'ಯಾರೂ ಗಾಬರಿಪಟ್ಟುಕೊಳ್ಳಬೇಕಾಗಿಲ್ಲ, ನಮಗೆ ರಾಜಕೀಯ ಮುಖ್ಯವಲ್ಲ,ಜನರ ಬದುಕು ಮುಖ್ಯ': ಮಂಗಳೂರಿನಲ್ಲಿ CM ಡಿ ಕೆ ಶಿವಕುಮಾರ್; Video

1934ರಲ್ಲಿ ಮಹಾತ್ಮ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದ ಸಮೀಪದಲ್ಲೇ ಈ ಕೆಫೆ ಇದೆ.
CM DKShivakumar
 on Friday interacted with Mangaluru-based social young creators over a traditional breakfast at Gandhi Square Cafe.
ಮಂಗಳೂರಿನ ಯುವ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಂವಾದ ನಡೆಸಿದ ಸಿಎಂ ಡಿ ಕೆ ಶಿವಕುಮಾರ್
Updated on

ಮಂಗಳೂರು : ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೆ ಮೊದಲ ಬಾರಿ ನಡೆಯುವ ರಾಜ್ಯ ವಿಶೇಷ ಸಚಿವ ಸಂಪ ಟ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಪುಟ ಸಚಿವರು ಆಗಮಿಸಿದ್ದಾರೆ. ಇಂದು ಶುಕ್ರವಾ ರ ಬೆಳಗ್ಗೆ ಸಿಎಂ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಅಲ್ಲಿಂದ ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಭೇಟಿ ನೀಡಿ ಕೆಫೆಯಲ್ಲಿ ಮಂಗಳೂರು ಶೈಲಿಯ ಬೆಳಗಿನ ಉಪಹಾರ ಸವಿದರು. ಮಂಗಳೂರಿನ ಯುವ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ನಗರದ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಂವಾದ ನಡೆಸಿದರು.

1934ರಲ್ಲಿ ಮಹಾತ್ಮ ಗಾಂಧೀಜಿ ಮಂಗಳೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳದ ಸಮೀಪದಲ್ಲೇ ಈ ಕೆಫೆ ಇದೆ.

ಸರಕಾರಿ ಅತಿಥಿ ಗೃಹದಲ್ಲಿ ಸು ದ್ದಿಗಾರರೊಂದಿಗೆ ಮಾತನಾಡಿದ ಸಿಎಂ ''ಮಹಾತ್ಮ ಗಾಂಧಿ ಅವರು ಉಳಿದಿದ್ದ ಮನೆಗೆ ಹೋಗಿದ್ದೆ ಅಲ್ಲಿ ಉಪಾಹಾರ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದು ಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ ಎಂದು ನಗುತ್ತಾ ಹೇಳಿದರು.

ಮಂಗಳೂರು ಬನ್ಸ್, ದೋಸೆ ಎಲ್ಲಾ ಸವಿದೆ. ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.

CM DKShivakumar
 on Friday interacted with Mangaluru-based social young creators over a traditional breakfast at Gandhi Square Cafe.
ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಾರ್ವಜನಿಕರು ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ಯಾರೂ ಗಾಬರಿಯಾಗಬೇಕಿಲ್ಲ.ನಮಗೆ ಜನರ ಬದುಕು ಮುಖ್ಯ, ನಾವು ಜನರ ಬದುಕಿನ ಮೇಲೆ ರಾಜಕೀಯ ಮಾ ಡುವವರು, ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ.ಯಾರೂ ಗಾಬರಿಪಡಬೇಕಿಲ್ಲ ಎಲ್ಲರ ಚಿಂ ತನೆಯನ್ನೊಳಗೊಂಡು ನಮ್ಮ ಸರಕಾರ ಕೆಲಸ ಮಾಡಲಿದೆ ಎಂದು ಸಿಎಂ ಹೇಳಿದರು .

ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು , ಸಿಎಂ ಭವ್ಯ ಸ್ವಾಗತಕ್ಕೆ ತಯಾರಿ ನಡೆಸಲಾಗಿದೆ. ಚೆಂಡೆ ಬ್ಯಾಂಡ್ ಸೆಟ್ ವಿವಿಧ ವೇಷಧಾರಿಗಳ ತಂಡಗಳು ಸಿದ್ದವಾಗಿ ಗಮನ ಸೆಳೆದೆವು . ಪಂಪ್ ವೆಲ್ ನಿಂದ ಪಡೀಲ್ ವರೆಗೆ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ಜಮಾಯಿಸಿದ್ದು , ಸಿಎಂ ನೋಡಲು ರಸ್ತೆ ಬದಿ ಕಾದು ನಿಂತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com