ಕೇವಲ 25 ನಿಮಿಷಗಳ ಯೋಗಾಭ್ಯಾಸ ಮೆದುಳಿನ ಕಾರ್ಯನಿರ್ವಹಣೆ, ಉತ್ಸಾಹವನ್ನು ಹೆಚ್ಚಿಸುತ್ತದೆ!

ಪ್ರತಿ ದಿನವೂ 25 ನಿಮಿಷಗಳ ಕಾಲ ಹಠ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆ ಚುರುಕಾಗಿ, ಉತ್ಸಾಹದ ಮಟ್ಟ ಹೆಚ್ಚುತ್ತದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ.
ಯೋಗ
ಯೋಗ
ವಾಷಿಂಗ್ ಟನ್: ಪ್ರತಿ ದಿನವೂ 25 ನಿಮಿಷಗಳ ಕಾಲ ಹಠ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆ ಚುರುಕಾಗಿ, ಉತ್ಸಾಹದ ಮಟ್ಟ ಹೆಚ್ಚುತ್ತದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ. 
ಒಂಟಾರಿಯೊದಲ್ಲಿರುವ ವಾಟರ್ಲೂ ವಿಶ್ವವಿದ್ಯಾಲಯದ ಸಂಶೋಧಕ ಪೀಟರ್ ಹಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಠ ಯೋಗ ಹಾಗೂ ಸಾವಧಾನತೆಯ ಧ್ಯಾನ ಎರಡೂ ಮೆದುಳಿನ ಜಾಗೃತ ಪ್ರಕ್ರಿಯೆ ಶಕ್ತಿಯ ಮೇಲೆ ಕೇಂದ್ರಿತವಾಗಿರುತ್ತದೆ. ಪ್ರತಿ ದಿನವೂ 25 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿದರೆ ಮೆದುಳಿನ ಕಾರ್ಯನಿರ್ವಹಣೆ ಚುರುಕಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 
ಸಂಶೋಧನೆ ನಡೆಸಿರುವ ತಂಡ 31 ಜನರನ್ನು ಅಧ್ಯಯನಕ್ಕೊಳಪಡಿಸಿದ್ದು, 25 ನಿಮಿಷಗಳ ಕಾಲ ಯೋಗ, ಧ್ಯಾನ ಮಾಡಿದ್ದಾರೆ. ಬೇರೆ ಚಟುವಟಿಕೆಗಳಿಗೆ ಹೋಲಿಸಿದರೆ ಧ್ಯಾನ, ಯೋಗದಿಂದ ಮೆದುಳಿನ ಶಕ್ತಿ, ಉತ್ಸಾಹ ಎರಡೂ ಹೆಚ್ಚುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com