

ಚಿಕ್ಕಮಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ನಿರೀಕ್ಷೆಯಿದೆ. ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸುಳಿವು ಕೊಟ್ಟಿದ್ದಾರೆ.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಹಾಲಿನ ಖರೀದಿ ದರ ಏರಿಕೆ ಮಾಡಬೇಕು ಎಂದು ರೈತರಿಂದ ಬೇಡಿಕೆ ಹೆಚ್ಚಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ತಮಿಳುನಾಡಿನಲ್ಲಿ ಲೀಟರ್ ಹಾಲಿಗೆ 9 ರೂಯಿಂದ 10 ರೂ.ಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಉತ್ಪಾದಕರಿಗೆ ಲೀಟರ್ ಹಾಲಿಗೆ ರೂ.8 ರಿಂದ 9 ರೂಗೆ ಹೆಚ್ಚಳ ಮಾಡಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಆದ್ದರಿಂದ ಶೀಘ್ರವೇ ಹಾಲು ಒಕ್ಕೂಟಗಳ ಸಭೆ ನಡೆಸಲಾಗುವುದು ಎಂದು ಹೇಳಿದರು.
ಇಂಡಿ, ಬೂಸಾ ಬೆಲೆ ಜಾಸ್ತಿಯಾಗಿದ್ದು, ಮೇವು ಸಿಗದಂತಾಗಿದೆ. ಹಾಲು ಉತ್ಪಾದಕ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾಲು ಉತ್ಪಾದಕ ಸಂಘಗಳು ಕೂಡಾ ನಷ್ಟದಲ್ಲಿವೆ. ನೆರೆಯ ರಾಜ್ಯಗಳಲ್ಲಿನ ಹಾಲಿನ ದರ ಜಾಸ್ತಿ ಇರುವುದರಿಂದ ಅಲ್ಲಿಗೆ ಹೆಚ್ಚಿನ ಪ್ರಮಾಣದ ಹಾಲು ಹೋಗುತ್ತಿದೆ. ಇದರಿಂದ ನಂದಿನ ಹಾಲು ಉತ್ಪಾದಕರ ಸೊಸೈಟಿಗಳು ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಇವೆಲ್ಲಕ್ಕೂ ನಾವು ಶೀಘ್ರವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಅವರು ಹೇಳಿದರು.