ಚಳಿಗಾಲದಲ್ಲಿ ಕೂದಲಿನ ಆರೋಗ್ಯಕ್ಕೆ ಇಲ್ಲಿದೆ ಮನೆಮದ್ದು

ಎಲ್ಲಾ ಸಮಯದಲ್ಲೂ ತಮ್ಮ ಕೂದಲು ಹೆಚ್ಚು ಕಾಂತಿಯುತ ಹಾಗೂ ಸದೃಢವಾಗಿರಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಶ್ಯಾಂಪು, ತೈಲಗಳನ್ನು ಖರೀದಿಸಿ ಬಳಕೆ ಮಾಡುತ್ತಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಎಲ್ಲಾ ಸಮಯದಲ್ಲೂ ತಮ್ಮ ಕೂದಲು ಹೆಚ್ಚು ಕಾಂತಿಯುತ ಹಾಗೂ ಸದೃಢವಾಗಿರಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಶ್ಯಾಂಪು, ತೈಲಗಳನ್ನು ಖರೀದಿಸಿ ಬಳಕೆ ಮಾಡುತ್ತಾರೆ. 
ಕಲುಷಿತ ವಾತಾವರಣದ ಪರಿಣಾಮ ಕೂದಲಿನ ಆರೈಕೆ ಮಾಡುವುದು ಬಲು ಕಠಿಣ ಕೆಲಸವಾಗಿ ಹೋಗಿದೆ. ಪ್ರತೀನಿತ್ಯ ಹೊರಗಡೆ ಹೋಗುವಾಗ ವಾತಾವರಣದಲ್ಲಿರುವ ಧೂಳು ಹಾಗೂ ಇನ್ನಿತರ ಪದಾರ್ಥಗಳು ನಮ್ಮ ಕೂದಲು ಹಾಗೂ ದೇಹವನ್ನು ಸೇರಿಕೊಳ್ಳುತ್ತಿರುತ್ತವೆ. ಸಮಯದ ಅಭಾವದಿಂದಾಗಿ ಕೂದಲಿನ ಆರೈಕೆ ಮಾಡಲು ಸಾಧ್ಯವಾಗದೆ ಜನರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಖರೀದಿಸಿ ಕೂದಲಿನ ಆರೈಕೆ ಮಾಡಲು ಯತ್ನಿಸುತ್ತಾಹೆ. ಆದರೆ, ಇಂತಹ ಉತ್ಪನ್ನಗಳ ಬದಲಿಗೆ ನೈಸರ್ಗಿಕವಾಗಿ ಲಭ್ಯವಾಗುವಂತರ ಕೂದಲಿನ ಆರೈಕೆಯ ಸಮಾಗ್ರಿಗಳನ್ನು ಬಳಕೆ ಮಾಡಿದರೆ ಆರೋಗ್ಯಕರವಾದ ಕೂದಲನ್ನು ಪಡೆದುಕೊಳ್ಳಬಹುದು. 
ಮನೆಯಲ್ಲಿಯೇ ಆರೋಗ್ಯಕರ ಕೂದಲಿಗೆ ಮಾಡಬಹುದಾದಂತಹ ಕೆಲ ವಿಧಾನಗಳು ಈ ಕೆಳಗಿನಿಂತಿವೆ...
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಾನಾ ರೀತಿಯ ಶಾಂಪುಗಳು ದೊರೆಯುತ್ತವೆ. ಎಷ್ಟೋ ಮಂದಿ ಇದರ ಬಳಕೆ ತಿಳಿಯದೆಯೇ ಆರೋಗ್ಯಕರವಾದ ಕೂದಲನ್ನು ಹಾಳು ಮಾಡುಕೊಳ್ಳುತ್ತಿದ್ದಾರೆ. ಶಾಂಪೂ ಬಳಕೆಗೆ ಕೆಲ ವಿಧಾನಗಳಿವೆ. ಶಾಂಪೂ ಬಳಕೆ ಮಾಡುವವರು ಶಾಂಪುವನ್ನು ನೇರವಾಗಿ ಕೂದಲಿಗೆ ಹಾಕಬಾರದು. ನೀರಿನಲ್ಲಿ ಮಿಶ್ರಣ ಮಾಡಿ ತಲೆಯ ಬುಡಕ್ಕೆ ಮಾತ್ರ ಮಸಾಜ್ ಮಾಡಿಕೊಂಡು ತೊಳೆಯಬೇಕು. ಕೂದಲಿನ ತುದಿಯವರೆಗೂ ಮಸಾಜ್ ಮಾಡಬಾರದು. 
