ವೃದ್ಧ ವ್ಯಕ್ತಿ ಕೊಂದು ಬೆಂಗಳೂರಿಗರ ನಿದ್ದೆಗೆಡಿಸಿದ್ದ ಆನೆ ಕೊನೆಗೂ ಅರಣ್ಯಕ್ಕೆ ವಾಪಸ್..!

ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಕಾರ್ಯಾಚರಣೆ ನಡೆಯುವ ರಾತ್ರಿ ವೇಳೆ ಹೊರಗೆ ತೆರಳದಂತೆ ಸೂಚಿಸಲಾಗಿತ್ತು.
Nagaraj
ಮೃತ ನಾಗರಾಜ್
Updated on: 

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಕಾಡಾನೆ ಕೊನೆಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗಿದೆ.

ಮೈಸೂರು ರಸ್ತೆಯ ಅಂಚೆಪಾಳ್ಯ ಬಳಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ನಾಗರಾಜ್ (60) ಎಂಬುವವರನ್ನು ತುಳಿದು ಕೊಂದಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಮರಳಿ ಕಾಡಿಗೆ ಓಡಿಸಿದ್ದಾರೆ.

ಕಾರ್ಯಾಚರಣೆ ವೇಳೆ ನಗರದ ರಸ್ತೆಗಳು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ನೈಸ್ ರಸ್ತೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಕಾರ್ಯಾಚರಣೆ ನಡೆಯುವ ರಾತ್ರಿ ವೇಳೆ ಹೊರಗೆ ತೆರಳದಂತೆ ಸೂಚಿಸಲಾಗಿತ್ತು.

ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ ಮಾತನಾಡಿ, ಆನೆ ಬಿಎಂ ಕಾವಲ್ ಅರಣ್ಯ ಪ್ರದೇಶದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದತ್ತ ತೆರಳಲು ದಾರಿ ಹುಡುಕುತ್ತಿತ್ತು. ಅರಣ್ಯ ಸಿಬ್ಬಂದಿ ಅದಕ್ಕೆ ಸೂಕ್ತ ಮಾರ್ಗ ತೋರಿಸಿ ಉದ್ಯಾನವನದತ್ತ ಕಳುಹಿಸಿದರು. ಜನರ ಸುರಕ್ಷತೆ ಹಾಗೂ ಸಂಚಾರ ಪರಿಸ್ಥಿತಿಯ ಮೇಲೆ ನಿಗಾ ಇರಿಸಲು ಡ್ರೋನ್‌ಗಳನ್ನು ಬಳಸಲಾಗಿತ್ತು ಎಂದು ಹೇಳಿದ್ದಾರೆ.

Nagaraj
ಬೆಂಗಳೂರು: ಕೆಂಗೇರಿಯಲ್ಲಿ ಕಾಡಾನೆ ದಾಳಿಗೆ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಬಲಿ; ಮೃತನ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ; Video

ಆನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕೇ ಎಂಬ ಬಗ್ಗೆಯೂ ಅರಣ್ಯ ಇಲಾಖೆ ಈ ಹಿಂದೆ ಚರ್ಚಿಸಿತ್ತು. ಆದರೆ, ಆನೆಯ ಚಲನವಲನ ಗಮನಿಸಿದ ಬಳಿಕ ಅದಕ್ಕಾಗಿ ಪ್ರತ್ಯೇಕ ದಾರಿಯನ್ನು ನಿರ್ಮಿಸಿ ಸುರಕ್ಷಿತವಾಗಿ ಬನ್ನೇರುಘಟ್ಟದತ್ತ ಸಾಗಿಸಲಾಯಿತು.

ಸೋಮವಾರ ಇಡೀ ದಿನ ಆನೆಯ ಚಲನವಲನದ ಮೇಲೆ ನಿಗಾ ಇರಿಸಿದ್ದ ಆನೆ ಕಾರ್ಯಪಡೆಯ ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಆನೆಗೆ ರೇಡಿಯೋ ಕಾಲರ್ ಅಳವಡಿಸುವ ಅಗತ್ಯವಿಲ್ಲದ ಕಾರಣ ಅದನ್ನು ಅಳವಡಿಸಿಲ್ಲ ಎಂದು ತಿಳಿಸಿದರು.

ಆದಾಗ್ಯೂ, ಆನೆಯ ಚಲನವಲನ ಹಾಗೂ ಅದರ ವರ್ತನೆಯನ್ನು ಗಮನಿಸಲು ನಿರಂತರ ನಿಗಾ ಇರಿಸಲಾಗುವುದು. ಇಡೀ ಕಾರ್ಯಾಚರಣೆಯ ವೇಳೆ ಯಾರಿಗೂ ಯಾವುದೇ ತೊಂದರೆ ಅಥವಾ ಹಾನಿಯಾಗಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com