ಮಾಜಿ ಶಾಸಕನಿಗೆ ಹನಿಟ್ರ್ಯಾಪ್​​ ಆತಂಕ, ವಿಡಿಯೋ ಪ್ರಸಾರ ಮಾಡುವ ಬೆದರಿಕೆ: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಕೆ!

ಜೆಡಿಎಸ್​ ಮಾಜಿ ಶಾಸಕ ಎ.ಮಂಜುನಾಥ್ ಅವರು ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳ ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಎ.ಮಂಜುನಾಥ್
ಎ.ಮಂಜುನಾಥ್
Updated on: 

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್​​ ಆಪರೇಷನ್​ ಭಾರೀ ಸದ್ದು ಮಾಡುತ್ತಿದ್ದು,​ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಬುಧವಾರ ಮತ್ತೊಂದು ಹನಿಟ್ರ್ಯಾಪ್​​ ಪ್ರಕರಣ​​ ಮುನ್ನೆಲೆಗೆ ಬಂದಿದ್ದು, ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಜೆಡಿಎಸ್​ ಮಾಜಿ ಶಾಸಕ ಎ.ಮಂಜುನಾಥ್ ಅವರು ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳ ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಜಯಗಳಿಸಿ, 2023ರವರೆಗೆ ಮಾಗಡಿ ಕ್ಷೇತ್ರದ ಶಾಸಕರಾಗಿದ್ದ ಮಂಜುನಾಥ್​​ ಅವರು ಈಗ ಜೆಡಿಎಸ್​ನ ರಾಜ್ಯ ಕೋರ್​​ ಕಮಿಟಿ ಸದಸ್ಯರೂ ಆಗಿದ್ದಾರೆ.

ಎ.ಮಂಜುನಾಥ್
ಸ್ಟಿಂಗ್ ಫ್ಯಾಕ್ಟರಿಗಳು ಎಲ್ಲಾ ಕಡೆ ಓಪನ್ ಆಗಿವೆ; ನೋಡಲೂ ಅಸಹ್ಯ, ಕೇಳಲೂ ಅಸಹ್ಯ: ಕೆ.ಎನ್ ರಾಜಣ್ಣ ಹೇಳಿಕೆ

ಅರ್ಜಿಯಲ್ಲಿ ಏನಿದೆ?

ರಹಸ್ಯವಾಗಿ ಚಿತ್ರೀಕರಿಸಿದ ‘ಸ್ಟಿಂಗ್ ವಿಡಿಯೋ’ ಇರುವುದಾಗಿ ವಾಹಿನಿಯ ಕಾರ್ಯಕ್ರಮದಲ್ಲಿಯೇ ಹೇಳಲಾಗಿದೆ. ವಿಜಯದಶಮಿ ಮುಗಿದ ಬಳಿಕ ಆ ವಿಡಿಯೋವನ್ನು ತೋರಿಸುವುದಾಗಿಯೂ ತಿಳಿಸಿದ್ದಾರೆ. ಆ ವಿಡಿಯೋ ಅಸ್ತಿತ್ವದಲ್ಲಿದ್ದರೆ, ಅದು 2023ರ ಮಾರ್ಚ್‌ನಲ್ಲಿ ನಡೆದ ಘಟನೆಯಾಗಿದೆ. ಒಂದು ನೆಪವೊಡ್ಡಿ ಕರೆಸಿಕೊಂಡು, ಅರಿವಿಗೆ ಬಾರದಂತೆ ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಆದರೆ ಅರ್ಜಿದಾರರು ಆ ವಿಡಿಯೋವನ್ನು ಎಂದಿಗೂ ನೋಡಿಲ್ಲ ಎಂದು ಹೈಕೋರ್ಟ್​​ಗೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com