ಭಾನುವಾರ ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ; ಇಲ್ಲಿದೆ ವೇಳಾಪಟ್ಟಿ

ಭಾರತೀಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್ಎಮ್’ವಿಟಿ) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್(ಸಿಎಸ್ಎಮ್’ಟಿ) ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್ ರೈಲಿಗೆ ಚಾಲನೆ ನೀಡಲು ಸಜ್ಜಾಗಿದೆ.
Vande Bharat train
ವಂದೇ ಭಾರತ್ ರೈಲು
Updated on: 

ಬೆಂಗಳೂರು: ನವೆಂಬರ್‌ 1 ಕನ್ನಡ ರಾಜ್ಯೋತ್ಸವದಂದು ಬಹು ನಿರೀಕ್ಷಿತ ಬೆಂಗಳೂರು - ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ ನೀಡಲಾಗುತ್ತಿದ್ದು, ಇನ್ಮುಂದೆ ಬೆಂಗಳೂರು-ಮುಂಬೈ ಪ್ರಯಾಣಿಕರು ಆರಾಮಾಗಿ ಮಲ್ಕೊಂಡು ಪ್ರಯಾಣ ಮಾಡಬಹುದು

ಭಾರತೀಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್(ಎಸ್ಎಮ್’ವಿಟಿ) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್(ಸಿಎಸ್ಎಮ್’ಟಿ) ನಡುವೆ ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್ ರೈಲಿಗೆ ಚಾಲನೆ ನೀಡಲು ಸಜ್ಜಾಗಿದ್ದು, ಈ ಎರಡು ಪ್ರಮುಖ ಮಹಾನಗರಗಳ ನಡುವಿನ ಸುದೀರ್ಘ ದೂರದ ರೈಲು ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಿದೆ.

ನವೆಂಬರ್ 1, 2026ರ ಭಾನುವಾರದಂದು 'ರೈಲು ಸಂಖ್ಯೆ 06503 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ ಉದ್ಘಾಟನಾ ಏಕಮುಖ ವಿಶೇಷ ರೈಲು ಸಂಚರಿಸಲಿದೆ. ಈ ರೈಲು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೇಕ್ ಅನ್ನು ಒಳಗೊಂಡಿದ್ದು, ನವೆಂಬರ್ 1 ರಂದು 12:15 ಗಂಟೆಗೆ ಎಸ್ಎಮ್’ವಿಟಿ ಬೆಂಗಳೂರಿನಿಂದ ಹೊರಟು, ನವೆಂಬರ್ 2, 2026 ರಂದು 06:15 ಗಂಟೆಗೆ ಸಿಎಸ್ಎಮ್’ಟಿ ಮುಂಬೈ ತಲುಪಲಿದೆ.

Vande Bharat train
ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನವೆಂಬರ್ 1ಕ್ಕೆ ಚಾಲನೆ!

ಮಾರ್ಗಮಧ್ಯದಲ್ಲಿ ಈ ಉದ್ಘಾಟನಾ ವಿಶೇಷ ರೈಲು ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ರಾಯಚೂರು, ಕೃಷ್ಣ, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ, ಲೋನಾವಾಲ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಎಸ್ಎಮ್’ವಿಟಿ ಬೆಂಗಳೂರು - ಸಿಎಸ್ಎಮ್ ಟಿ ಮುಂಬೈ ನಡುವೆ ನಿಯಮಿತ ಸೇವೆಗಳು

ಉದ್ಘಾಟನಾ ವಿಶೇಷ ರೈಲು ಸಂಚಾರದ ನಂತರ, ರೈಲು ಸಂಖ್ಯೆ 27652/27651 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ – ಎಸ್ಎಮ್’ವಿಟಿ ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್'ನ ನಿಯಮಿತ ಸೇವೆಗಳು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿವೆ.

ರೈಲು ಸಂಖ್ಯೆ 27652 ಎಸ್ಎಮ್’ವಿಟಿ ಬೆಂಗಳೂರು – ಸಿಎಸ್ಎಮ್’ಟಿ ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್, ನವೆಂಬರ್ 3, 2026 ರಿಂದ ಸೋಮವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ರೈಲು ಎಸ್ಎಮ್’ವಿಟಿ ಬೆಂಗಳೂರಿನಿಂದ 19:45 ಗಂಟೆಗೆ ಹೊರಟು, ಮರುದಿನ 11:55 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತಲುಪುವ ಮೊದಲು ಅನಂತಪುರ (22:28/22:30), ಗುಂತಕಲ್ (23:20/23:25), ರಾಯಚೂರು (01:03/01:05), ಯಾದಗಿರಿ (01:43/01:45), ಕಲಬುರಗಿ (03:08/03:10), ಸೋಲಾಪುರ (04:20/04:25), ಪುಣೆ (08:00/08:05) ಮತ್ತು ಕಲ್ಯಾಣ್ (10:42/10:44) ನಿಲ್ದಾಣಗಳಲ್ಲಿ ನಿಲ್ಲಲಿದೆ.

ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 27651 ಸಿಎಸ್ಎಮ್’ಟಿ ಮುಂಬೈ – ಎಸ್ಎಮ್’ವಿಟಿ ಬೆಂಗಳೂರು ವಂದೇ ಭಾರತ್ ಸ್ಲೀಪರ್ ಎಕ್ಸ್’ಪ್ರೆಸ್, ನವೆಂಬರ್ 2, 2026 ರಿಂದ ಮಂಗಳವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್’ನಿಂದ 20:10 ಗಂಟೆಗೆ ಹೊರಟು, ಮರುದಿನ 12:00 ಗಂಟೆಗೆ ಎಸ್ಎಮ್’ವಿಟಿ ಬೆಂಗಳೂರು ತಲುಪುವ ಮೊದಲು ಕಲ್ಯಾಣ್ (20:48/20:50), ಪುಣೆ (23:40/23:45), ಸೋಲಾಪುರ (03:00/03:05), ಕಲಬುರಗಿ (04:13/04:15), ಯಾದಗಿರಿ (05:08/05:10), ರಾಯಚೂರು (06:03/06:05), ಗುಂತಕಲ್ (07:30/07:35), ಮತ್ತು ಅನಂತಪುರ (08:38/08:40) ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೇಕ್ ಹೊಂದಿರಲಿದ್ದು, ಇದರಲ್ಲಿ 08 ಮೋಟಾರ್ ಕಾರ್ ಬೋಗಿಗಳು (MC), 04 ಟ್ರೇಲರ್ ಕಾರ್ ಬೋಗಿಗಳು (TC), 02 ನಾನ್-ಡ್ರೈವಿಂಗ್ ಟ್ರೇಲರ್ ಕಾರ್ ಬೋಗಿಗಳು (NDTC) ಮತ್ತು 02 ಡ್ರೈವಿಂಗ್ ಟ್ರೇಲರ್ ಕಾರ್ ಬೋಗಿಗಳು (DTC) ಇರಲಿವೆ.

ಈ ವಂದೇ ಭಾರತ್ ಸ್ಲೀಪರ್ ಸೇವೆಯು ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಲಭವಾದ ರಾತ್ರಿ ಪ್ರಯಾಣದ ಸೌಲಭ್ಯವನ್ನು ಒದಗಿಸುವ ಜೊತಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X