ದುಬಾರಿ ಆಭರಣಗಳ ಬಗ್ಗೆ ಮುತುವರ್ಜಿ ವಹಿಸುವುದು ಹೇಗೆ?

ಆಭರಣಗಳಿಗಾಗಿ ದುಬಾರಿ ಹಣ ವೆಚ್ಚ ಮಾಡಿದ ನಂತರ ಅವುಗಳನ್ನು ಸಂರಕ್ಷಿಸಿಡುವುದು ಪ್ರಮುಖವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಭರಣಗಳಿಗಾಗಿ ದುಬಾರಿ ಹಣ ವೆಚ್ಚ ಮಾಡಿದ ನಂತರ ಅವುಗಳನ್ನು ಸಂರಕ್ಷಿಸಿಡುವುದು ಪ್ರಮುಖವಾಗಿದೆ. ಆಭರಣ ಕೊಂಡ ನಂತರ ಅವುಗಳನ್ನು ಮಲ್ಮಾಲ್  ಬಟ್ಟೆಯಲ್ಲಿ ಸುತ್ತಿಡುವುದನ್ನು ಮರೆಯಬಾರದು. ಅವುಗಳು ಬೀಳದಂತೆ ತೊಡಬೇಕು, ಅಲ್ಲದೇ,  ಸುಲಭವಾಗಿ ತುಂಡಾಗದಂತೆ ತಜ್ಞರಿಂದ ಸಲಹೆ ಪಡೆಯಬೇಕಾಗುತ್ತದೆ.

ಆಭರಣಗಳ ಬಗ್ಗೆ ಹೇಗೆ ಮುತುವರ್ಜಿ ವಹಿಸಬೇಕು ಎಂಬ ಬಗ್ಗೆ ಹೈದ್ರಾಬಾದಿನ  ಕಿಶನ್ ನಂದ ಅಂಡ್ ಕಂಪನಿಯ ಪ್ರತಿಕ್ಷಾ ಕಿಶಾನ್ ದಾಸ್ ಹಾಗೂ ಆಭರಣ ವಿನ್ಯಾಸಕ ಪೂಜಾ ವಾಶ್ವನಿ ಕೆಲವೊಂದು ಟಿಪ್ಸ್ ನೀಡಿದ್ದಾರೆ.

 * ಆಭರಣಗಳ ಮೇಲೆ ನೇರವಾಗಿ ಸುಗಂದ ಸಿಂಪಡಿಸುವಂತಿಲ್ಲ.

 * ಕುಂದನ್ ಆಭರಣಗಳು ಇತರ ರಾಸಾಯನಿಕಗಳ ಜೊತೆ ಪ್ರತಿಕ್ರಿಯಿಸದಂತೆ ಹಾಗೂ ಕಪ್ಪು ಕಲ್ಲಾಗಿ ಪರಿವರ್ತನೆಯಾಗದಂತೆ ತಡೆಯಲು ಅವುಗಳನ್ನು  ಯಾವಾಗಲೂ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಸ್ಪಂಜು ಅಥವಾ ಹತ್ತಿಯಲ್ಲಿ  ಸಂರಕ್ಷಿಸಿಡುವುದು ಅಗತ್ಯ.

*ಆಭರಣಗಳಿಗೆ  ಯಾವುದೇ ರೀತಿಯ ರಾಸಾಯನಿಕಗಳ ಸಂಪರ್ಕ ಇಲ್ಲದಂತೆ ತಡೆಗಟ್ಟಬೇಕಾಗುತ್ತದೆ.

*ಎಮರಾಲ್ಡ್ಸ್  ಮೃದುವಾದ ಕಲ್ಲು ಆಗಿದ್ದು, ಅವುಗಳು ಕೆಳಗೆ ಬೀಳದಂತೆ, ತುಂಡಾಗದಂತೆ ಅವುಗಳ ತೊಡುವ ಮುನ್ನ ಸಲಹೆ ಪಡೆಯಬೇಕಾಗುತ್ತದೆ.

* ಬಾಸ್ರಾ ಹರಳನ್ನು ಯಾವಾಗಾಲೂ ಮಲ್ಮಾಲ್  ಬಟ್ಟೆಯಲ್ಲಿಯೇ ಸುತ್ತಿಡಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ಸೆಖೆಯಿಂದ ಇವುಗಳ ಕಾಂತಿ ಕೆದಡಂತೆ  ನೋಡಿಕೊಳ್ಳಬೇಕಾಗುತ್ತದೆ.

* ಆಭರಣಗಳ ವಿರೂಪ ತಡೆಗಟ್ಟುವ ನಿಟ್ಟಿನಲ್ಲಿ ಅವುಗಳನ್ನು ಪ್ರತ್ಯೇಕವಾದಂತಹ ಪೆಟ್ಟಿಗೆಯಲ್ಲಿ ಸಂರಕ್ಷಿಸಿಡಬೇಕಾಗುತ್ತದೆ.

* ಡೈಮಂಡ್ ಹೊರತುಪಡಿಸಿ  ಉಳಿದ ಆಭರಣಗಳನ್ನು ಸೋಪು ಅಥವಾ ನೀರಿನಿಂದ ತೊಳೆಯಬಾರದು.

* ಆಭರಣವನ್ನು ಪ್ರತಿನಿತ್ಯ ತೊಳೆಯುವುದರಿಂದ ಸ್ವಚ್ಚಗೊಳ್ಳುವುದರ ಜೊತೆಗೆ ಯಾವಾಗಲೂ ಹೊಸದಾಗಿ ಕಾಣಿಸುತ್ತವೆ. ಆದರೆ, ಎಲ್ಲಾ ಆಭರಣ ಉತ್ಪನ್ನಗಳನ್ನು ಇದೇ ಹಾದಿಯಲ್ಲಿ ತೊಳೆಯಲು ಸಾಧ್ಯವಿಲ್ಲ.

* ಚಿನ್ನ ಮೃಧುವಾದ ಲೋಹವಾಗಿದ್ದು, ಸುಲಭವಾಗಿ ವಿರೂಪವಾಗುತ್ತದೆ. ಆದರೆ, ಕಾಲ ಕಾಲಕ್ಕೆ ತಕ್ಕಂತೆ ಆಭರಣ ಅಂಗಡಿಗೆ ಹೋಗುವ ಮೂಲಕ ಅವುಗಳ ಪಾಲಿಸಿಂಗ್ ಹಾಗೂ ನಿರ್ವಹಣೆ ಮಾಡಬೇಕಾಗುತ್ತದೆ.

* ಅಡುಗೆ ಸಿದ್ಧತೆ, ಜೀಮ್ಮಿಂಗ್, ಸ್ವೀಮಿಂಗ್ ಅಥವಾ ಮತ್ತಿತರು ಮನೆಕೆಲಸದ ಸಂದರ್ಭದಲ್ಲಿ ದುಬಾರಿ ಬೆಲೆಯ ಆಭರಣ ತೊಡುವುದನ್ನು ತಡೆಗಟ್ಟಬೇಕು.

* ಮೇಕಪ್ , ಡ್ರಸ್ಸಿಂಗ್ ಆದ ನಂತರವೇ ಆಭರಣ ತೊಡುವುದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ದುಬಾರಿ ಬೆಲೆಯ ಆಭರಣಗಳು ಹಾನಿಯಾಗುವುದು ತಪ್ಪುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com