ತಂಬಾಕು ಸಿಗರೇಟ್‌ಗಿಂತ ಇ-ಸಿಗರೇಟ್ ಕಡಿಮೆ ಹಾನಿ, ಆದರೂ ಎಚ್ಚರ ವಹಿಸಿ: ಅಧ್ಯಯನ

ತಂಬಾಕು, ಮಧ್ಯಪಾನ ಸೇವನೆ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ...
ಇ-ಸಿಗರೇಟ್
ಇ-ಸಿಗರೇಟ್
ನ್ಯೂಯಾರ್ಕ್: ತಂಬಾಕು, ಮಧ್ಯಪಾನ ಸೇವನೆ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇಂತಹ ದುಷ್ಚಟಗಳಿಂದ ಯುವಕರನ್ನು ಹೊರ ತರುವ ಸಲುವಾಗಿ ಇ-ಸಿಗರೇಟು ಅನ್ನು ಹೆಚ್ಚಾಗಿ ಮಾರುಕಟ್ಟೆಗೆ ಬಿಡಲಾಗಿದೆ. ಇಗಿದ್ದರು ಇ-ಸಿಗರೇಟ್ ಬಗ್ಗೆ ಜಾಗೃತರಾಗಿರುವಂತೆ ಸಂಶೋಧಕರು ಎಚ್ಚರಿಸಿದ್ದಾರೆ. 
ತಂಬಾಕು ಸಿಗರೇಟ್‌ಗಿಂತ ಇ-ಸಿಗರೇಟ್ ಕಡಿಮೆ ಪ್ರಮಾಣದಲ್ಲಿ ಹಾನಿ ಉಂಟುಮಾಡುತ್ತದೆ ಎಂದು ಮಾರುಕಟ್ಟೆಗೆ ಬಿಡಲಾಗಿದ್ದು ಯುವಕರನ್ನು ಹೆಚ್ಚಾಗಿ ಆಕರ್ಷಿಸಲಾಗುತ್ತಿದೆ. ಇ-ಸಿಗರೇಟ್ ಮೂಲಕ ತಂಬಾಕು ಮಾರುಕಟ್ಟೆಯನ್ನು ಹೆಚ್ಚಿಸಲಾಗುತ್ತಿದೆ ವಿನಃ ಕಡಿಮೆ ಮಾಡುತ್ತಿಲ್ಲ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೋಫೆಸರ್ ಸ್ಟಾಂಟನ್ ಎ. ಗ್ಲಾನ್ಟ್ಸ್ ಹೇಳಿದ್ದಾರೆ. 
ಸಾಂಪ್ರದಾಯಿಕ ತಂಬಾಕು ಸೇವನೆಗಿಂತ ಇ-ಸಿಗರೇಟು ಸೇವನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಇ-ಸಿಗರೇಟು ಸೇವನೆಯಿಂದ ಹಾನಿ ಕುರಿಂತೆ ಸಂಶೋಧಕರು ಯಾವುದೇ ನಿಖರ ಮಾಹಿತಿ ನೀಡಿಲ್ಲ. 2009ಕ್ಕೆ ಹೊಲಿಸಿದರೆ 2014ರಲ್ಲಿ ಸಿಗರೇಟು ಸೇವನೆ ಪ್ರಮಾಣ ಹೆಚ್ಚಾಗಿದೆ ಎಂದರು. 
ತಂಬಾಕಿನ ಸಿಗರೇಟ್ ಗಿಂತ ಇ-ಸಿಗರೇಟ್ ಭಿನ್ನವಾಗಿರುತ್ತದೆ. ಬ್ಯಾಟರಿ ಚಾಲಿತ ಇ-ಸಿಗರೇಟ್ ನಲ್ಲಿ ತಂಬಾಕು ಇರೋದಿಲ್ಲ. ನಿಕೋಟಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುವ ದ್ರವದ ಕಾರ್ಟಿಜ್ ಅನ್ನು ಬಿಸಿ ಮಾಡಿ ಅದರಿಂದ ಬರುವ ಹಬೆಯನ್ನು ಉಸಿರಾಡುವ ಮೂಲಕ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಸೇದಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com