ಪತ್ನಿಯರು ತಮಗಾಗಿ ಉಪವಾಸವಿರುವುದು ಭಾರತದ ಬಹುತೇಕ ಪುರುಷರಿಗೆ ಇಷ್ಟವಿಲ್ಲ: ಸಮೀಕ್ಷೆ

ಪತ್ನಿಯರು ತಮಗಾಗಿ ಉಪವಾಸವಿರುವುದು ಭಾರತದ ಬಹುತೇಕ ಪುರುಷರಿಗೆ ಇಷ್ಟವಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.
ಪತ್ನಿಯರು ತಮಗಾಗಿ ಉಪವಾಸವಿರುವುದು ಭಾರತದ ಬಹುತೇಕ ಪುರುಷರಿಗೆ ಇಷ್ಟವಿಲ್ಲ
ಪತ್ನಿಯರು ತಮಗಾಗಿ ಉಪವಾಸವಿರುವುದು ಭಾರತದ ಬಹುತೇಕ ಪುರುಷರಿಗೆ ಇಷ್ಟವಿಲ್ಲ
ನವದೆಹಲಿ: ಪತ್ನಿಯರು ತಮಗಾಗಿ ಉಪವಾಸವಿರುವುದು ಭಾರತದ ಬಹುತೇಕ ಪುರುಷರಿಗೆ ಇಷ್ಟವಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. 
ಉಪವಾಸ ವ್ರತದ ಬಗ್ಗೆ ಪುರುಷರ ಅಭಿಪ್ರಾಯವನ್ನು ಸಂಗ್ರಹಿಸಲು ಶಾದಿ.ಕಾಂ ಸಮೀಕ್ಷೆಯನ್ನು ನಡೆಸಿದೆ. ಕರ್ವ ಚೌತ್ ಅಂಗವಾಗಿ ಪತ್ನಿಯರೊಂದಿಗೆ ಉಪವಾಸ ಆಚರಿಸಿ ವಿವಾಹದಲ್ಲಿ ಸಮಾನತೆ ವ್ಯಕ್ತಪಡಿಸಲು ಪ್ರತಿ ವರ್ಷವೂ ಸಹ ಫಾಸ್ಟ್ ಫಾರ್ ಹರ್ (#Fastforher ) ಎಂಬ ಅಭಿಯಾನ ಹಮ್ಮಿಕೊಳ್ಳುತ್ತದೆ. ಆದರೆ ಉಪವಾಸದ ಕುರಿತು ಇತ್ತೀಚಿನ ಯುವ ದಂಪತಿಗಳ ಮನಸ್ಥಿತಿಯಲ್ಲಿ ಬದಲಾವಣೆಗಳಾಗಿರುವುದು ಈ ಸಮೀಕ್ಷೆಯ ಮೂಲಕ ತಿಳಿದುಬಂದಿದೆ. 
ನಿಮ್ಮ ಪತ್ನಿ ನಿಮಗಾಗಿ ಉಪವಾಸ ಮಾಡುತ್ತಾರಾ? ಎಂಬ ಪ್ರಶ್ನೆಗೆ ಶೇ.61 ರಷ್ಟು ಜನರು ಹೌದು ಎಂದು ಪ್ರತಿಕ್ರಿಯೆ ನೀಡಿದ್ದು, ಶೇ.39 ರಷ್ಟು ಜನರು ಇಲ್ಲ ಎಂದೂ, ಶೇ.93 ರಷ್ಟು ಜನರು ತಮಗಾಗಿ ಪತ್ನಿ ಉಪವಾಸ ಇರುವುದು ಇಷ್ಟವಿಲ್ಲ ಎಂದೂ ಹೇಳಿದ್ದಾರೆ. ಉಪವಾಸದ ಬದಲಾಗಿ ತಮ್ಮ ಪತ್ನಿಯನ್ನು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಕರೆದುಕೊಂಡು ಹೋಗುವುದಾಗಿ ಶೇ.23 ರಷ್ಟು ಜನರು ಹೇಳಿದ್ದಾರೆ. 
24-40 ವಯಸ್ಸಿನ 6,537 ಪುರುಷರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com