ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ

ದೇಹ ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುವವರಿಗೆ ಇರುವ ಸುಲಭ ಮಾರ್ಗಗಳಲ್ಲಿ ಸೈಕ್ಲಿಂಗ್ ಸಹ ಒಂದು.
ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ
ದಿನನಿತ್ಯ ಸೈಕಲ್ ತುಳಿಯಿರಿ; ಒತ್ತಡ, ಆತಂಕ ಕಡಿಮೆ ಮಾಡಿಕೊಳ್ಳಿ
ನವದೆಹಲಿ: ದೇಹ ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುವವರಿಗೆ  ಇರುವ ಸುಲಭ ಮಾರ್ಗಗಳಲ್ಲಿ ಸೈಕ್ಲಿಂಗ್ ಸಹ ಒಂದು. ನಿಮ್ಮ ತೂಕವನ್ನು ನಿಯಂತ್ರಿಸುವುದರ ಜೊತೆಗೆ, ಖಿನ್ನತೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಸೈಕಲ್ ಸವಾರಿ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರ್ ಎಂ ಅಂಜನಾ, ಡಾ.ಮೋಹನ್ ಡಯಾಬಿಟೀಸ್ ಸ್ಪೆಷಲಿಸ್ಟ್ ಸೆಂಟರ್ ನವ್ಯವಸ್ಥಾಪಕ ನಿರ್ದೇಶಕಿ ಹಾಗೂ ಆಕ್ಟಿವ್ ಹೆಲ್ತ್ ಕ್ಲಿನಿಕ್ ನ ಫಿಸಿಯೋ ಥೆರಪಿಸ್ಟ್ ಆಗಿರುವ ದೀಪಾಲಿ ಬದೋನಿ ಅವರುಗಳು ಸೈಕಲ್ ಸವಾರಿಯ ಲಾಭಗಳ ಬಗೆಗೆ ಹೇಳುತ್ತಾರೆ.
  • ಸೈಕ್ಲಿಂಗ್ ಎಂಬುದು ಏರೋಬಿಕ್ಸ್ ವ್ಯಾಯಾಮವಾಗಿದ್ದು, ಇದರಿಂದ ಆರೋಗ್ಯಕ್ಕೆ ಉತ್ತಮ ಲಾಭವಾಗುತ್ತದೆ. ಇದು ಹೃದಯ ಸಂಬಂಧಿತ ಖಾಯಿಲೆಗಳನ್ನು ದೂರಾಗಿಸುತ್ತದೆ. ಈ ಸೈಕಲ್ ಸವಾರಿಯಿಂದ ಮೆದುಳಿನಲ್ಲಿ ಸಿರೊಟೋನಿನ್, ಡೋಪಮೈನ್ ಮತ್ತು ಫೀನಲೆಥೈಲಮೈನ್ ನಂತಹ  ರಾಸಾಯನಿಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಅದು ನಿಮ್ಮನ್ನು ಖಿನ್ನತೆಯಿಂದ ದೂರವಾಗಿಸಿ ಸಂತಸದಿಂದಿರಿಸುತ್ತದೆ.
  • ಮೊಣಕಾಲು ಅಥವಾ ಕೀಲು ನೋವಿನಿಂದ ಬಳಲುತ್ತಿರುವ ಮಂದಿ ಸೈಕಲ್ ಸವಾರಿ ಮಾಡುವುದು ಅತ್ಯಂತ ಒಳ್ಳೆಯದು
  • ಮಧುಮೇಹದಿಂದ ಬಳಲುತ್ತಿರುವ ಜನರು ಸೈಕ್ಲಿಂಗ್ ಮಾಡುವಾಗ ಅವರು ತಾವು ದೃಢವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಟೈಪ್ 1 ಡಯಾಬಿಟೀಸ್ ಇರುವವರು ಒಂದು ಗಂಟೆಗೆ ಹೆಚ್ಚು ಕಾಲ ಸೈಕಲ್ ಸವಾರಿ ಮಾಡುವುದಾದರೆ ಹೆಚ್ಚು ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ತೆಗೆದುಕೊಳ್ಳುವುದು ಅಗತ್ಯ. 
  • ಸೈಕ್ಲಿಂಗ್ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರಾಗಿಸುತ್ತದೆ. ಇದು ಹಿಮ್ಮಡಿ ಮತ್ತು ಮೊಣಕಾಲಿನ ಕೀಲುಗಳ ಮೇಲೆ ಒತ್ತಡ ಹಾಕಿ ಕಾಲುಗಳ ಸ್ನಾಯುಗಳ ಆರೋಗ್ಯ ಕಾಪಾಡುವಂತೆ ಮಾಡುತ್ತದೆ. ಓಡುವುದಕ್ಕೆ ಅಥವಾ , ಬೈಕ್ ರೈಡ್ ಗೆ ಹೋಲಿಸಿದಾಗ ಅವುಗಳು ನಮ್ಮ ಕಾಲುಗಳು, ಮೊಣಕಾಲಿನ ಕೀಲುಗಳ ಮೇಲೆ  ತುಂಬಾ ಕಡಿಮೆ ಒತ್ತಡ ಹಾಕುತ್ತದೆ, ಸೈಕ್ಲಿಂಗ್ ಮಾತ್ರ ಕಾಲುಗಳ ಸ್ನಾಯುಗಳನ್ನು ಚುರುಕಾಗಿಡಬಲ್ಲದು.
  • ಸೈಕಲ್ ಸವಾರಿಯು ಹೃದಯ ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿಡಬಲ್ಲದು, ರಕ್ತದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆ ಬರುವ ಸಾದ್ಯತೆ ಕಡಿಮೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com