ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮುಂದುವರಿದ ಕಳ್ಳಬೇಟೆ: ಮೂವರ ಎನ್‌ಕೌಂಟರ್ ಪ್ರಕರಣ ಮಾಸುವ ಮುನ್ನವೇ, ಕಡವೆ ಬೇಟೆಯಾಡಿ ಪರಾರಿಯಾದ ಕಳ್ಳಬೇಟೆಗಾರರು

ಹನೂರು ಅರಣ್ಯದಲ್ಲಿ ಮತ್ತೊಂದು ಅಮಾನವೀಯ ಕಳ್ಳಬೇಟೆ: ಉಡುತೊರೆಹಳ್ಳ ಡ್ಯಾಂ ಬಳಿ, ನೀರು ಕುಡಿಯಲು ಬಂದ ಕಡವೆಯನ್ನು ನಾಡಬಂದೂಕಿನಿಂದ ಹೊಡೆದು ಮೂರು ತುಂಡು ಮಾಡಿದ ಬೇಟೆಗಾರರು ಪರಾರಿ; ಕಡವೆ ಮಾಂಸ ಜಪ್ತಿ, ಆರೋಪಿಗಳಿಗಾಗಿ ಅರಣ್ಯ ಸಿಬ್ಬಂದಿ ಶೋಧ.
Hunters Kill Sambar Deer Despite Recent Forest Encounter in Chamarajanagar
ಕಡವೆ ಮಾಂಸ ಜಪ್ತಿ ಮಾಡುವ ವೇಳೆ ಅಧಿಕಾರಿಗಳುOnline Desk
Updated on

ಹನೂರು (ಚಾಮರಾಜನಗರ): ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ, ಇದೇ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಅಮಾನವೀಯ ಕಳ್ಳಬೇಟೆ ಪ್ರಕರಣ ಬೆಳಕಿಗೆ ಬಂದಿದ್ದು, ನೀರು ಕುಡಿಯಲು ಬಂದಿದ್ದ ಕಡವೆಯನ್ನು ನಾಡಬಂದೂಕಿನಿಂದ ಶೂಟ್ ಮಾಡಿ, ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:

ಏನಿದು ಘಟನೆ?

ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರು ಕುಡಿಯಲು ಬಂದಿದ್ದ ಕಡವೆಯನ್ನು ನಾಡಬಂದೂಕಿನಿಂದ ಶೂಟ್ ಮಾಡಿ, ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದ ಘಟನೆ ನಡೆದಿದೆ. ಸೆಪ್ಟೆಂಬರ್ 1 ರಂದು ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ತಲೆಯ ಮೇಲೆ ಚೀಲ ಹೊತ್ತು ನಾಡಬಂದೂಕು ಹಿಡಿದು ಸಾಗುತ್ತಿದ್ದ ನಾಲ್ವರು ಶಂಕಿತರನ್ನು ಗುರುತಿಸಿದ್ದಾರೆ. ಇನ್ನು, ಅರಣ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಬೇಟೆಗಾರರು ಕಡವೆ ಮಾಂಸವಿದ್ದ ಚೀಲ ಹಾಗೂ ನಾಡಬಂದೂಕುಗಳನ್ನು ಸ್ಥಳದಲ್ಲೇ ಬಿಟ್ಟು ದಟ್ಟ ಅರಣ್ಯದೊಳಗೆ ಓಡಿ ಹೋಗಿದ್ದಾರೆ. ಎತನ್ಮಧ್ಯೆ, ಸ್ಥಳ ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಮೂರು ತುಂಡುಗಳಾಗಿ ಕತ್ತರಿಸಲಾಗಿದ್ದ ಕಡವೆಯ ಮಾಂಸ ಪತ್ತೆಯಾಗಿದ್ದು, ಅದನ್ನು ಅರಣ್ಯ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

Hunters Kill Sambar Deer Despite Recent Forest Encounter in Chamarajanagar
ಚಾಮರಾಜನಗರ ಅರಣ್ಯ ವಲಯದಲ್ಲಿ ಬೇಟೆಗಾರರ ಹಾವಳಿ: 16 ವರ್ಷಗಳಲ್ಲಿ 3,289 ಪ್ರಕರಣ ದಾಖಲು..!

ಮುಂದುವರೆದು, ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರಲ್ಲೂ, ಕಾಡುಪ್ರಾಣಿಗಳ ಬೇಟೆ ತಡೆಯಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ, ಬೇಟೆಗಾರರು ಮತ್ತೆ ಸಕ್ರಿಯರಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Hunters Kill Sambar Deer Despite Recent Forest Encounter in Chamarajanagar
ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು: ಚಾಮರಾಜನಗರ ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯವೇ ನಾಶ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com