ಪದವಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ ಡಿಜಿಟಲ್ ಜೊತೆಗೆ ಕೈಸೇರಲಿದೆ ಅಸಲಿ ಅಂಕಪಟ್ಟಿ!

ಪದವಿ ಮುಗಿಸಿ ಉದ್ಯೋಗ ಹುಡುಕುವ ತವಕದಲ್ಲಿದ್ದೀರಾ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಇಷ್ಟು ದಿನ, ಕಾಡುತ್ತಿದ್ದ ಬಹುದೊಡ್ಡ ತಲೆನೋವಿಗೆ ಈಗ ಸರ್ಕಾರ ಶಾಶ್ವತ ತೆರೆ ಎಳೆದಿದೆ. ಅದರಂತೆ, ಇನ್ಮುಂದೆ ಡಿಜಿಟಲ್ ಅಂಕಪಟ್ಟಿಯೊಂದಿಗೆ ಕೈಸೇರಲಿದೆ ಅಸಲಿ ಅಂಕಪಟ್ಟಿ!
Students
ವಿದ್ಯಾರ್ಥಿಗಳOnline Desk
Updated on

ಬೆಂಗಳೂರು: ನಕಲಿ ಅಂಕಪಟ್ಟಿಗಳಿಗೆ ಬ್ರೇಕ್ ಹಾಕಲು ಹಾಗೂ ಕಾಗದ ರಹಿತ ಆಡಳಿತ ತರಲು ಸರ್ಕಾರವು ಉನ್ನತ ಶಿಕ್ಷಣ ಇಲಾಖೆಯು ಪದವಿ ವಿದ್ಯಾರ್ಥಿಗಳಿಗೆ ಕೇವಲ ಡಿಜಿಲಾಕರ್ ಮತ್ತು UUCMS ಪೋರ್ಟಲ್ ಮೂಲಕ ಡಿಜಿಟಲ್ ಅಂಕಪಟ್ಟಿಗಳನ್ನು ಮಾತ್ರ ನೀಡಲು ಯೋಜನೆ ರೂಪಿಸಿತ್ತು. ಆದರೆ, ವಿದ್ಯಾರ್ಥಿಗಳ ನಿರಂತರ ಬೇಡಿಕೆ ಮತ್ತು ಪ್ರತಿಭಟನೆಗಳಿಗೆ ಮಣಿದಿರುವ ಕರ್ನಾಟಕ ಸರ್ಕಾರವು ಇನ್ಮುಂದೆ ಡಿಜಿಟಲ್ ರೂಪದ ಜೊತೆಗೆ ಭೌತಿಕ ಅಂಕಪಟ್ಟಿಗಳನ್ನು (Physical Marks Cards) ವಿತರಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ವರದಿಗಳ ಪ್ರಕಾರ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಉನ್ನತ ವ್ಯಾಸಂಗಕ್ಕೆ ದಾಖಲಾಗುವಾಗ, ಪ್ರಮುಖ ಕಂಪನಿಗಳ ಉದ್ಯೋಗ ಸಂದರ್ಶನ ಹಾಗೂ ಬ್ಯಾಂಕ್ ಸಾಲ ಪಡೆಯುವಾಗ ಹಲವು ಸಂಸ್ಥೆಗಳು ಕಡ್ಡಾಯವಾಗಿ ಮೂಲ ಭೌತಿಕ ಅಂಕಪಟ್ಟಿಗಳನ್ನೇ ಕೇಳುತ್ತಿದ್ದವು. ಯಾಕಂದ್ರೆ, ಡಿಜಿಟಲ್ ಪ್ರತಿಗಳನ್ನು ಮಾತ್ರ ನಂಬಲು ಹಲವರು ನಿರಾಕರಿಸಿದ್ದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಿತ್ತು. ಜೊತೆಗೆ, ವಿಶ್ವವಿದ್ಯಾಲಯಗಳು ಭೌತಿಕ ಅಂಕಪಟ್ಟಿ ನೀಡದಿದ್ದರೂ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಸುಮಾರು ₹400 ವರೆಗೆ ಮುದ್ರಣದ ಶುಲ್ಕವನ್ನು ವಸೂಲಿ ಮಾಡುತ್ತಿದ್ದವು ಎನ್ನುವ ಗಂಭೀರ ಆರೋಪವು ಕೇಳಿ ಬಂದಿತ್ತು.

ಭೌತಿಕ ಅಂಕಪಟ್ಟಿಗೆ ಓಕೆ!

ಮುಂದುವರೆದು, ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು. ಡಿಜಿಟಲ್ ಅಂಕಪಟ್ಟಿಗಳಲ್ಲಿಯೂ ಅಂಕ ತಿದ್ದುವುದು ಮತ್ತು ಡಿಜಿಟಲ್ ಸಹಿ ತಿರುಚುವ ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಮೊದಲಿನಂತೆ ಮುದ್ರಿತ ಅಂಕಪಟ್ಟಿ ನೀಡುವುದೇ ಸೂಕ್ತ ಎಂದು ಕುಲಪತಿಗಳು ಒಮ್ಮತದ ಸಲಹೆ ನೀಡಿದರು ಎನ್ನಲಾಗಿದೆ. ಅದರಂತೆ, ಇನ್ಮುಂದೆ ಕೇವಲ ಡಿಜಿಟಲ್ ಮಾಧ್ಯಮಕ್ಕೆ ಸೀಮಿತವಾಗದೆ ಸಾಂಪ್ರದಾಯಿಕ ಶೈಲಿಯ ಭೌತಿಕ ಮುದ್ರಿತ ಅಂಕಪಟ್ಟಿಗಳನ್ನೂ 2026-27ನೇ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದ 40ಕ್ಕೂ ಹೆಚ್ಚು ವಿವಿಗಳಲ್ಲಿ ವಿತರಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

Students
ಅನುಮತಿಯಿಲ್ಲದೆ 8 ವರ್ಷಗಳಿಂದ MA ಕ್ಲಾಸ್! ಜಾನಪದ ವಿವಿಯ 8 ಪಿಜಿ ಕೋರ್ಸ್‌ಗಳು ದಿಢೀರ್ ರದ್ದು: ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ; ಸಿಬ್ಬಂದಿಗೂ ಶಾಕ್

ಏತನ್ಮಧ್ಯೆ, ಭೌತಿಕ ಅಂಕಪಟ್ಟಿ ನೀಡಿದರೂ ಸಹ, ಭವಿಷ್ಯದ ತ್ವರಿತ ಪರಿಶೀಲನೆಗಾಗಿ ಸರ್ಕಾರದ ಡಿಜಿಲಾಕರ್ ಮತ್ತು ರಾಷ್ಟ್ರೀಯ ಶೈಕ್ಷಣಿಕ ಡಿಪಾಸಿಟರಿ (NAD) ಪೋರ್ಟಲ್‌ಗಳಲ್ಲಿ ಡಿಜಿಟಲ್ ಪ್ರತಿಗಳು ಎಂದಿನಂತೆ ಲಭ್ಯವಿರಲಿವೆ.

Students
500 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ! ಸಾಲದ ಸುಳಿಗೆ ಸಿಲುಕಿ ಆಯುರ್ವೇದಿಕ್ ಕಾಲೇಜ್ ಸೀಜ್; 2 ತಿಂಗಳಿಂದ ಬಂದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com