ಕಂಡೀಷನರ್ ಬಳಕೆ ಮಾಡುವವರು ಶಾಂಪೂನಿಂದ ಕೂದಲನ್ನು ತೊಳೆದ ಬಳಿಕ ಟವಲ್ ನಿಂದ ಕೂದಲಿನಲ್ಲಿರುವ ನೀರನ್ನು ಆರಿಸಿಕೊಳ್ಳಬೇಕು. ಕೂದಲು ಒಣಗಿದೆ ಎಂಬುದು ಖಾತ್ರಿಯಾದ ಬಳಿಕ ಕಂಡೀಷನರ್ ಬಳಕೆ ಮಾಡಬೇಕು. ಕೂದಲಿನಲ್ಲಿರುವ ನೀರನ್ನು ಕಂಡೀಷನರ್ ಹೆಚ್ಚು ತೆಗೆದುಕೊಳ್ಳದ ಕಾರಣ ಇದು ಕೂದಲಿನ ಕಾಂತಿ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೂದಲು ಒಣಗಿಸಲು ಸಮಯವಿಲ್ಲದವರು ಶಾಂಪೂ ಮಾಡಿದ ಬಳಿಕ ಕೂದಲಿನಲ್ಲಿರುವ ನೀರನ್ನು ಹಿಂಡಿ ತೆಗೆದು ಬಳಿಕ ಕಂಡೀಷನರ್ ಬಳಕೆ ಮಾಡಬೇಕು. 
ಕಂಡೀಷನರ್ ಜೊತೆಗೆ ತೈಲವನ್ನು ಬೆರೆಸಿ ಬಳಕೆ ಮಾಡುವುದರಿಂದ ಇದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ರಾಸಾಯನಿಕಗಳಿಂದ ಹಾಳಾದ ಕೂದಲು, ಒಣಕೂದಲು ಹಾಗೂ ಒಡೆದ ಕೂದಲನ್ನು ಇದು ಸರಿಪಡಿಸುತ್ತದೆ. 
ಆರೋಗ್ಯಕರ ನೆತ್ತಿಗೆ ತೈಲ ಬಳಕೆ ಮಾಡಿ
ಕೂದಲಿನ ಆರೋಗ್ಯಕ್ಕೆ ತೈಲದಿಂದ ಮಸಾಜ್ ಮಾಡುವುದು ಉತ್ತಮವಾದ ವಿಧಾನವಾಗಿದೆ. ನೈಸರ್ಗಿಕ ತೈಲಗಳಾದ ಜೋಜೋಬಾ ಹಾಗೂ ಕೊಬ್ಬರಿ ಎಣ್ಣೆ ಬಳಕೆ ಅತ್ಯುತ್ತಮವಾದ ವಿಧಾನ. 
ಜೋಜೋಬಾ ಹಾಗೂ ಕೊಬ್ಬರಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಇದು ನೆತ್ತಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಕೂದನ್ನು ಗಟ್ಟಿ ಮಾಡುತ್ತದೆ. ಪರಿಣಾಮ ಕೂದಲು ಉದುರುವ ಸಮಸ್ಯೆ ಪರಿಣಾಮಕಾರಿಯ ನಿಯಂತ್ರಣಕ್ಕೆ ಬರುತ್ತದೆ. ಇದರೊಂದಿಗೆ ಕೂದಲು ಕಾಂತಿಯುತವಾಗುತ್ತದೆ. 
ಕಂಡೀಷನರ್ ಜೊತೆಗೆ ಈ ಎಣ್ಣೆಯನ್ನು ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ. 
ಸಾರಭೂತ ತೈಲ ಬಳಕೆ ಕೇವಲ ಕೂದಲನ್ನು ಪೋಷಿಸುವುದಷ್ಟೇ ಅಲ್ಲದೆ, ಒತ್ತಡಗಳನ್ನು, ನೋವು ನಿವಾರಣೆ, ಚರ್ಮದ ಸೋಂಕುಗಳ ಸಮಸ್ಯೆಗಳನ್ನು ದೂರಾಗಿಸುತ್ತದೆ. 
ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆ ಅತ್ಯುತ್ತಮವಾದ ತೈಲವಾಗಿದ್ದು, ಇದು ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ. ಅಲ್ಲದೆ, ಒಳಗಿದ ಚರ್ಮ ಹಾಗೂ ಒಣಗಿದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಸೂಕ್ಷ್ಮಜೀವಿ ನಿರೋಧಕ ಅಂಶಗಳು ಇದರಲ್ಲಿದ್ದು, ಬ್ಯಾಕ್ಟೀರಿಯಾ ಹಾಗೂ ಫಂಗಲ್ ನಂತರ ಸಮಸ್ಯೆಗಳಿಗೂ ಈ ತೈಲವನ್ನು ಬಳಕೆ ಮಾಡಬಹುದಾಗಿದೆ. 
