ಭಾರತೀಯರು ಅವಶ್ಯಕ್ಕಿಂತ ಹೆಚ್ಚು ಪ್ರಮಾಣದ ಉಪ್ಪು ಸೇವಿಸುತ್ತಾರೆ: ವರದಿ

ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವೆನೆ ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚು ಎಂದು ವರದಿಯೊಂದು ಹೇಳಿದೆ.
ಉಪ್ಪು ಸೇವನೆ (ಸಂಗ್ರಹ ಚಿತ್ರ)
ಉಪ್ಪು ಸೇವನೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವೆನೆ ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚು ಎಂದು ವರದಿಯೊಂದು ಹೇಳಿದೆ.

ಆಸ್ಟ್ರೇಲಿಯಾ ಮೂಲದ ಜಾರ್ಜ್ ಇನ್ಸ್ ಟಿಟ್ಯೂಟ್ ಆಫ್ ಗ್ಲೋಬಲ್ ಹೆಲ್ತ್ ಸಂಸ್ಥೆ ರಕ್ತದೊತ್ತಡ ಕುರಿತಂತೆ ಸಂಶೋಧನೆ ನಡೆಸಿದ್ದು, ವರದಿಯಲ್ಲಿ ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಉಪ್ಪು ಸೇವನೆ ಮಾಡುತ್ತಾರೆ. ಹೀಗಾಗಿ  ಅವರಲ್ಲಿ ರಕ್ತದೊತ್ತಡ ಸಮಸ್ಯೆಗಳು ಹೆಚ್ಚು ಎಂದು ಹೇಳಿದೆ.

ಜಾರ್ಜ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಪ್ರಕಾರ ಭಾರತೀಯರ ಅಗತ್ಯ ಪ್ರಮಾಣಕ್ಕಿಂತ ಶೇ.119ರಷ್ಟು ಹೆಚ್ಚು ಉಪ್ಪನ್ನು ಸೇವಿಸುತ್ತಾರೆ. ಇದರಿಂದಲೇ ಅವರಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಸಾಮಾನ್ಯ  ಎನ್ನುವಂತಾಗಿದೆ. ಕೇವಲ ಬಿಪಿ ಮಾತ್ರವಲ್ಲದೇ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುತ್ತದೆ. 2010-2013ರ ಅವಧಿಯೊಳಗೆ ಸತ್ತವರ ಪೈಕಿ ಶೇ.23ರಷ್ಟು ಮಂದಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ  ಸಮಸ್ಯೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಂಶೋಧನೆ ಹೇಳಿದೆ. ಕೇವಲ ಇದು ಮಾತ್ರವಲ್ಲದೇ 1986ರಿಂದ ಇತ್ತೀಚೆಗಿನ 2015ರವರೆಗೆ ನಡೆದ ವಿವಿಧ ಆರೋಗ್ಯ ಸಂಶೋಧನಾ ವರದಿಗಳು ಕೂಡ ಇದನ್ನೇ ಹೇಳಿದ್ದು,  ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಾರೆ ಎಂದು ಹೇಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಹಾರಾಷ್ಟ್ರ ಮತ್ತು ಗುಜರಾತ್ ನ ನಗರ ಪ್ರದೇಶಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಉಪ್ಪುಸೇವನೆ ಮಾಡಲಾಗುತ್ತಿದ್ದು, ಉಳಿದ ರಾಜ್ಯಗಳ ನಗರ ಪ್ರದೇಶಗಳಲ್ಲಿ ಹೆಚ್ಚು  ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಲಾಗುತ್ತಿದೆ. ಭಾರತೀಯರ ಈ ಹೆಚ್ಚು ಉಪ್ಪು ಸೇವನೆ ಹವ್ಯಾಸದಿಂದಾಗಿ ಅವರಲ್ಲಿ ತಲೆತಿರುಗುವಿಕೆ, ತೆಳು ಚರ್ಮ, ಅತಿಯಾಗಿ ಬೆವರುವಿಕೆ, ಎದೆನೋವು, ಭುಜ ಮತ್ತು ಕೈಕಾಲುಗಳಲ್ಲಿ ನೋವು,  ಸ್ತಂಭನ, ವಾಕರಿಕೆ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬ ಮನುಷ್ಯ ಪ್ರತಿನಿತ್ಯ 2 ರಿಂದ 5 ಗ್ರಾಂಗಳಷ್ಟು ಮಾತ್ರ ಉಪ್ಪು ಸೇವಿಸಿದರೆ ಸಾಕು ಎಂದು ಹೇಳಿದೆ. ಆದರೆ ಭಾರತೀಯ ಇದಕ್ಕಿಂತಲೂ ಶೇ,119ಪಟ್ಟು ಹೆಚ್ಚು ಪ್ರಮಾಣದಲ್ಲಿ ಅಂದರೆ  42.30 ಗ್ರಾಂಗಳಷ್ಟು ಉಪ್ಪು ಸೇವಿಸುತ್ತಾರೆ. ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಸಮಸ್ಯೆಗಳು ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಭಾರತೀಯರಲ್ಲಿ ಬೇಳೆಕಾಳು, ಹಣ್ಣುಗಳು ಮತ್ತು ತರಕಾರಿಗಳನ್ನು ಕಡಿಮೆ ತಿನ್ನುವ ಹವ್ಯಾಸ ಹೊಂದಿದ್ದಾರೆ, ಸಂಸ್ಕರಿಸಿದ ಮತ್ತು ತ್ವರಿತ ಆಹಾರಗಳ ಬಳಕೆ ಕೂಡ ಕಡಿಮೆಯೇ. ಭಾರತೀಯರ ಡಯಟ್ ಪಟ್ಟಿಯಲ್ಲಿ ಉಪ್ಪು  ಖಂಡಿತವಾಗಿಯೂ ಇರುತ್ತದೆ ಎಂದು ಖ್ಯಾತ ಆಹಾರ ತಜ್ಞ ಮತ್ತು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಕ್ಲೈರ್ ಜಾನ್ಸನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com