ಅಟ್ಟಿಕಾ ಗೋಲ್ಡ್‌ ಕಂಪನಿಗೆ ಸಂಬಂಧಿಸಿದ 16 ಸ್ಥಳಗಳಲ್ಲಿ ಇಡಿ ಶೋಧ: 7.52 ಲಕ್ಷ ರೂ. ಜಪ್ತಿ!

ಜಾರಿ ನಿರ್ದೇಶನಾಲಯ (ED) ಸೆಪ್ಟೆಂಬರ್ 23 ಮತ್ತು 24 ರಂದು ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ 'ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್' ಮತ್ತಿತರಿಗೆ ಸಂಬಂಧಿಸಿದ 16 ಸ್ಥಳಗಳಲ್ಲಿ ಶೋಧ ನಡೆಸಿದೆ.
Bommanahalli Babu
ಬೊಮ್ಮನಹಳ್ಳಿ ಬಾಬು
Updated on: 

ಬೆಂಗಳೂರು: ಕಳವು ಮಾಡಿದ ಚಿನ್ನವನ್ನು ಖರೀದಿಸುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಸೆಪ್ಟೆಂಬರ್ 23 ಮತ್ತು 24 ರಂದು ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ 'ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್' ಮತ್ತಿತರಿಗೆ ಸಂಬಂಧಿಸಿದ 16 ಸ್ಥಳಗಳಲ್ಲಿ ಶೋಧ ನಡೆಸಿದೆ.

ಈ ವೇಳೆ ಇಡಿ ಅಧಿಕಾರಿಗಳು 7.52 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ವಸ್ತುಗಳು ಸೇರಿದಂತೆ ಅಪರಾಧ ಕೃತ್ಯದ ಮೂಲಕ ಗಳಿಸಿದವು ಎಂದು ಶಂಕಿಸಲಾದ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.

ಕಂಪನಿಯ ನಿರ್ದೇಶಕರು, ಮಾಜಿ ನಿರ್ದೇಶಕರು ಮತ್ತು ಷೇರುದಾರರ ನಿವಾಸಗಳು ಹಾಗೂ ಕಂಪನಿಯ ಪ್ರಧಾನ ಕಚೇರಿ, ಶಾಖೆಗಳು ಮತ್ತು ಅದಕ್ಕೆ ಸಂಬಂಧಿಸಿದ ಇತರ ಸ್ಥಳಗಳಲ್ಲಿ ಈ ಶೋಧ ಕಾರ್ಯವನ್ನು ನಡೆಸಲಾಯಿತು.

Bommanahalli Babu
ಕದ್ದ ಚಿನ್ನ ಖರೀದಿ ಪ್ರಕರಣ: Attika Gold Company ಮಾಲೀಕ ಅಟ್ಟಿಕಾ ಬಾಬು ಬಂಧನ

ಕಳವು ಮಾಡಿದ ಚಿನ್ನದ ವಸ್ತುಗಳನ್ನು ಖರೀದಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅವುಗಳ ವಹಿವಾಟು ನಡೆಸುವ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅನೇಕ ಎಫ್‌ಐಆರ್‌ಗಳು (FIR) ಮತ್ತು ದೋಷಾರೋಪಣಾ ಪಟ್ಟಿಗಳ (chargesheets) ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ಶೋಧ ಕಾರ್ಯ ನಡೆದ ಸಂದರ್ಭದಲ್ಲಿ ಪಿ.ಎಸ್. ಅಯೂಬ್ (ಅಲಿಯಾಸ್ ಬೊಮ್ಮನಹಳ್ಳಿ ಬಾಬು) ಒಬೆದುಲ್ಲಾ ಎ. ಮೊಹಮ್ಮದ್ ಸಲ್ಮಾನ್ ಎ. ಮತ್ತು ಅರ್ಬಿನ್ ತಾಜ್ ಎ. ಸೇರಿದಂತೆ ಪ್ರಮುಖ ವ್ಯಕ್ತಿಗಳು ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ಇಡಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com