ಸುಮ್ಮನೆ ಫೋಟೋ ಹಿಡಿದುಕೊಂಡು ತಿರುಗಾಡೋರೆಲ್ಲಾ ಅಂಬೇಡ್ಕರ್ ವಾದಿಗಳಾಗಲ್ಲ: ಚೇತನ್ ಅಹಿಂಸಾ ಆಕ್ರೋಶ

ಬಾಬಾ ಸಾಹೇಬ್ ಅಂಬೇಡ್ಕರ್ ಒಗ್ಗೆ ನಿಮಗೆ ಏನು ಗೊತ್ತಿಲ್ಲ. ಮೊದಲು ಅಂಬೇಡ್ಕರ್ ಬಗ್ಗೆ ಓದಿಕೊಳ್ಳಿ ಎಂದು ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ.
Chethan Kumar
ಚೇತನ್ ಅಹಿಂಸಾ
Updated on

ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಒಗ್ಗೆ ನಿಮಗೆ ಏನು ಗೊತ್ತಿಲ್ಲ. ಮೊದಲು ಅಂಬೇಡ್ಕರ್ ಬಗ್ಗೆ ಓದಿಕೊಳ್ಳಿ ಎಂದು ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿ ಅವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಫೋಟೋ ಹಿಡಿದುಕೊಂಡಾಕ್ಷಣ ಅವರೆಲ್ಲಾ ಅಂಬೇಡ್ಕರ್ ವಾದಿಗಳಾಗಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಚೇತನ್ ಅಹಿಂಸಾ, ಇವಾಗೆಲ್ಲ ಸುಲಭವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋವನ್ನು ಎಲ್ಲರೂ ಇಟ್ಟುಕೊಳ್ಳುತ್ತಾರೆ. ಆದರೆ ಬಾಬಾ ಸಾಹೇಬರನ್ನು ಓದಿಲ್ಲ. ಅವರ ವಿಚಾರವನ್ನು ತಿಳಿದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರನ್ನ ಒಂದು ಜಾತಿಗೆ ಸೀಮಿತ ಮಾಡೋಕಾಗಲ್ಲ. ಆದರೆ ಅವರ ವಿಚಾರವನ್ನು ಒಂದು ಸಿದ್ದಾಂತಕ್ಕೆ ಅನುಗುಣವಾಗಿ ತರಬಹುದು. ರೈಟ್ ವಿಂಗ್ ಅನ್ನೊಂದು ಅಂಬೇಡ್ಕರ್ ವಾದಿಗಳಲ್ಲ. ಲೆಫ್ಟ್ ವಿಂಗ್, ಕಮ್ಯೂನಿಸ್ಟರು ಅಂಬೇಡ್ಕರ್ ವಾದಿಗಳಲ್ಲ. ಮಧ್ಯಪಂಥಿ ಮನುವಾದಿಗಳು, ನಮ್ಮ ಸರ್ಕಾರ, ಕಾಂಗ್ರೆಸ್, ಜೆಡಿಎಸ್, ಜೆಡಿಯು ಇವರೂ ಅಂಬೇಡ್ಕರ್ ವಾದಿಗಳಲ್ಲ ಎಂದು ಹೇಳಿದರು.

Chethan Kumar
ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ ಹಾಕಿದ್ದ ಇನ್ಸ್‌ಪೆಕ್ಟರ್‌ ಧನಂಜಯ್‌ಗೆ ಮತ್ತೊಂದು ಸಂಕಷ್ಟ; ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಯಾರಾದರೂ ನಿಜವಾದ ಅಂಬೇಡ್ಕರ್ ವಿಚಾರಗಳ ಮುಖಾಂತರ ಉತ್ತಮ ಸಮಾಜ ಕಟ್ಟುದ್ದಿದ್ದಾರೆ. ಅಂದರೆ ಅದು ನಮ್ಮ ಸತ್ಯಪಂಥ ಸಮಾನತವಾದಿಗಳು ಮಾತ್ರ. ನೀವುಗಳು ಫೋಟೋ ಇಟ್ಕೋಡಾಕ್ಷಣ ನೀವು ಒಂದು ರೀತಿ ಅಂಬೇಡ್ಕರ್ ವಾದಿಗಳು ಅಂತ ನಾವು ನೋಡಲ್ಲ. ನೀವು ಪುತ್ಥಳಿ ಕಟ್ಟಿದಾಕ್ಷಣ ಅಥವಾ ಪುತ್ಥಳಿಗೆ ಹೂವಿನ ಹಾರ ಹಾಕಿದಾಕ್ಷಣ ಜನರಿಗೆ ಅಥವಾ ಸಮಾಜಕ್ಕೆ ಒಳ್ಳೆದಾಗುತ್ತೆ ಅಂತ ನಾವು ಭಾವಿಸಲ್ಲ. ಬಾಬಾ ಸಾಹೇಬರ ವಿಚಾರಗಳು ಬೇಕು. ಅವರ ವಿಷನ್ ಬೇಕು. ಅವರ ಕನಸನ್ನ ನನಸು ಮಾಡಬೇಕು. ಆ ಕನಸೆ ಒಂದು ಸಮ ಸಮಾಜ. ಆ ದಿಕ್ಕಿನಲ್ಲೇ ನಾವು ಕೆಲಸ ಮಾಡ್ತೀವಿ. ಜನರ ಮುಂದೆ ಜಾಗೃತಿ ಮುಖಾಂತರ, ಹೋರಾಟದ ಮುಖಾಂತರ, ಸೇವೆ ಮುಖಾಂತರ ಪಕ್ಷ ಸಂಘಟನೆ ಮಾಡಿ. ಒಂದು ಬಲಿಷ್ಠವಾದ ಪರ್ಯಾಯ, ಪರಿಹಾರ, ಪರಿವರ್ತನೆ ತರುವುದೇ ನಮ್ಮ ಗುರಿ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಹಿಂದೆ ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ, ನೀವು ಕೇವಲ ನೀಲಿ ಶಾಲು ಹೊದ್ದು ಉದರ ನಿಮಿತ್ತವಾಗಿ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನೂ ಗೊತ್ತಿಲ್ಲ, ಮೊದಲು ಅಂಬೇಡ್ಕರ್ ಓದಿ ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಅಲ್ಲದೆ, ಶೋಷಿತರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯ ಪದಾಧಿಕಾರಿಗಳನ್ನು ಹಣಕ್ಕಾಗಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡುವವರು ಎಂದು ಸುಳ್ಳು ಆರೋಪ ಹೊರಿಸಿ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com