ವೃತ್ತಿ ಜೀವನವು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದೇ?

ವೃತ್ತಿ ಜೀವನದ ಗುರಿ, ಆಯ್ಕೆಗಳು ಮಹಿಳೆ ಹಾಗೂ ಪುರುಷರಲ್ಲಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಣನೀಯ ಪರಿಣಾಮ ಬೀರಲಿದೆ.
ವೃತ್ತಿ ಜೀವನದ ಗುರಿ- ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಅಂಶಗಳು
ವೃತ್ತಿ ಜೀವನದ ಗುರಿ- ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವ ಅಂಶಗಳು
ವಾಷಿಂಗ್ ಟನ್: ವೃತ್ತಿ ಜೀವನದ ಗುರಿ, ಆಯ್ಕೆಗಳು ಮಹಿಳೆ ಹಾಗೂ ಪುರುಷರಲ್ಲಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಣನೀಯ ಪರಿಣಾಮ ಬೀರಲಿದೆ. 
ಟೇಲರ್ & ಫ್ರಾನ್ಸಿಸ್ ನಲ್ಲಿ ನಡೆದ ಸಂಶೋಧನೆಯಲ್ಲಿ ವಿದ್ಯಾರ್ಥಿಗಳನ್ನು ಸಂದರ್ಶಿಸಲಾಗಿದ್ದು, ವೃತ್ತಿ ಜೀವನದ ಗುರಿಗಳನ್ನು ತಲುಪಿಯೂ ಬಂಜೆತನ ಕಾಡುವುದಕ್ಕೆ ಮೊದಲೇ ಮಕ್ಕಳನ್ನು ಪಡೆಯುವುದು ಮಹಿಳೆ ಹಾಗೂ ಪುರುಷರು ಇಬ್ಬರಿಗೂ ಮುಖ್ಯವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಮಕ್ಕಳನ್ನು ಪಡೆಯುವುದಕ್ಕೂ ಮುನ್ನವೇ ತಮ್ಮ ವೃತ್ತಿ ಜೀವನದಲ್ಲಿ ಸಾಧನೆ ಮಾಡಿರಬೇಕೆಂಬುದು ಬಹುತೇಕ ಭಾವಿ ಪೋಷಕರ ಅಭಿಪ್ರಾಯವಾಗಿದೆ. ಬಹುತೇಕ ವಿದ್ಯಾರ್ಥಿಗಳು  ವಯಸ್ಸಿಗೆ ಅನುಗುಣವಾಗಿ ಪುರುಷ-ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಅಂದಾಜಿಸಲು ಈ ಸಮೀಕ್ಷೆಯಲ್ಲಿ ಯತ್ನಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಹಿಳೆಯರ ವಯಸ್ಸು-ಸಂತಾನೋತ್ಪತ್ತಿ ಸಾಮರ್ಥ್ಯವನ್ನು ನಿಖರವಾಗಿ ಗುರುತಿಸಿದ್ದರೆ, ಕೆಲವರು ಪುರುಷರ ವಯಸಿಗೆ ಅನುಗುಣವಾಗಿ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಗುರುತಿಸಿದ್ದಾರೆ. 
ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯ 35-39 ವಯಸ್ಸಿನ ನಡುವೆ ಕುಗ್ಗುತ್ತದೆ ಎಂಬುದನ್ನು ಶೇ. 38 ರಷ್ಟು ಪುರುಷರು ಹಾಗೂ ಶೇ.45 ರಷ್ಟು ಮಹಿಳೆಯರು ಸರಿಯಾಗಿ ಗುರುತಿಸಿದ್ದು, 45-49 ವಯಸ್ಸಿನ ನಡುವೆ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸಲು ಪ್ರಾರಂಭವಾಗುತ್ತದೆ ಎಂಬುದನ್ನು ಶೇ.18.3 ರಷ್ಟು ಪುರುಷರು ಹಾಗೂ 16.9 ಮಹಿಳೆಯರು ನಿಖರವಾಗಿ ಹೇಳಿದ್ದಾರೆ. 
ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ.10 ರಷ್ಟು ವಿದ್ಯಾರ್ಥಿಗಳು ಮಕ್ಕಳನ್ನು ಪಡೆಯದೇ ಇರಲು ನಿರ್ಧರಿಸಿದ್ದು, ಶೇ.75 ರಷ್ಟು ಒಂದು ಅಥವಾ ಎರಡು ಮಕ್ಕಳನ್ನು ಪಡೆಯಲು ಬಯಸಿದ್ದಾರೆ.  ಸ್ಥಿರ ಸಂಬಂಧ ಹಾಗೂ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಸಂಗಾತಿಯ ಆಯ್ಕೆಯನ್ನು ಬಹುತೇಕ ವಿದ್ಯಾರ್ಥಿಗಳು  ಮಕ್ಕಳನ್ನು ಪಡೆಯುವುದಕ್ಕೂ ಮುನ್ನ ನೀಡಬೇಕಾದ ಪ್ರಾಮುಖ್ಯತೆಗಳೆಂದು ಹೇಳಿದ್ದಾರೆ. 
ವೃತ್ತಿ ಜೀವನದ ಗುರಿ- ಸಂತಾನೋತ್ಪತ್ತಿ ಸಾಮರ್ಥ್ಯದ ಮಿತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು  ಸಂಶೋಧಕರಾದ ಡಾ.ಯುಜೆನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com