ಮಾತ್ರ ನೀಡಲಾಗುತ್ತದೆ.

  • ವೇಗ ಮತ್ತು ಸುರಕ್ಷತೆ: ಗರಿಷ್ಠ 160 ಕಿಮೀ/ಗಂಟೆ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆಗಾಗಿ ಸ್ವಯಂಚಾಲಿತ ಕವಚ್ ತಂತ್ರಜ್ಞಾನ ಅಳವಡಿಸಲಾಗಿದೆ.

  • ಆಧುನಿಕ ಸೌಕರ್ಯಗಳು: ಸುಧಾರಿತ ವೈ-ಫೈ, ಮಾಡ್ಯುಲರ್ ಬರ್ತ್‌ಗಳು, ಪ್ರತಿ ಸೀಟಿಗೂ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಬಯೋ-ವ್ಯಾಕ್ಯೂಮ್ ಶೌಚಾಲಯಗಳನ್ನು ಅಳವಡಿಸಲಾಗಿದೆ.

  • ವಿಶೇಷ ಕೋಟಾ: ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೆಳಭಾಗದ ಬರ್ತ್‌ಗಳನ್ನು ಕಾಯ್ದಿರಿಸಲು ವಿಶೇಷ ಕೋಟಾ ಇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com