ಒಂಟಿ ಜೀವನಕ್ಕೆ 'ಜೈ' ಎನ್ನಿ; ಅದರಲ್ಲೂ ಪ್ರಯೋಜನಗಳು ಇವೆ!

ಮನುಷ್ಯ ಒಂಟಿಯಾಗಿರುವುದರಿಂದ, ಏಕಾಂಗಿತನದಿಂದ ಅನೇಕ ಪ್ರಯೋಜನಗಳಿದೆ ಎನ್ನುವ ಅಂಶ ಇತ್ತೀಚಿನ ಅದ್ಯಯನದಿಂಡ ಬಹಿರಂಗವಾಗಿದೆ.
ಒಂಟಿ ಜೀವನಕ್ಕೆ 'ಜೈ' ಎನ್ನಿ; ಅದರಲ್ಲೂ ಪ್ರಯೋಜನಗಳು ಇವೆ!
ಒಂಟಿ ಜೀವನಕ್ಕೆ 'ಜೈ' ಎನ್ನಿ; ಅದರಲ್ಲೂ ಪ್ರಯೋಜನಗಳು ಇವೆ!
Updated on
ಲಂಡನ್: ಮನುಷ್ಯ ಒಂಟಿಯಾಗಿರುವುದರಿಂದ, ಏಕಾಂಗಿತನದಿಂದ ಅನೇಕ ಪ್ರಯೋಜನಗಳಿದೆ ಎನ್ನುವ ಅಂಶ ಇತ್ತೀಚಿನ ಅದ್ಯಯನದಿಂಡ ಬಹಿರಂಗವಾಗಿದೆ. 
ಒಂಟಿ ಜೀವನವನ್ನು ಸಮರ್ಥಿಸಲು ಮತ್ತು ಈ ಸಂಶೋಧನೆಯನ್ನು ಪ್ರಸ್ತುತಪಡಿಸಲು ದೇಶ ವಿದೇಶಗಳಲ್ಲಿ ಸಂಚರಿಸುತ್ತಿರುವ, ಕ್ಯಾಲಿಫೋರ್ನಿಯಾ ಸ್ಯಾನ್ಟಾ ಬಾರ್ಬರಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಬೆಲ್ಲಾ ಡಿಪಾಲೋ ಮನೋವಿಜ್ಞಾನ ಸಮುದಾಯದಿಂದ ನನ್ನ ಸಂಶೋಧನೆಗೆ ಯಾವ ಬೆಂಬಲ ಸಿಗುತ್ತಿಲ್ಲ, ಬದಲಿಗೆ ತಿರಸ್ಕಾರ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಒಂಟಿಯಾಗಿರುವ ಜನರು ಸದೃಡ ಸೋಷಿಯಲ್ ನೆಟ್ ವರ್ಕ್ ಹೊಂದಿರುತ್ತಾರೆ. 2015ರಲ್ಲಿ, ನಟಾಲಿಯಾ ಸರ್ಕಿಯನ್ ಮತ್ತು ನವೋಮಿ ಗೆರ್ಸ್ಟೆಲ್ ಎಂಬ ಸಾಮಾಜಿಕ ವಿಜ್ಞಾನಿಗಳು ಜಂಟಿಯಾಗಿ ಅಮೆರಿಕಾದಲ್ಲಿ ವಿವಾಹಿತ ಹಾಗೂ ಏಕಾಂಗಿಯಾಗಿರುವವರಲ್ಲಿ ನೆರೆ ಹೊರೆಯವರೊಡನೆ ಸಂಬಂಧಗಳು ಹೇಗೆ ಭಿನ್ನವಾಗಿರುತ್ತದೆ ಎನ್ನುವ ಸಂಶೋಧನೆ ನಡೆಸಿದ್ದರು.
ಒಂಟಿಯಾಗಿರುವವರು ತಮ್ಮ ಸಾಮಾಜಿಕ ನೆಟ್ ವರ್ಕ್ ನಲ್ಲಿ ಬಲವಾಗಿರುವುದಲ್ಲದೆ ವಿವಾಹಿತರಿಗೆ ಹೋಲಿಸಿದರೆ ಜನರಿಗೆ ಸಹಾಯ ಮಾಡಲು, ಅವರಿಂದ ಸಹಾಯ ಸ್ವೀಕರಿಸುವಲ್ಲಿ ಮುಂದಿದ್ದಾರೆ ಎಂದು ತಿಳಿದುಬಂದಿದೆ.  ವಿಶೇಷವೆಂದರೆ ಜನಾಂಗ, ಲಿಂಗ, ಮತ್ತು ಆದಾಯ ಮಟ್ಟಗಳಂತಹ ಅಂಶಗಳನ್ನು ಪರಿಗಣಿಸಿದಾಗ ಸಹ ಸಂಶೋಧನೆ ಫಲಿತಾಂಶಗಳು ಒಂದೇ ರೀತಿಯಾಗಿದ್ದವು.
