ಬೆಂಗಳೂರು–ಹೊಸೂರು ಮಾರ್ಗದಲ್ಲಿ ಟ್ರಾಫಿಕ್ ಗೆ ಮುಕ್ತಿ: ಚಂದಾಪುರ ಸಮೀಪ 61 ಮೀಟರ್‌ ಬೃಹತ್‌ ಗರ್ಡರ್‌ ಅಳವಡಿಕೆ

ಮೊದಲ ಗರ್ಡರ್‌ ನ್ನು ಅಕ್ಟೋಬರ್‌ 10ರಂದು ಹಾಗೂ ಎರಡನೆಯದನ್ನು ನಿನ್ನೆ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ರೈಲು ಮಾರ್ಗ ದ್ವಿಪಥಗೊಳಿಸುವ ಯೋಜನೆಗಾಗಿ ಅಳವಡಿಸಿರುವ ಅತ್ಯಂತ ಉದ್ದದ ಗರ್ಡರ್‌ಗಳು ಇವಾಗಿವೆ ಎಂದು ಕೆ–ರೈಡ್‌ ತಿಳಿಸಿದೆ.
Weighing around 245 tonnes each, the girders would allow road and rail traffic to move independently
ಸುಮಾರು 245 ಟನ್‌ ತೂಕದ ಈ ಗರ್ಡರ್‌ಗಳ ಅಳವಡಿಕೆಯಿಂದ ರಸ್ತೆ ಹಾಗೂ ರೈಲು ಸಂಚಾರವು ಪರಸ್ಪರ ಅಡಚಣೆಯಿಲ್ಲದೆ ಸ್ವತಂತ್ರವಾಗಿ ನಡೆಯಲು ಅನುಕೂಲವಾಗಲಿದೆ.
Updated on: 

ಬೆಂಗಳೂರು: 48 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ–ಹೊಸೂರು ರೈಲು ಮಾರ್ಗ ದ್ವಿಪಥಗೊಳಿಸುವ ಯೋಜನೆ ಭಾಗವಾಗಿ, ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ ನಿಯಮಿತ (K-RIDE) ಸಂಸ್ಥೆಯು ಚಂದಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ–44ರಲ್ಲಿ 470ನೇ ಸಂಖ್ಯೆಯ ಪ್ರಮುಖ ಸೇತುವೆಗೆ ತಲಾ 61 ಮೀಟರ್‌ ಉದ್ದ ಹಾಗೂ ಸುಮಾರು 245 ಟನ್‌ ತೂಕದ ಎರಡು ಬೃಹತ್‌ ಗರ್ಡರ್‌ಗಳನ್ನು(ಬೃಹತ್‌ ಆಧಾರ ತೊಲೆಗಳು) ಅಳವಡಿಸಿದೆ.

ಮೊದಲ ಗರ್ಡರ್‌ ನ್ನು ಅಕ್ಟೋಬರ್‌ 10ರಂದು ಹಾಗೂ ಎರಡನೆಯದನ್ನು ನಿನ್ನೆ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ರೈಲು ಮಾರ್ಗ ದ್ವಿಪಥಗೊಳಿಸುವ ಯೋಜನೆಗಾಗಿ ಅಳವಡಿಸಿರುವ ಅತ್ಯಂತ ಉದ್ದದ ಗರ್ಡರ್‌ಗಳು ಇವಾಗಿವೆ ಎಂದು ಕೆ–ರೈಡ್‌ ತಿಳಿಸಿದೆ.

Weighing around 245 tonnes each, the girders would allow road and rail traffic to move independently
Namma Metro ಪಿಂಕ್ ಲೈನ್​​ ಮೇಲ್ಸೇತುವೆ ಎಲಿವೇಟೆಡ್ ಮಾರ್ಗಕ್ಕೆ CMRS ಗ್ರೀನ್ ಸಿಗ್ನಲ್

ಹೆದ್ದಾರಿ ಮೇಲಿನ ಸೇತುವೆಯ ವ್ಯಾಪ್ತಿಯಲ್ಲಿ ಮಧ್ಯಂತರ ಆಧಾರಸ್ತಂಭ ನಿರ್ಮಿಸದೆ, ಒಂದೇ ಕೆಳಾಧಾರ ರಚನೆಯ ಮೇಲೆ ಎರಡೂ ರೈಲು ಮಾರ್ಗಗಳನ್ನು ಅಳವಡಿಸಲು ಅನುಕೂಲವಾಗುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.

ಇದರಿಂದ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ. ಅನುಮೋದಿತ ವಿನ್ಯಾಸದ ಪ್ರಕಾರ ಸಂಬಂಧಿತ ಕಾಮಗಾರಿಗಳು ಪೂರ್ಣಗೊಂಡ ಬಳಿಕ, ಯೋಜಿತ 12 ಪಥಗಳ ಹೆದ್ದಾರಿ ನಿರ್ಮಾಣಕ್ಕೂ ಈ ವ್ಯವಸ್ಥೆ ಪೂರಕವಾಗಲಿದೆ.

ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌, ರಸ್ತೆ ಮತ್ತು ರೈಲು ಮಾರ್ಗಗಳು ಬೇರೆ ಬೇರೆ ಮಟ್ಟಗಳಲ್ಲಿ ಹಾದುಹೋಗುವ ಈ ವ್ಯವಸ್ಥೆಯಿಂದ ರಸ್ತೆ ಹಾಗೂ ರೈಲು ಸಂಚಾರ ಪರಸ್ಪರ ಅಡಚಣೆಯಿಲ್ಲದೆ ನಡೆಯಲಿದೆ. ರೈಲುಗಳ ಸಂಚಾರದಿಂದ ಹೆದ್ದಾರಿಯ ವಾಹನ ಸಂಚಾರಕ್ಕೆ ಉಂಟಾಗುವ ಅಡಚಣೆಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.

ರೈಲು ಮಾರ್ಗಕ್ಕೆ ಸಂಬಂಧಿಸಿದ ಹಾಗೂ ಇತರ ಪೂರಕ ಕಾಮಗಾರಿಗಳನ್ನು ಮುಂದಿನ ಜನವರಿಯೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಈ ಯೋಜನೆಯಿಂದ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸಂಚಾರ ಸಾಮರ್ಥ್ಯ ಹೆಚ್ಚಾಗುವ ನಿರೀಕ್ಷೆಯಿದ್ದು, ಬೆಂಗಳೂರು ಮತ್ತು ಹೊಸೂರು ನಡುವಿನ ರೈಲು ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com