ಚಳಿಗಾಲದಲ್ಲಿ ಒಡೆದ ತುಟಿಗೆ ಕೊಬ್ಬರಿ ಎಣ್ಣೆ, ಅರ್ಗಾನ್ ತೈಲದಿಂದ ಉತ್ತಮ ಆರೈಕೆ

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ತಚುಟಿಬಲು ಬಲು ಬೇಗ ಒಣಗಿ ಹೋಗುತ್ತವೆ... ಮಾರುಕಟ್ಟೆಯಲ್ಲಿ ಬರುವ ವಿವಿಧ ಉತ್ಪನ್ನಗಳನ್ನು ಉಪಯೋಗಿಸಿದ ಹೊರತಾಗಿಯೂ ಸಮಸ್ಯೆಗಳು ಹಾಗೆಯೇ ಮುಂದುವರೆಯತ್ತಿರುತ್ತವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ತಚುಟಿಬಲು ಬಲು ಬೇಗ ಒಣಗಿ ಹೋಗುತ್ತವೆ... ಮಾರುಕಟ್ಟೆಯಲ್ಲಿ ಬರುವ ವಿವಿಧ ಉತ್ಪನ್ನಗಳನ್ನು ಉಪಯೋಗಿಸಿದ ಹೊರತಾಗಿಯೂ ಸಮಸ್ಯೆಗಳು ಹಾಗೆಯೇ ಮುಂದುವರೆಯತ್ತಿರುತ್ತವೆ.
ಚರ್ಮ ಹಾಗೂ ತುಟಿಗಳಿಗೆ ಎದುರಾಗುವ ಸಮಸ್ಯೆಯನ್ನು ದೂರಾಗಿಸಲು ಕೆಲವರು ಹೆಚ್ಚಾಗಿ ನೀರನ್ನು ಕುಡಿಯುವಂತೆ ಸಲಹೆಗಳನ್ನು ನೀಡುತ್ತಾರೆ. ಆದರೆ, ನೀರು ಕುಡಿಯುವುದರೊಂದಿಗೆ ಚರ್ಮದ ಆರೈಕೆಗೆ ಕೊಬ್ಬರಿ ಎಣ್ಣೆ ಹಾಗೂ ಅರ್ಗಾನ್ ತೈಲದಿಂದ ಮಾಡಿದ ಉತ್ಪನ್ನಗಳ ಬಳಕೆ ಮಾಡುವುದು ಹೆಚ್ಚು ಉತ್ತಮ ಎಂದು ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 
ಚಳಿಗಾಲದಲ್ಲಿ ಚರ್ಮ ಹಾಗೂ ತುಟಿಗಳ ಆರೈಕೆ ಕುರಿತಂತೆ ಭಾರತದ ಕೀಹಲ್ಸ್'ನ ಶೈಕ್ಷಣಿಕ ವ್ಯವಸ್ಥಾಪಕ ಅನಿರುಧ್ ರಿಂಜ್ ಹಾಗೂ ಮೈಗ್ಲಾಮ್'ನ ಕಲಾ ನಿರ್ದೇಶಕ ಬಿಜೋನ್ ಬುರೆಪಪ ಅವರು ಸಲಹೆಗಳನ್ನು ನೀಡಿದ್ದಾರೆ. 
ತುಟಿಗಳು ಒಣಗಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಉಗುಳನ್ನು ಹಚ್ಚುವುದು ಸಾಮಾನ್ಯ. ಆದರೆ, ಪದೇ ಪದೇ ತುಟಿಗಳಿಗೆ ಉಗುಳನ್ನು ಹಚ್ಚುವುದು ತುಟಿಗಳ ಅಂದವನ್ನು ಹಾಳು ಮಾಡುತ್ತದೆ. ಇದನ್ನು ನಿಯಂತ್ರಿಸಬೇಕು. ಉಗುಳನ್ನು ಹಚ್ಚುವುದರಿಂದ ತುಟಿಗಳು ಮತ್ತಷ್ಟು ಒಣಗಲು ಆರಂಭಿಸುತ್ತದೆ. 
