

ಚಿಕ್ಕಮಗಳೂರು: ಎರಡು ತೆಂಗಿನ ಮರಗಳನ್ನು ಕಡಿದ ವಿಚಾರಕ್ಕೆ ಆರಂಭವಾದ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾದ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ.
ಕೇವಲ ಎರಡು ತೆಂಗಿನ ಮರಗಳನ್ನು ಕಡಿದ ಎಂಬ ಕಾರಣಕ್ಕೆ ಮಾವ, ತನ್ನ ಅಳಿಯನನ್ನು ಅದೇ ಮಚ್ಚಿನಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ವ್ಯಕ್ತಿಯನ್ನು ದೇವರಾಜ್ ನಾಯ್ಕ್ (35) ಎಂದು ಗುರುತಿಸಲಾಗಿದ್ದು, ಮಾವ ರಾಜಾನಾಯ್ಕ್ ಕೊಲೆಗೈದ ಆರೋಪಿಯಾಗಿದ್ದಾನೆ.
ಮಾವ, ಅಳಿಯನ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹೀಗೆ ಜಗಳವಾಡಿ ಆಕ್ರೋಶಗೊಂಡ ಅಳಿಯ ದೇವರಾಜ್, ಮಾವನ ಹೊಲದಲ್ಲಿದ್ದ ಎರಡು ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ರಾಜಾನಾಯ್ಕ್, ಅದೇ ಮಚ್ಚಿನಿಂದ ಕೊಚ್ಚಿ ದೇವರಾಜ್‌ನನ್ನು ಕೊಲೆಗೈದಿದ್ದಾನೆ.
ಈ ಸಂಬಂಧ ಪಂಚನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಾನಾಯ್ಕ್‌ನ ಮಗಳನ್ನೇ ದೇವರಾಜ್ ಮದುವೆಯಾಗಿದ್ದ. ಅದರೆ ದೇವರಾಜ್ ಜತೆ ಜಗಳವಾಡಿದ್ದ ಪತ್ನಿ, ಗಂಡನನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ ಎಂದು ತಿಳಿದುಬಂದಿದೆ.