ನೆನಪಿನ ಶಕ್ತಿ ಕುಗ್ಗುವುದನ್ನು ತಡೆಯಲು ಯೋಗ ಸಹಕಾರಿ: ಅಧ್ಯಯನ ವರದಿ

ನೆನಪಿನ ಶಕ್ತಿ ಕುಗ್ಗುವುದನ್ನು ತಡೆಯಲು ಯೋಗ ಸಹಕಾರಿ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಯೋಗ
ಯೋಗ
ವಾಷಿಂಗ್ ಟನ್: ನೆನಪಿನ ಶಕ್ತಿ ಕುಗ್ಗುವುದನ್ನು ತಡೆಯಲು ಯೋಗ ಸಹಕಾರಿ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಬ್ರೆಜಿಲ್ ವಿಜ್ಞಾನಿಗಳು ಯೋಗ ಅಭ್ಯಾಸ ಮಾಡುವ ಮಹಿಳೆಯ ಮೆದುಳನ್ನು ಅಧ್ಯಯನ ಮಾಡಿದ್ದಾರೆ. ಈ ವೇಳೆ ಯೋಗಾಭ್ಯಾಸ ಮಾಡುವ ಮಹಿಳೆಯಲ್ಲಿ, ನೆನಪಿನ ಶಕ್ತಿ ಹಾಗೂ ಏಕಾಗ್ರತೆಗೆ ಸಹಕರಿಸುವ ಮೆದುಳಿನ ಭಾಗದಲ್ಲಿ ಕಾರ್ಟಿಕಲ್ ಪದರ ಹೆಚ್ಚು ದಟ್ಟವಾಗಿರುವುದು ಕಂಡುಬಂದಿದೆ. 
ಯೋಗಾಭ್ಯಾಸ ಮಾಡುವುದರಿಂದ ಶಕ್ತಿ ಹಾಗೂ ಏಕಾಗ್ರತೆಗೆ ಸಹಕರಿಸುವ ಮೆದುಳಿನ ಭಾಗದ ಕಾರ್ಟಿಕಲ್ ಪದರ ಸದೃಢಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ವಯಸ್ಸಾದಂತೆ ನೆನಪಿನ ಶಕ್ತಿ ಕುಗ್ಗುವುದನ್ನು ತಪ್ಪಿಸಲು ಯೋಗದಿಂದ ಸಹಕಾರಿಯಾಗಲಿದೆ ಎಂದು ಬ್ರೆಜಿಲ್ ನ ಅಧ್ಯಯನ ವರದಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com