ಮದ್ಯಪಾನದಿಂದ ವಿದೇಶಿ ಭಾಷೆಯ ಕೌಶಲ್ಯ ಸುಧಾರಿಸಬಹುದು: ಅಧ್ಯಯನ

ನೀವು ವಿದೇಶಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ನೀವು ವಿದೇಶಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್...
ಹೌದು ಅಧ್ಯಯನವೊಂದರ ಪ್ರಕಾರ, ಒಂದು ಪಿಂಟ್ ಬೀರ್ ಕುಡಿದರೆ ನಿಮ್ಮ ನಾಲಿಗೆ ಮೇಲೆ ವಿದೇಶಿ ಭಾಷೆ ಸರಾಗವಾಗಿ ಬರುತ್ತದೆಯಂತೆ.
ಮದ್ಯಪಾನ ಮಾಡುವುದರಿಂದ ನಮ್ಮ ಚಟುವಟಿಕೆಗಳು ಮತ್ತು ಕಾರ್ಯನಿರ್ವಾಹಕ ಮಾನಸಿಕ ಕಾರ್ಯಗಳನ್ನು ಜಾಗೃತಗೊಳಿಸುತ್ತದೆ. ಅಲ್ಲದೆ ನೆನಪಿಸುವ ಸಾಮರ್ಥ್ಯ, ಗಮನ ಹರಿಸುವುದು ಮತ್ತು ಸೂಕ್ತವಲ್ಲದ ನಡವಳಿಕೆಗಳನ್ನು ಪ್ರತಿಬಂಧಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಎರಡನೇ ಅಥವಾ ಮಾತೃಭಾಷಣೆ ಹೊರತಾದ ಭಾಷೆಯನ್ನು ಸರಾಗವಾಗಿ ಮಾತನಾಡಲು ನಮ್ಮ ಮಾನಸಿಕ ಕಾರ್ಯ ಮತ್ತು ನೆನಪಿನ ಶಕ್ತಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
ವಿದೇಶಿ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯುವುದರ ಜೊತೆಗೆ, ಮದ್ಯಪಾನದಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ ಮತ್ತು ಸಾಮಾಜಿಕ ಆತಂಕವನ್ನು ಕಡಿಮೆಗೊಳಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹೊಸದಾಗಿ ಕಲಿತ ಹೊಸ ವಿದೇಶಿ ಭಾಷೆಯನ್ನು ಸುಲಭವಾಗಿ ಉಚ್ಚಾರಣೆ ಮಾಡಲು ಆಲ್ಕೋಹಾಲ್ ಸಹಾಯ ಮಾಡುತ್ತದೆ ಎಂಬುದು ನಮ್ಮ ಸಂಶೋಧನೆಯಿಂದ ತಿಳಿದು ಬಂದಿರುವುದಾಗಿ ಲಿವ್ ಪೂಲ್ ವಿಶ್ವವಿದ್ಯಾಲಯದ ಇಂಗೆಕೆರ್ಸ್ ಬರ್ಗೇನ್  ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com