'ಈ ದೇಶವನ್ನು ದೇವರೇ ಕಾಪಾಡಬೇಕು; 5 ಗಂಟೆಯ ಪ್ರಯಾಣ ನರಕ': ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!

ಸಾರ್ವಜನಿಕ ಸ್ಥಳಗಳಲ್ಲಿನ ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಅವರ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
BJP MP Tejasvi Surya’s wife recounts ‘traumatic’ train ride, says 40 men talked loudly for 5 hours
ತೇಜಸ್ವಿ ಸೂರ್ಯ- ಶಿವಶ್ರೀ
Updated on

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಇತ್ತೀಚೆಗೆ ರೈಲು ಪ್ರಯಾಣದ ವೇಳೆ ತಮಗೆ ಎದುರಾದ ಅತ್ಯಂತ ಆಘಾತಕಾರಿ ಹಾಗೂ ಕಹಿ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿನ ನಾಗರಿಕ ಪ್ರಜ್ಞೆಯ ಕೊರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಅವರ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಸುಮಾರು ಐದು ಗಂಟೆಗಳ ರೈಲು ಪ್ರಯಾಣ ನರಕವಾಗಿತ್ತು. ಸಹಪ್ರಯಾಣಿಕರ ಗದ್ದಲದಿಂದ ತಮಗೆ ತೀವ್ರ ತೊಂದರೆಯಾಯಿತು ಎಂದು ಶಿವಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

BJP MP Tejasvi Surya’s wife recounts ‘traumatic’ train ride, says 40 men talked loudly for 5 hours
'ನನ್ನ ಪತಿ ಮಾಡಿಸುವ ಕೆಲಸಗಳು'; Royal Enfield ಇ-ಬೈಕ್ ಏರಿದ ತೇಜಸ್ವಿ ಸೂರ್ಯ ಪತ್ನಿ Sivasri Skanda; Video

ಶಿವಶ್ರೀ ಪೋಸ್ಟ್ ನಲ್ಲಿ ಏನಿದೆ?

ಇಂದು ನನಗೆ ಅತ್ಯಂತ ಆಘಾತಕಾರಿ ರೈಲು ಪ್ರಯಾಣವಾಯಿತು. ಕಲಾವಿದರಾದ ನಮಗೆ ನಿರಂತರವಾಗಿ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ಹೊಸ ಚಿಂತನೆಗಳು ಹಾಗೂ ಸೃಜನಶೀಲ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲು ನಮಗೆ ಮೌನ ಮತ್ತು ಶಾಂತಿಯುತ ವಾತಾವರಣ ಅತ್ಯಗತ್ಯ. ಆದರೆ, ನನ್ನ ಬೋಗಿಯಲ್ಲಿದ್ದ ಜನರ ನಡವಳಿಕೆ ಶಾಂತಿಯುತ ಪ್ರಯಾಣದ ನನ್ನ ನಿರೀಕ್ಷೆಯನ್ನು ಸಂಪೂರ್ಣವಾಗಿ ಸುಳ್ಳು ಮಾಡಿತು ಎಂದು ಬರೆದುಕೊಂಡಿದ್ದಾರೆ.

ತಾವು ಪ್ರಯಾಣಿಸುತ್ತಿದ್ದ 56 ಆಸನಗಳ ಬೋಗಿಯಲ್ಲಿ ಸುಮಾರು 40 ಮಧ್ಯವಯಸ್ಕ ಪುರುಷರ ಗುಂಪೊಂದು ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಂಡಿತ್ತು. ಈ ಗುಂಪು ಸುಮಾರು ಐದು ಗಂಟೆಗಳ ಕಾಲ ನಿರಂತರವಾಗಿ ಜೋರಾಗಿ ಮಾತನಾಡುವುದು, ನಗುವುದು ಮತ್ತು ಕೂಗಾಡುವುದನ್ನು ಮುಂದುವರಿಸಿತ್ತು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಭಾರತದಲ್ಲಿ ಇಂತಹ ದೊಡ್ಡ ಗುಂಪುಗಳನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ" ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಉನೋ ಆಟದಿಂದ ಮತ್ತಷ್ಟು ಗದ್ದಲ