ಒಣಗಿದ ತುಟಿಗಳ ರಕ್ಷಣೆ ಮಾಡಲು ಕೊಬ್ಬರಿ ಎಣ್ಣೆಯನ್ನು ಬಳಸುವುದು ಅತೀ ಉತ್ತಮವಾದ ವಿಧಾನವಾಗಿದೆ. ಕೊಬ್ಬರಿ ಎಣ್ಣೆ ಒಣಗಿದ ಚರ್ಮವನ್ನು ರಕ್ಷಣೆ ಮಾಡುವುದಲ್ಲದೆ, ಕಾಂತಿಯನ್ನು ಹೆಚ್ಚಿಸುತ್ತದೆ. 
ಚರ್ಮ ತೆಳ್ಳಗಿರುವ ಸಂದರ್ಭದಲ್ಲಿ ತುಟಿಗಳ ಕಾಂತಿ ಕಳೆಗುಂದಿರುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ತುಟಿಗಳ ರಕ್ಷಣೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ಉತ್ತಮವಾದ ಲಿಪ್ ಬಾಲ್ಮ್ ಗಳನ್ನು ಬಳಕೆ ಮಾಡಬೇಕು. ಪ್ರಮುಖವಾಗಿ ಅರ್ಗಾನ್ ತೈಲವುಳ್ಳ ಲಿಪ್ ಬಾಲ್ಮ್ ಗಳನ್ನು ಬಳಕೆ ಮಾಡಬೇಕು. 
ತುಟಿಗಳ ಮೇಲೆ ಕೂದಲು ಇಲ್ಲದಿರುವುದರಿಂದ ಬಹುತೇಕ ಸಂದರ್ಭದಲ್ಲಿ ತುಟಿಗಳ ಚರ್ಮ ಸುಲಿಯುತ್ತವೆ. ಇಂತಹ ಸಂದರ್ಭದಲ್ಲಿ ತುಟಿಗಳ ಆರೈಕೆ ಮಾಡಲೇಬೇಕಿರುತ್ತದೆ. ಸುಲಿದ ತುಟಿಗಳಿಗೆ ಲಿಪ್ ಸ್ಕ್ರಬ್ ಗಳನ್ನು ಬಳಕೆ ಮಾಡಬೇಕು. 
ಮನೆಯಲ್ಲಿಯೇ ಲಿಪ್ ಸ್ಕ್ರಬ್ ಮಾಡಲು ಇಚ್ಛಿಸುವವರು ಈ ಕೆಳಕಂಡಂತೆ ಮಾಡಿಕೊಳ್ಳಬಹುದು...
  • ಸಕ್ಕರೆ ಮತ್ತು ಜೇನುತುಪ್ಪನನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಈ ಮಿಶ್ರಣವನ್ನು ಬೆರಳಿಗೆ ಹಚ್ಚಿಕೊಂಡು ತುಟಿಗಳಿಗೆ ನಿಧಾನಗತಿಯಲ್ಲಿ ಮಸಾಜ್ ಮಾಡಬೇಕು. 
  • ಸಕ್ಕರೆ ಕರಗುವವರೆಗೂ ತುಟಿಗಳಿಗೆ ಮಸಾಜ್ ಮಾಡಿ. ನೀರಿನಲ್ಲಿ ತೊಳೆಯಬೇಕು. 
ಪ್ರತೀದಿನ ಲಿಪ್ ಸ್ಟಿಕ್ ಗಳನ್ನು ಬಳಕೆ ಮಾಡುವವರು, ಒಣಗಿದ ತುಟಿಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅಂತಹವರು ತುಟಿಗಳು ಒದ್ದೆಯಿರುವಂತೆ ನೋಡಿಕೊಳ್ಳಬೇಕು. ಲಿಪ್ ಸ್ಟಿಕ್ ಹಚ್ಚುವುದಕ್ಕೂ ಕೆಲ ನಿಮಿಷಿಗಳಿಗೂ ಮುನ್ನ ವಾಸಲೈನ್ ಹೆಚ್ಚಬೇಕು. ನಂತರ ಲಿಪ್ ಸ್ಟಿಕ್ ಹಚ್ಚಬೇಕು. ಇದು ತುಟಿಗಳ ಆರೋಗ್ಯವನ್ನು ಕಾಪಾಡಲು ಸಹಾಕವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com