ದೀರ್ಘಾವಧಿಯವರೆಗೆ ಒಂದೆಡೆ ಕುಳಿತುಕೊಳ್ಳುತ್ತಾ ಕೆಲಸ ಮಾಡಿದರೆ ಸಾವು ಸಂಭವಿಸಬಹುದು: ಅಧ್ಯಯನ

ದೀರ್ಘ ಕಾಲದವರೆಗೆ ಕುಳಿತಲ್ಲೇ ಕುಳಿತಿರುವುದರಿಂದ, ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ದೀರ್ಘ ಕಾಲದವರೆಗೆ ಕುಳಿತಲ್ಲೇ ಕುಳಿತಿರುವುದರಿಂದ, ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನು ನೋವು, ಮಂಡಿ ನೋವು ಮುಂತಾದ ಕಾಯಿಲೆಗಳು ಬರುವುದು ಮಾತ್ರವಲ್ಲದೆ ನಿಧಾನವಾಗಿ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ಸಾವು ಸಂಭವಿಸುತ್ತದೆ. ವಿಶ್ವದಲ್ಲಿ ವರ್ಷದಲ್ಲಿ ಶೇಕಡಾ 4ರಷ್ಟು ಮಂದಿ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಮರಣ ಹೊಂದುತ್ತಾರೆ ಎನ್ನುತ್ತದೆ ವರದಿ.
ಕಳೆದೊಂದು ದಶಕದಿಂದ ನಡೆಸಿದ ಅಧ್ಯಯನ ಪ್ರಕಾರ, ನಮ್ಮ ವಿರಾಮದ ಅವಧಿಯಲ್ಲಿ ಅಥವಾ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಲ್ಲಿ ನಾವು ವ್ಯಾಯಾಮ ಮಾಡುತ್ತೇವೆಯೋ, ಇಲ್ಲವೋ ಎಂದು ಲೆಕ್ಕಕ್ಕೆ ಬರುವುದಿಲ್ಲ ಎಂದು ಹಲವು ಅಧ್ಯಯನಗಳು ತಿಳಿಸುತ್ತವೆ.
ಅಮೆರಿಕದ ನಿಯತಕಾಲಿಕೆ ಪ್ರಿವೆಂಟಿವ್ ಮೆಡಿಸಿನ್ ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, 2002ರಿಂದ 2011ರವರೆಗೆ ನಡೆಸಲಾದ ಅಧ್ಯಯನದಿಂದ ಈ ಅಂಶ ಗೊತ್ತಾಗಿದೆ.
ವಿಶ್ವಾದ್ಯಂತ ಜನರು ಚಿಕ್ಕ ವಯಸ್ಸಿನಲ್ಲೇ ಸಾವಿಗೀಡಾಗುವುದನ್ನು ತಪ್ಪಿಸಲು ಉದಾಸೀನದ ಅಶಿಸ್ತಿನ ಜೀವನ ಶೈಲಿಯನ್ನು ತಡೆಗಟ್ಟಬೇಕು ಎಂದು ಅಧ್ಯಯನದ ಮುಖ್ಯ ಲೇಖಕ ಲಿಯಾಂಡ್ರೊ ರೆಜೆಂಡೆ ಹೇಳುತ್ತಾರೆ. 
ವಿಶ್ಲೇಷಣೆಗೊಳಪಟ್ಟ ದೇಶಗಳಲ್ಲಿ ಜನರು ಕುಳಿತಲ್ಲೇ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ಜೀವಿತಾವಧಿಯನ್ನು 0.20 ವರ್ಷಗಳಿಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ ಎಂದು ಅವರು ಹೇಳುತ್ತಾರೆ.
ವಿಶ್ವಾದ್ಯಂತ ಶೇಕಡಾ 60ಕ್ಕಿಂತಲೂ ಹೆಚ್ಚು ಮಂದಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಕುಳಿತಲ್ಲೇ ಕುಳಿತುಕೊಳ್ಳುತ್ತಾರೆ. ವಯಸ್ಕರು ಸರಾಸರಿ 4.7 ಗಂಟೆಗಳ ಕಾಲ ಕುಳಿತುಕೊಳ್ಳುತ್ತಾರೆ. ಇದರಿಂದ ಶೇಕಡಾ 3.8ರಷ್ಟು ಮರಣ ಹೊಂದುವವರ ಪ್ರಮಾಣ ಜಾಸ್ತಿಯಾಗುತ್ತದೆ. ಹೀಗೆ ಸಾಯುವವರ ಪ್ರಮಾಣ ಪಶ್ಚಿಮ ಪೆಸಿಫಿಕ್, ಯುರೋಪಿಯನ್ ದೇಶ, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com