BIMS ಆಸ್ಪತ್ರೆಗೆ ಉಪ ಲೋಕಾಯುಕ್ತ ದಿಢೀರ್ ದಾಳಿ: ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ರೇಬೀಸ್ ಲಸಿಕೆ ಪತ್ತೆ, ಅಧಿಕಾರಿಗಳಿಗೆ ತರಾಟೆ..!

ಈ ವೇಳೆ ರೇಬೀಸ್‌ನಂತಹ ಗಂಭೀರ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಈಗಾಗಲೇ ಅವಧಿ ಮುಗಿದಿರುವ ಲಸಿಕೆಗಳನ್ನೇ ನೀಡುತ್ತಿರುವುದು ಕಂಡುಬಂದಿದೆ.
File photo
ಸಂಗ್ರಹ ಚಿತ್ರ
Updated on: 

ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಬಿ.ಐ.ಎಂ.ಎಸ್) ಔಷಧಾಲಯದ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಈ ವೇಳೆ ಆಸ್ಪತ್ರೆಯ ಫಾರ್ಮಸಿಯಲ್ಲಿ ರೋಗಿಗಳಿಗೆ ವಿತರಿಸಲು ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮುಗಿದ (Expired) ಔಷಧಗಳು ಹಾಗೂ ಆಂಟಿ-ರೇಬೀಸ್ (ನಾಯಿ ಕಡಿತದ) ಲಸಿಕೆಗಳು ಪತ್ತೆಯಾಗಿವೆ.

ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಉಪ ಲೋಕಾಯುಕ್ತರು, ಫಾರ್ಮಸಿಯಲ್ಲಿದ್ದ ಸ್ಟಾಕ್ ರಿಜಿಸ್ಟರ್ ಹಾಗೂ ಔಷಧಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಈ ವೇಳೆ ರೇಬೀಸ್‌ನಂತಹ ಗಂಭೀರ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಈಗಾಗಲೇ ಅವಧಿ ಮುಗಿದಿರುವ ಲಸಿಕೆಗಳನ್ನೇ ನೀಡುತ್ತಿರುವುದು ಕಂಡುಬಂದಿದೆ.

ಇದರಿಂದ ತೀವ್ರ ಕೆಂಡಾಮಂಡಲಗೊಂಡ ಉಪ ಲೋಕಾಯುಕ್ತರು, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಅಧಿಕಾರಿಗಳನ್ನು ಸ್ಥಳದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

File photo
ಶ್ರೀರಂಗಪಟ್ಟಣದಲ್ಲಿ 200 ಎಕರೆ ಭೂಕಬಳಿಕೆ ಬಯಲಿಗೆಳೆದ ಲೋಕಾಯುಕ್ತ; 9 ಜನರ ಬಂಧನ, ADLR ಅಧಿಕಾರಿ ಮೊಹಮ್ಮದ್ ಪರಾರಿ!

ಅವಧಿ ಮೀರಿದ ಲಸಿಕೆಗಳು ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಲಸಿಕೆಗಳು ಅವಧಿ ಮುಗಿದ ಬಳಿಕವೂ ಸಂಗ್ರಹದಲ್ಲಿರಲು ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ.

ಔಷಧ ಮತ್ತು ಲಸಿಕೆಗಳ ಅವಧಿಯನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆ ಇರಬೇಕು. ಅವಧಿ ಮೀರಿದ ದಾಸ್ತಾನುಗಳನ್ನು ವಿತರಿಸದಂತೆ ಅಥವಾ ಬಳಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಇಂತಹ ನಿರ್ಲಕ್ಷ್ಯ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X