

ಬೆಂಗಳೂರು: ಟಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ನನ್ನು ಅಮಾನತು ಮಾಡಲೇಬೇಕೆಂದು ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಹೇಳಿದಂಗೆ ಇನ್‌ಸ್ಪೆಕ್ಟರ್ ಧನಂಜಯ್ನನ್ನು ಅಮಾನತು ಮಾಡಲು ಆಗಲ್ಲ ಎಂದು ಹೇಳುವ ಮೂಲಕ ಇನ್‌ಸ್ಪೆಕ್ಟರ್ ಧನಂಜಯ್ ನನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಗಣೇಶ ಕೂರಿಸುವ ವಿಚಾರವಾಗಿ ಮಸೀದಿ ಮುಂದೆ ಮೆರವಣಿಗೆ ಮಾಡಿ ಪಟಾಕಿ ಹೊಡೆದ್ರೆ ನಿಮ್ ಗ್ರಹಚಾರ ಬಿಡಿಸ್ತೀನಿ ಎಂದು ಇನ್‌ಸ್ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಇದಕ್ಕೆ ಬಿಜೆಪಿ ಧನಂಜಯ್ನನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿತ್ತು. ಈ ಬಗ್ಗೆ ಮಾತನಾಡಿರುವ ಗೃಹ ಸಚಿವರು, ಈ ಹಿಂದೆ ಅಶೋಕ್ ಗೃಹ ಸಚಿವರಾಗಿದ್ದಾಗಲೂ ಸಭೆ ಮಾಡಿಲ್ವಾ, ಸೂಚನೆ ಕೊಟ್ಟಿಲ್ವಾ? ಅಶೋಕ್ ಇದ್ದಾಗ ಏನು ನಿಯಮ ಇತ್ತೋ ಈಗಲೂ ಅದೇ ನಿಯಮ ಎಂದು ಹೇಳಿದರು.