ರಾಮನಗರ: SP ಕಚೇರಿಯ ಕಟ್ಟಡದಿಂದ ಜಿಗಿದು Pocso ಪ್ರಕರಣ​ ಆರೋಪಿ ದೈಹಿಕ ಶಿಕ್ಷಕ ಆತ್ಮಹತ್ಯೆ!

ಎಸ್​ಪಿ ಕಚೇರಿಯ ಕಟ್ಟಡದಿಂದ ಹಾರಿ Pocso ಪ್ರಕರಣದ ಆರೋಪಿ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತನನ್ನು ಚನ್ನಪಟ್ಟಣದ ಅಕ್ಕೂರು ಹೊಸಹಳ್ಳಿ ಗ್ರಾಮದ ನಿವಾಸಿ ದೈಹಿಕ ಶಿಕ್ಷಕ ಶಶಿಧರ್ ಎಂದು ಗುರುತಿಸಲಾಗಿದೆ.
Representation purpose only
ಸಂಗ್ರಹ ಚಿತ್ರ
Updated on

ರಾಮನಗರ: ಎಸ್​ಪಿ ಕಚೇರಿಯ ಕಟ್ಟಡದಿಂದ ಹಾರಿ Pocso ಪ್ರಕರಣದ ಆರೋಪಿ ದೈಹಿಕ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತನನ್ನು ಚನ್ನಪಟ್ಟಣದ ಅಕ್ಕೂರು ಹೊಸಹಳ್ಳಿ ಗ್ರಾಮದ ನಿವಾಸಿ ದೈಹಿಕ ಶಿಕ್ಷಕ ಶಶಿಧರ್ ಎಂದು ಗುರುತಿಸಲಾಗಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಶಶಿಧರ್ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ರಾಮನಗರದ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಶಶಿಧರ್​ ಅವರನ್ನು ಪೊಲೀಸರು ಬಂಧಿಸಿದ್ದರು.

ಹೆಚ್ಚಿನ ವಿಚಾರಣೆಗಾಗಿ ಬೆಳಗ್ಗೆ ಮೆಡಿಕಲ್ ಪರೀಕ್ಷೆ ಮಾಡಿಸಿ, ಬೆರಳಚ್ಚು ಪಡೆಯಲು ಎಸ್​ಪಿ ಕಚೇರಿಗೆ ಕರೆತಂದಿದ್ದರು‌. ಈ ವೇಳೆ ಆರೋಪಿ 3ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಶಶಿಧರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಶಶಿಧರ್ ನನ್ನು ಬಂಧಿಸಲಾಗಿತ್ತು.

Representation purpose only
ವಿಜಯಪುರ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಮಹಿಳೆ ಹಿಂದೆ ಬಿದ್ದು ಸಿಕ್ಕಿಬಿದ್ದ ರೋಚಕ ಕಹಾನಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com