ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಇನ್ನೂ ಇವಾಗ...........? ಕುತೂಹಲ ಕೆರಳಿಸಿದ ಪ್ರತಾಪ್ ಸಿಂಹ ಪೋಸ್ಟ್

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ ಹಾಕಿದ ಧಮ್ಕಿಗೆ ಉತ್ತರವಾಗಿ ಇಂದು (ಸೆ.18) ಹಿಂದೂ ಜಾಗರಣಾ ವೇದಿಕೆ ಶೋಭಾಯಾತ್ರೆ ನಡೆಸಲು ಮುಂದಾಗಿದೆ.
Pratap Simha
ಪ್ರತಾಪ್ ಸಿಂಹ
Updated on

ಮೈಸೂರು: ಬ್ರಿಟೀಷರು ಇದ್ದಾಗಲೇ ಗಣಪತಿ ಕೂರಿಸಿ ಮೆರವಣಿಗೆ ಮಾಡ್ದೋರು ನಾವು, ಈಗ ಮಾಡದೇ ಇರ್ತೀವಾ? ಟಿ.ನರಸೀಪುರದಲ್ಲಿ ಸಿಗೋಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ ಹಾಕಿದ ಧಮ್ಕಿಗೆ ಉತ್ತರವಾಗಿ ಇಂದು (ಸೆ.18) ಹಿಂದೂ ಜಾಗರಣಾ ವೇದಿಕೆ ಶೋಭಾಯಾತ್ರೆ ನಡೆಸಲು ಮುಂದಾಗಿದೆ.

ಟಿ. ನರಸೀಪುರ ಪಟ್ಟಣ ಇದೀಗ ಕೇಸರಿಮಯವಾಗ್ತಿದೆ. ಹಿಂದೂ ಜಾಗರಣಾ ವೇದಿಕೆ ಕರಪತ್ರಗಳನ್ನ ಮುದ್ರಿಸಿದ್ದು, ಅದರಲ್ಲಿ ಪೊಲೀಸ್ ಅಧಿಕಾರಿಯ ದರ್ಪಕ್ಕೆ ಉತ್ತರ ಕೊಡೋಣಾ ಬನ್ನಿ ಎಂದು ಜನರನ್ನ ಆಹ್ವಾನಿಸಲಾಗಿದೆ.

ಸಂಜೆ 4 ಗಂಟೆಗೆ ಶೋಭಾಯಾತ್ರೆ ಶುರುವಾಗಲಿದೆ. ಮಸೀದಿ ಮುಂದೆಯೇ ಈ ಯಾತ್ರೆ ಸಾಗಲಿದೆ. ಶೋಭಾಯಾತ್ರೆ ಸಿದ್ಧತೆ ಬೆನ್ನಲ್ಲೇ ಇದಕ್ಕೆ ಕೌಂಟರ್ ಆಗಿ ಸಂವಿಧಾನ ರಕ್ಷಣಾ ಸಮಿತಿ ಅವರು ಸಂವಿಧಾನ ರಕ್ಷಣಾ ಸೌಹಾರ್ದ ರಥ ಯಾತ್ರೆ ನಡೆಸಲು ನಿರ್ಧರಿಸಿದೆ.

Pratap Simha
ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com