ಇನ್ನು 3 ವರ್ಷ ಖಾಸಗಿ ಪಿಯು ಕಾಲೇಜು ಸ್ಥಾಪನೆಗೆ ಅನುಮತಿಯಿಲ್ಲ: ರಾಜ್ಯ ಸರ್ಕಾರ ನಿರ್ಧಾರ

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದ್ದು, 15 ದಿನಗಳೊಳಗೆ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರನ್ನು ಆಹ್ವಾನಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ಶೈಕ್ಷಣಿಕ ವರ್ಷಗಳವರೆಗೆ, ಅಂದರೆ 2027–28ರಿಂದ 2029–30ನೇ ಶೈಕ್ಷಣಿಕ ವರ್ಷದವರೆಗೆ ಹೊಸ ಖಾಸಗಿ ಪದವಿಪೂರ್ವ (PU Colleges) ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದ್ದು, 15 ದಿನಗಳೊಳಗೆ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರನ್ನು ಆಹ್ವಾನಿಸಿದೆ.

Representational image
ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ! Video

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ಶಿಕ್ಷಣ) (ಶೈಕ್ಷಣಿಕ, ನೋಂದಣಿ, ಆಡಳಿತ ಮತ್ತು ಅನುದಾನ ಇತ್ಯಾದಿ) ನಿಯಮಗಳು–2024ಕ್ಕೆ ತಿದ್ದುಪಡಿ ತರುವ ಮೂಲಕ ಈ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಹೊಸ ಖಾಸಗಿ ಪದವಿಪೂರ್ವ ಕಾಲೇಜುಗಳ ಸ್ಥಾಪನೆಗೆ ಮಿತಿ ವಿಧಿಸಬೇಕೆಂಬುದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘವು ಸರ್ಕಾರದ ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪದವಿಪೂರ್ವ ಕಾಲೇಜುಗಳ ಸೀಟುಗಳು ಭರ್ತಿಯಾಗದೆ ಖಾಲಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ, ಹೊಸ ಖಾಸಗಿ ಪಿಯು ಕಾಲೇಜುಗಳ ಸ್ಥಾಪನೆಗೆ ಕಡಿವಾಣ ಹಾಕುವಂತೆ ಸಂಘ ಇಲಾಖೆಯನ್ನು ಒತ್ತಾಯಿಸಿತ್ತು.ಪ್ರಸ್ತುತ ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಪದವಿಪೂರ್ವ (ಪಿಯು) ಕಾಲೇಜುಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X