ಸಾಮಾಜಿಕ ಮಾಧ್ಯಮ ವ್ಯಸನ: ಇದು ಬರೀ ಹದಿಹರೆಯದವರ ಸಮಸ್ಯೆ ಅಲ್ಲ!

ವಿಶ್ವದ ಜನಪ್ರಿಯ ಮತ್ತು ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಸಾಮಾಜಿಕ ಮಾಧ್ಯಮ ಕೇವಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶ್ವದ ಜನಪ್ರಿಯ ಮತ್ತು ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಸಾಮಾಜಿಕ ಮಾಧ್ಯಮ ಕೇವಲ ಎರಡು ದಶಕಗಳಲ್ಲಿ ನಮ್ಮ ಜೀವನದ ಒಂದು ಭಾಗವಾಗಿ ಹೋಗಿದ್ದು, ಮಾನವ ಸಮಾಜ ಮತ್ತು ಸಂಘ ಜೀವಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಇತ್ತೀಚಿಗೆ ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ಮತ್ತು ಅತ್ಯಂತ ಕಡಿಮೆ ಬೆಲೆಗೆ ಇಂಟರ್ ನೆಟ್ ಸೌಲಭ್ಯ ಸಿಗುತ್ತಿರುವುದರಿಂದ ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಸಾಮಾಜಿಕ ಮಾಧ್ಯಮ ನಾವು ನಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಸಹಕರಿಸುತ್ತಿದೆ. ಅಲ್ಲದೆ ಅದು ನಮ್ಮನ್ನು ಸದಾ ಕ್ರಿಯಾಶಿಲವಾಗಿಡಲು ಮತ್ತು ಹೆಚ್ಚು ವೃತ್ತಿಪರರನ್ನಾಗಿ ಮಾಡಲು ನೆರವಾಗುತ್ತಿದೆ. ಹಲವರಿಗೆ ತಮ್ಮ ಗುರಿಯನ್ನು ತಲುಪಲು ಹಲವು ರೀತಿಯಲ್ಲಿ ಸಾಮಾಜಿಕ ಮಾಧ್ಯಮ ಸಹಾಯ ಮಾಡುತ್ತಿದೆ.
ಸಾಮಾಜಿಕ ಮಾಧ್ಯಮ ಹಲವಾರು ಹೊಸ ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ನಮಗೆ ಸಹಾಯ ಮಾಡುತ್ತದೆ. ಇದು ಸಮಾನ ಮನಸ್ಸಿನ ವ್ಯಕ್ತಿಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಆದರೆ ಸಾಮಾಜಿಕ ಮಾಧ್ಯಮ ಬಳಸುವುದು ತುಂಬಾ ಒಳ್ಳೆಯದು ಏಕೆ? ಎಂಬ ಪ್ರಶ್ನೆಗೆ ಅದೊಂದು ಚಟ, ವ್ಯಸನ ಎಂಬ ಉತ್ತರ ಬರುತ್ತದೆ.
ಹೌದು, ಸಾಮಾಜಿಕ ಮಾಧ್ಯಮ ಬಳಕೆ ಈಗ ಚಟವಾಗಿದ್ದು, ನಮ್ಮ ದೇಹದಲ್ಲಿ ಸೃಷ್ಟಿಯಾದ ಒಳ್ಳೆಯ ಭಾವನೆಯಾಗಿದೆ.  ಅದು ಕೇವಲ ಹದಿಹರೆಯದವರಿಗೆ ಮಾತ್ರ ಸೀಮಿತವಾಗಿಲ್ಲ. ನಾವು ಚಾಕೋಲೇಟ್, ಆಲ್ಕೊಹಾಲ್, ಸಿಗರೇಟ್ ಅಥವಾ ಜೂಜು ಆಡುವ ಅನುಭವವನ್ನು ನೀಡುವ ಒಂದು ರಾಸಾಯನಿಕವಾಗಿದೆ.
ವಯಸ್ಸಿನ ನಿರ್ಬಂಧದ ಕೊರತೆ ಮತ್ತು ಸಾಮಾಜಿಕ ಮಾಧ್ಮಮಕ್ಕೆ ಸುಲಭವಾಗಿ ಪ್ರವೇಶ ಸಿಗುತ್ತಿರುವುದರಿಂದ ಸಾಮಾಜಿಕ ಮಾಧ್ಯಮದ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಅದೊಂದು ಚಟವಾಗಿ ಮಾರ್ಪಡುತ್ತಿದೆ. ಈ ಚಟ ಅಥವಾ ಗೀಳು ಋಣಾತ್ಮಕ ಪರಿಣಾಮಗಳಿಗೂ ಕಾರಣವಾಗುತ್ತದೆ.  ಈ ಸಂದರ್ಭದಲ್ಲಿ, ನಾವು ನಿರಂತರವಾಗಿ ನಮ್ಮ ಫೋನ್ ಅನ್ನು ಪರಿಶೀಲಿಸುತ್ತೇವೆ ಮತ್ತು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೇವೆ.
ಜನ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವಾಸ್ತವಿಕ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುತ್ತಾರೆ ಮತ್ತು ಇದಕ್ಕಾಗಿ ತಮ್ಮ ಗೆಳೆಯರಿಂದ ಮೆಚ್ಚುಗೆ ಅಪೇಕ್ಷಿಸುತ್ತಾರೆ. ಆದರೆ ನಿರೀಕ್ಷಿತ ಮೆಚ್ಚುಗೆ ಬರದಿದ್ದರೆ ಖಿನ್ನತೆಗೊಳಗಾಗುವ ಸಾಧ್ಯತೆ ಇರುತ್ತದೆ.
ಇತ್ತೀಚಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಒತ್ತಡದಿಂದ ಪಾರಾಗಲು ಹದಿಹರೆಯದ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಿದ್ದು, ಅವರು ಹೆಚ್ಚಾಗಿ ಅಶ್ಲೀಲ ಚಿತ್ರಗಳಿಗೆ ಅಂಟಿಕೊಂಡು ಪರೀಕ್ಷೆಯಲ್ಲಿ ಕಳಪೆ ಶ್ರೇಣಿಗಳನ್ನು ತೆಗೆಯುತ್ತಾರೆ ಮತ್ತು ವಿಫಲ ಸಂಬಂಧಗಳಿಗೂ ಕಾರಣವಾಗಬಹುದು. ಇದು ಕೇವಲ ಹದಿಹರೆಯದವರಿಗೆ ಮಾತ್ರ ಸೀಮಿತವಾಗಿಲ್ಲ. ವಯಸ್ಕರಿಗೂ ಈ ಗೀಳು ಅಂಟಿಕೊಂಡಿದ್ದು, ಡ್ರಗ್ ಗಿಂತಲೂ ಸಾಮಾಜಿಕ ಮಾಧ್ಯಮದ ಅತ್ಯಂತ ಪ್ರಬಲ ವ್ಯಸನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com