ಪ್ರಯಾಣದ ವೇಳೆ ಗುಂಪಿನ ಕೆಲವರು UNO ಕಾರ್ಡ್ ಆಟ ಆಡಲು ಆರಂಭಿಸಿದಾಗ ಪರಿಸ್ಥಿತಿ ಮತ್ತಷ್ಟು ಕಿರಿಕಿರಿಯಾಗಿತ್ತು ಎಂದು ಶಿವಶ್ರೀ ಹೇಳಿದ್ದಾರೆ. ಬಳಿಕ ಅವರು ಟಿಟಿಇಗೆ ಈ ಬಗ್ಗೆ ದೂರು ನೀಡಿದರು.

ಟಿಟಿಇ ಗುಂಪಿಗೆ ಮನವಿ ಮಾಡಿದಾಗ ಅವರು ಕೆಲಕಾಲ ಆಟವನ್ನು ನಿಲ್ಲಿಸಿದರು ಎನ್ನಲಾಗಿದೆ. ಆದರೆ ಸ್ವಲ್ಪ ಸಮಯದ ಬಳಿಕ ಟಿಟಿಇ ಮತ್ತೆ ಆ ಗುಂಪಿನೊಂದಿಗೆ ಮಾತನಾಡಿದ್ದು, ಹಾಸ್ಯ-ತಮಾಷೆಯ ವಾತಾವರಣ ನಿರ್ಮಾಣವಾಯಿತು ಎಂದು ಶಿವಶ್ರೀ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ನಂತರ ಗುಂಪು ಮತ್ತೆ ನಗುತ್ತಾ, ಮಾತನಾಡುತ್ತಾ ಮುಂದುವರಿಯಿತು ಎಂದು ಅವರು ಹೇಳಿದ್ದಾರೆ.

ನಾಗರಿಕ ಪ್ರಜ್ಞೆಯ ಆಟದಲ್ಲಿ ಸೋತೆವು!

ಈ ಇಡೀ ಘಟನೆಯಿಂದ ತೀವ್ರ ಬೇಸರಗೊಂಡ ಶಿವಶ್ರೀ ಸ್ಕಂದಪ್ರಸಾದ್ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ನಡೆದುಕೊಳ್ಳುವ ರೀತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸಾರ್ವಜನಿಕ ಸ್ಥಳಗಳಲ್ಲಿ ಜನರು ಇತರರ ವೈಯಕ್ತಿಕ ಜಾಗವನ್ನು ಮತ್ತು ನೆಮ್ಮದಿಯನ್ನು ಗೌರವಿಸುವುದಿಲ್ಲ ಎಂಬುದನ್ನು ನೋಡಲು ತುಂಬಾ ದುಃಖವಾಗುತ್ತದೆ. ಸಾರ್ವಜನಿಕವಾಗಿ ನಾವು ಇದ್ದಾಗ ಕೂಗಾಡುವುದನ್ನು, ಗಟ್ಟಿಯಾಗಿ ಮಾತನಾಡುವುದನ್ನು ಮತ್ತು ಇತರರಿಗೆ ತೊಂದರೆ ಕೊಡುವುದನ್ನು ತಡೆಯಬೇಕು. ಇಲ್ಲಿ ಯಾರು ಗೆದ್ದರು ಎಂಬುದು ಮುಖ್ಯವಲ್ಲ, ಆದರೆ ಒಬ್ಬ ಭಾರತೀಯಳಾಗಿ ನಾನು ಅವರೊಂದಿಗೆ ನಾಗರಿಕ ಪ್ರಜ್ಞೆಯ ಆಟದಲ್ಲಿ ಸೋತಿದ್ದೇನೆ. ಒಂದು ರಾಷ್ಟ್ರವಾಗಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ನಡವಳಿಕೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತೇವೆಯೋ ತಿಳಿಯುತ್ತಿಲ್ಲ... ಈ ದೇಶವನ್ನು ದೇವರೇ ಕಾಪಾಡಲಿ!" ಎಂದು ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com