ಬೆಳಗಿನ ಉಪಾಹಾರ ತಪ್ಪಿಸುವುದು ಮತ್ತು ನಿದ್ರಾಹೀನತೆ ಮಕ್ಕಳ ಬೊಜ್ಜಿಗೆ ಕಾರಣ

ಪೋಷಕರೇ ಗಮನಿಸಿ. ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಅಗತ್ಯವಾದ ನಿದ್ದೆಯನ್ನು ಮಾಡದೆ ಇರುವುದು ನಿಮ್ಮ ಮಕ್ಕಳ ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣಗಳು ಎನ್ನುತ್ತದೆ ಅಧ್ಯಯನವೊಂದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಪೋಷಕರೇ ಗಮನಿಸಿ. ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಅಗತ್ಯವಾದ ನಿದ್ದೆಯನ್ನು ಮಾಡದೆ ಇರುವುದು ನಿಮ್ಮ ಮಕ್ಕಳ ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣಗಳು ಎನ್ನುತ್ತದೆ ಅಧ್ಯಯನವೊಂದು. 
ಅಲ್ಲದೆ ಗರ್ಭಿಣಿಯಾಗಿರುವಾಗ ತಾಯಿ ಧೂಮಪಾನಿಯಾಗಿದ್ದರೆ ಅದು ಕೂಡ ಹುಟ್ಟುವ ಮಗು ಬೊಜ್ಜಿಗೆ ತುತ್ತಾಗುವುದಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. 
ಈ ಎಲ್ಲವನ್ನು ಜೀವನದಲ್ಲಿ ಸರಿಪಡಿಸಿಕೊಳ್ಳುವ ಮೂಲಕ ಮಕ್ಕಳ ತೂಕದಲ್ಲಿ ಸಮತೋಲನ ಕಾಪಾಡಲು ಸಹಕರಿಸಬಹುದಾಗಿದೆ ಎಂದು ಇಂಗ್ಲೆಂಡಿನ ಯೂನಿವರ್ಸಿಟಿ ಕಾಲೇಜಿನ ಸಂಶೋಧಕರು ಹೇಳಿದ್ದಾರೆ. 
ಮಕ್ಕಳಿಗೆ ಹೆಚ್ಚು ತೂಕ ಅಥವಾ ಬೊಜ್ಜು ಬರುವುದಕ್ಕೆ ಮಕ್ಕಳಲ್ಲಿ ಸರಿಯಾದ ಮಾನಸಿಕ ಸಮತೋಲನ ಇಲ್ಲದಿರುವುದು ಕೂಡ ಕಾರಣ ಎನ್ನಲಾಗಿದೆ. ಆತ್ಮ ವಿಶ್ವಾಸದ ಕೊರತೆ, ದುಃಖ, ಅಲ್ಲದೆ ಧೂಮಪಾನ ಮತ್ತು ಮಧ್ಯಪಾನ ಕೂಡ ಮಕ್ಕಳಲ್ಲಿ ಬೊಜ್ಜು ತರಿಸಬಲ್ಲವಾಗಿವೆ. 
ಇಂಗ್ಲೆಂಡಿನಲ್ಲಿ ಸೆಪ್ಟೆಂಬರ್ 2000 ಮತ್ತು 2002 ಜನವರಿ ಮಧ್ಯೆ ಹುಟ್ಟಿದ ಸುಮಾರು ೧೯೨೪೪ ಕುಟುಂಬಗಳ ಮಕ್ಕಳ ಜೀವನಶೈಲಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆ ಮಕ್ಕಳು ಮೂರು, ಐದು ಮತ್ತು ೧೧ ನೆಯ ವಯಸ್ಸಿನಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com