ಪಿಯುಸಿಗೆ 13 ವರ್ಷ, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ: ಆದ್ರೆ, VAO ಪರೀಕ್ಷೆಯಲ್ಲಿ ಜಿಲ್ಲೆಗೆ ಫಸ್ಟ್! 151 ಅಂಕಗಳಿಸಿದ ಅಭ್ಯರ್ಥಿ ವಿರುದ್ಧ ತನಿಖೆಗೆ ಆದೇಶಿಸಿದ KEA

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬರು 151 ಅಂಕ ಗಳಿಸಿರುವುದು ಮತ್ತು ಈ ಹಿಂದೆ ನಡೆದಿದ್ದ KSRP ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
Scored 25 In KSRP, District Topper In VAO Exam: KEA Orders Probe Into Haveri Candidate
Online Desk
Updated on: 

ಬೆಂಗಳೂರು: ಇತ್ತೀಚೆಗೆ ನಡೆದ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬರು ಅತಿ ಹೆಚ್ಚು ಅಂಕ ಗಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಹಾವೇರಿ ಜಿಲ್ಲಾಡಳಿತಕ್ಕೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ. ಆರೆ, ಹೆಚ್ಚು ಅಂಕ ಬಂದರೆ ಅದರಲ್ಲಿ ತಪ್ಪೇನು? ಆತ ಚೆನ್ನಾಗಿ ಓದಿರಬಹುದು, ಅದಕ್ಕೆ ಆತ ಅಷ್ಟೊಂದು ಅಂಕ ಪಡೆದಿರಬಹುದು ಅಂತ ಅನಿಸೋದು ಸಹಜ! ಆದರೆ, ಇಲ್ಲೇ ಇರೋದು ನೋಡಿ ಅನುಮಾನ. ಅದುವೇ, ಆ ಅಭ್ಯರ್ಥಿ ವಿಎಒ ಪರೀಕ್ಷೆಗೂ ಮುನ್ನ ನಡೆದಿದ್ದ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ಗಳಿಸಿದ್ದ! ಹೌದು,  ವಿಎಒ ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಗಳಿಸಿರುವ ಅಭ್ಯರ್ಥಿಯೊಬ್ಬರು ಅದಕ್ಕೂ ಒಂದು ತಿಂಗಳು ಮುನ್ನ ನಡೆದಿದ್ದ KSRP ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವ್ಯಾಪಕ ಆಕ್ರೋಶದ ಬೆನ್ನಲ್ಲೇ ಕೆಇಎ ಈ ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಹಾವೇರಿ ಜಿಲ್ಲೆಯ ಹಾನಗಲ್ ಮೂಲದ 31 ವರ್ಷದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಅಕ್ಟೋಬರ್ 4ರಂದು ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ VAO ಪರೀಕ್ಷೆ ಬರೆದಿದ್ದರು. ಅದರಂತೆ, 200 ಅಂಕಗಳಿಗೆ ನಡೆದಿದ್ದ VAO ಪರೀಕ್ಷೆಯಲ್ಲಿ ಇವರು 151 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆದರೆ, ಈ ಹಿಂದೆ 100 ಅಂಕಗಳಿಗೆ ನಡೆದಿದ್ದ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಇವರು ಕೇವಲ 25 ಅಂಕಗಳನ್ನು ಪಡೆದಿದ್ದರು. ಅದರಲ್ಲೂ, ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 50 ಕ್ಕಿಂತ ಕಡಿಮೆ ಅಂಕ ಗಳಿಸಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣರಾಗಲು ಸುಮಾರು 13 ವರ್ಷ ತಗೆದುಕೊಂಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಓಎಂಆರ್ ಪ್ರತಿಯೊಂದಿಗೆ ಹರಿದಾಡಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಮುಂದುವರೆದು, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರ ಪ್ರಕಾರ, ಬಯೋಮೆಟ್ರಿಕ್ ಮತ್ತು ಮುಖಚಹರೆ ಗುರುತಿಸುವ ತಂತ್ರಜ್ಞಾನದ ಪ್ರಕಾರ ಮೂಲ ಅಭ್ಯರ್ಥಿಯೇ ಪರೀಕ್ಷೆ ಬರೆದಿರುವುದು ದೃಢಪಟ್ಟಿದೆ. ಅವರ ಒಎಂಆರ್ ಶೀಟ್ ಕೂಡ ನೈಜವಾಗಿದ್ದು, ಅಕ್ಟೋಬರ್ 5 ರಂದೇ ಅದನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಹಾಗಾಗಿ, ಕೇವಲ ಬಯೋಮೆಟ್ರಿಕ್ ದಾಖಲೆಗಳಿಂದಲೇ ಪರೀಕ್ಷಾ ಕೇಂದ್ರದೊಳಗೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಶಿಗ್ಗಾಂವಿಯ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಒಂದು ವೇಳೆ ಪರೀಕ್ಷಾ ಕೇಂದ್ರದಲ್ಲಿ ಲೋಪಗಳು ಅಥವಾ ಅಕ್ರಮ ಪತ್ತೆಯಾದರೆ ತಕ್ಷಣವೇ ಪೊಲೀಸರಿಗೆ ದೂರು ದಾಖಲಿಸಲು ಆದೇಶಿಸಲಾಗಿದೆ.

Scored 25 In KSRP, District Topper In VAO Exam: KEA Orders Probe Into Haveri Candidate
KPSC ನೇಮಕಾತಿ ಅಕ್ರಮ ತನಿಖೆ ಕೇವಲ ನಾಮಕಾವಸ್ಥೆಯಾಗಬಾರದು: ಎಚ್‌.ಡಿ ಕುಮಾರಸ್ವಾಮಿ ಆಕ್ರೋಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com