Karnataka Rajyotsava Award 2026: ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!

ಕರ್ನಾಟಕ ರಾಜ್ಯ ರಚನೆಯಾಗಿ 71 ವರ್ಷ ಕಳದ ಹಿನ್ನೆಲೆಯಲ್ಲಿ ಈ ಬಾರಿ 71 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನುಒಳಗೊಂಡಿದೆ.
casual Images
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: 2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಪ್ರಕಟಿಸಿದೆ. ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 71ನೇ ರಾಜ್ಯೋತ್ಸವ ಆಚರಣೆ ಅಂಗವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ರಚನೆಯಾಗಿ 71 ವರ್ಷ ಕಳದ ಹಿನ್ನೆಲೆಯಲ್ಲಿ ಈ ಬಾರಿ 71 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನುಒಳಗೊಂಡಿದೆ.

ಜಾನಪದ

* ದಾವಲಸಾಬ ಅತ್ತಾರ

* ಗೌರಮ್ಮ

* ಪಾಂಡಪ್ಪ ದೇವಲಪ್ಪ ಲಮಾಣಿ

* ಈರಣ್ಣ ರುದ್ರಾಕ್ಷಿ

* ಎಂ. ಶಿವಲಿಂಗಪ್ಪ

* ಸುರೇಶ್ ರಾಮಚಂದ್ರ ಜೋಶಿ

ಚಲನಚಿತ್ರ /ಕಿರುತೆರೆ

ಕೆ. ವೆಂಕಟರಮಣ (ಬಾಬಜೀ)

ಅಶೋಕ್

ಕೆ. ಎಸ್. ರವೀಂದ್ರ ನಾಥ್

ಸಂಗೀತ

* ಡಾ. ಸಿ. ಎ. ಶ್ರೀಧರ್

* ಡಾ. ಎ. ನಾರಾಯಣಸ್ವಾಮಿ

* ವಿ. ಮುರುಳಿ

ಇನ್ನುಳಿದ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:

casual Images
2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X