ಒಂಟಿಯಾಗಿರುವುದರಿಂದ ಮಹೆಳೆ, ಪುರುಷರ ಸಾಮಾಜಿಕ ಸಂಪರ್ಕ ಹೆಚ್ಚಳವಾಗುತ್ತದೆ ಎಂದು ಸಂಶೋಧಕರು ತಮ್ಮ ಸಂಶೋಢನೆಯನ್ನು ಅತ್ಯಂತ ಸರಳ ರೀತಿಯಲ್ಲಿ ಉಲ್ಲೇಖಿಸಿದ್ದಾರೆ. ನಿಮ್ಮ ಕುಟುಂಬಕ್ಕೆ ಸೇರಿಲ್ಲದ ಮಹಿಳೆ ನಿಮಗೆ ಅತ್ಯಂತ ಪ್ರಮುಖರಾಗಿ ಕಾಣಿಸುತ್ತಾರೆ ಎಂದು ಇನ್ನೊಂದು ಅದ್ಯಯನ ಹೇಳಿದೆ.
ನಮ್ಮ ವಯಸ್ಸಿಗನುಗುಣವಾದವರಲ್ಲಿ ನಮಗೆ ಸ್ನೇಹ ಅತ್ಯಂತ ಪ್ರಮುಖವಾಗುತ್ತದೆ ಎಂದು ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಸಹಾಯಕ ಪ್ರೊಫೆಸರ್ ವಿಲಿಯಂ ಚಾಪಿಕ್ ತಾವು 280,000 ಜನರನ್ನೊಳಗೊಂಡು ನಡೆಸಿದ ಅದ್ಯಯನದಲ್ಲಿ ಕಂಡುಕೊಂಡರು. 
ವೃದ್ದರು ತಮ್ಮ ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳಿಗಿಂತ ಸ್ನೇಹ, ಆರೋಗ್ಯ ಮತ್ತು ಸಂತೋಷದಾಯಕ ಬದುಕಿಗೆ ಹೆಚ್ಚು ಒತ್ತು ನೀಡುತ್ತಾರೆ. 
ಯಾರು ಒಂಟಿಯಾಗಿರುವರೋ ಅವರು ವಿವಾಹಿತ ಮತ್ತು ವಿಚ್ಛೇದಿತರಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಎಂದು 18 ಮತ್ತು 64ರ ವಯೋಮಾನದ  13,000 ಕ್ಕಿಂತಲೂ ಹೆಚ್ಚು ಜನರ ಸಮೀಕ್ಷೆ ನಡೆಸಿದಾಗ ತಿಳಿದು ಬಂದಿದೆ.
ಒಂಟಿ ಜನರು ಜೀವನದಲ್ಲಿ ಹೆಚ್ಚು ಮುಂದೆ ಬರುತ್ತಾರೆ ಮತ್ತು ತಮಗೆ ದೊರಕಿದ ಕಾಲಾವಕಾಶದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ, ಹೀಗೆ ಹೆಚ್ಚಿನ ಅಧ್ಯಯನಗಳು ಸ್ವಾತಂತ್ರ್ಯ ಮತ್ತು ಹೆಚ್ಚಿನ ಮಟ್ಟದ ಸೃಜನಶೀಲತೆ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುವಂತಹ ಪ್ರಯೋಜನಗಳಿಗೆ ಒಬ್ಬಂಟಿತನವನ್ನು ಸಂಪರ್ಕಿಸಿದೆ.
ಏಕಾಂಗಿಗಳಾಗಿ ಇರುವವರು ಸ್ವಯಂ ನಿರ್ಣಯದ ಬಲವಾದ ಭಾವನೆಗಳನ್ನು ಹೊಂದಿದ್ದಾರೆ ಮತ್ತು ಅವರ ಮಾನಸಿಕ ಬೆಳವಣಿಗೆ ವಿವಾಹಿತರಿಗಿಂತ ಉತ್ತಮವಾಗಿರುತ್ತದೆ ಎಂದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್, ಡಿಪೌಲೊ 2016ರಲ್ಲಿ ಮಂಡಿಸಿದ್ದ ಪ್ರಬಂಧದಲ್ಲಿ ಪ್ರತಿಪಾದಿಸಿದ್ದರು.
ಒಂಟಿ ಜನರು ವಿವಾಹಿತರಿಗಿಂತ ಹೆಚ್ಚು ವೈಯುಕ್ತಿಕ ಬೆಳವಣಿಗೆಯನ್ನು ಸಾಧಿಸುತ್ತಾರೆ. ಕಲಿಕೆಯ ಬೆಳವಣಿಗೆ ಮತ್ತು ಹೊಸ ಅನುಭವಗಳ ಪರಿಕಲ್ಪನೆಯನ್ನು ಅವರು ಹೇಗೆ ಗ್ರಹಿಸುತ್ತಾರೆ ಎನ್ನುವುದರಲ್ಲಿಯೂ ಏಕಾಂಗಿ ಜನರು ಸಾಕಷ್ಟು ಮುಂದಿದ್ದಾರೆ ಎಂದು 1998 ಕುಟುಂಬಗಳ ರಾಷ್ಟ್ರೀಯ ಸಮೀಕ್ಷೆ ವರದಿ ಸಾರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com