ನಾಪತ್ತೆಯಾಗಿದ್ದ ಕಲಬುರಗಿ ಯುವತಿ ಬಾಂಗ್ಲಾದೇಶದಲ್ಲಿ ಪತ್ತೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು... Video

ಕಲಬುರಗಿಯ 22 ವರ್ಷದ ಸುರೇಖಾ ಪವಾರ್ ಎಂಬ ಯುವತಿ ತನ್ನ ಸ್ನೇಹಿತನೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿದ್ದು, ಆಕೆಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.
Missing young woman from Kalaburagi found in Bangladesh
ಪ್ರಿಯಾಂಕ್ ಖರ್ಗೆ
Updated on

ಕಲಬುರಗಿ: ಕಲಬುರಗಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ನೆಕ್ಸ್ಟ್ ಜನ್’ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಹೀರೆನಂದೂರ್ ತಾಂಡಾದ ಯುವತಿಯೊಬ್ಬರನ್ನು ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ಬಾಂಗ್ಲಾದೇಶಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದೆ.

ಕಲಬುರಗಿಯ 22 ವರ್ಷದ ಸುರೇಖಾ ಪವಾರ್ ಎಂಬ ಯುವತಿ ತನ್ನ ಸ್ನೇಹಿತನೊಂದಿಗೆ ಬಾಂಗ್ಲಾದೇಶಕ್ಕೆ ತೆರಳಿದ್ದು, ಆಕೆಯ ಪೋಷಕರು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸುರೇಖಾ ಪವಾರ್ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದು, ಇದೀಗ ಬಾಂಗ್ಲಾದೇಶದಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಆಕೆಯ ಪೋಷಕರು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Missing young woman from Kalaburagi found in Bangladesh
ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿದೆ - ಪ್ರಿಯಾಂಕ್ ಖರ್ಗೆ

ಸ್ಥಳೀಯ ಪೊಲೀಸ್ ಟ್ರ್ಯಾಕಿಂಗ್ ಪ್ರಕಾರ, ಆ ಮಹಿಳೆ ಬಾಂಗ್ಲಾದೇಶಕ್ಕೆ ಪ್ರಯಾಣಿಸಿರುವುದು ಮತ್ತು ಗಾರ್ಮೆಂಟ್ಸ್ ಕಾರ್ಖಾನೆಯ ಕೆಲಸಗಾರನೊಂದಿಗೆ ಇರುವುದು ಪತ್ತೆಯಾಗಿದೆ.

ಮನೆ ಬಿಟ್ಟು ಹೋದ ಬಳಿಕ ಯುವತಿ ತನ್ನ ಸಹೋದರನಿಗೆ ಪತ್ರ ಬರೆದು ತನಗಾಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದಿದ್ದು, ಪೋಷಕರು ಹಿಂದೆ ದೂರು ನೀಡಿದ್ದಾಗ ಕಾನೂನು ಪ್ರಕಾರ ಪೊಲೀಸರು ಯುವತಿಯನ್ನು ಸಂಪರ್ಕಿಸಿದ ವೇಳೆ ತಾನು ಕಾಣೆಯಾಗಿಲ್ಲ, ಸ್ವಇಚ್ಛೆಯಿಂದಲೇ ಬಂದಿರುವುದಾಗಿ ತಿಳಿಸಿದ್ದಾಳೆ. ಹೀಗೆ ಸ್ವಂತ ನಿರ್ಧಾರದಿಂದ ಹೋದಾಗ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com