ರೋಸ್ಮೆರಿ ತೈಲ
ರೋಸ್ಮೆರಿ ಸಾರಭೂತ ತೈಲವು ತಲೆಬುರಡೆಯಲ್ಲಿರುವಂತರ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ತುಂಬಾ ನೆರವಿಗೆ ಬರುತ್ತದೆ. ಇದರಲ್ಲಿ ಇರುವಂತಹ ಹೆಚ್ಚಿನ ಮಟ್ಟದ ಕಬ್ಬಿನಾಂಶ, ವಿಟಮಿನ್ ಬಿ ಮತ್ತು ಕ್ಯಾಲ್ಶಿಯಂ ತಲೆಬುರುಡೆ ಸ್ವಚ್ಛಗೊಳಿಸಿ ಕೂದಲನ್ನು ನೈಸರ್ಗಿಕವಾಗಿ ದಪ್ಪವಾಗಿಸಲು ನೆರವಾಗುತ್ತದೆ. ಈ ತೈಲದಿಂದ ತಲೆಬುರಡೆಗೆ ಮಸಾಜ್ ಮಾಡುವುದರಿಂದ ಅಕಾಲಿಕವಾಗಿ ಬರುವ ಬಿಳಿ ಕೂದಲನ್ನು ತಡೆಗಟ್ಟಬಹುದು. 
ನಿಂಬೆ ಸಾರಭೂತ ತೈಲ
ನಿಂಬೆ ಸಾರಭೂತ ತೈಲ ಬಳಕೆಯಿಂದ ಕೂದಲಿನ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. ಇದು ಕೂದಲನ್ನು ಸ್ವಚ್ಛಗೊಳಿಸುವುದರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ, ತುರಿಕೆ ಹಾಗೂ ಕಿರಿಕಿರಿಯಾಗುವಂತಹ ಸಮಸ್ಯೆಗಳನ್ನು ಇದು ದೂರಾಗಿಸುತ್ತದೆ. 
ಪುದೀನಾ ತೈಲ
ಪುದೀನಾ ತೈಲ ಬಳಕೆ ಮಾಡುವುದರಿಂದ ತಲೆಯಲ್ಲಿರುವ ಹೊಟ್ಟನ್ನು ಇದು ನಿವಾರಣೆ ಮಾಡುತ್ತದೆ. ನಂಜುನಿರೋಧಕ ಗುಣಲಕ್ಷಣವನ್ನು ಹೊಂದಿರುವ ಈ ತೈಲ ಕೂದಲಿನ ಆರೈಕೆಯಲ್ಲಿ ಬಹುಮುಖ್ಯ ಪಾತ್ರವನ್ನ ನಿಭಾಯಿಸುತ್ತದೆ. ಮಿದುಳಿನ ಆರೋಗ್ಯ, ತಲೆ ನೋವು ಹಾಗೂ ಒತ್ತಡದಂತಹ ಸಮಸ್ಯೆಗಳನ್ನು ಈ ತೈಲ ದೂರಾಗಿಸುತ್ತದೆ. 
ಅರ್ಗಾನ್ ತೈಲ
ಅರ್ಗಾನ್ ತೈಲ ನೈಸರ್ಗಿಕ ತೈಲಗಳ ಸಾಲಿನಲ್ಲಿ ತುಂಬ ಜನಪ್ರಿಯವಾಗಿದ್ದು, ಇದು ಹಲವಾರು ರೀತಿಯಿದ ಕೂದಲಿಗೆ ಲಾಭವನ್ನುಂಟು ಮಾಡುತ್ತದೆ. ವಿಟಮಿನ್ ಬಿ, ಇ ಮತ್ತು ಸಾರಭೂತ ಕೊಬ್ಬಿನಾಮ್ಲವನ್ನು ಹೊಂದಿರುವ ಈ ಅರ್ಗಾನ್ ತೈಲವು ತಲೆಬುರುಡೆಯನ್ನು ಆರೋಗ್ಯವಾಗಿರಿಸಿ ಕೂದಲಿಗೆ ಕಾಂತಿ ಹಾಗೂ ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ. 
  • ಅತಿಯಾದ ಬಿಸಿ ನೀರು ಬಳಕೆ ಕೂದ ಕೂದಲನ್ನು ಹಾಳು ಮಾಡುತ್ತದೆ. ಶಾಂಪೂ ಅಥವಾ ಕಂಡೀಷನರ್ ಬಳಕೆ ಮಾಡಿದಾಗ ಸಾಧ್ಯವಾದಷ್ಟು ತಣ್ಣಗಿನ ನೀರನ್ನು ಬಳಕೆ ಮಾಡಬೇಕೆಂದು ತಜ್ಞರು ಹೇಳುತ್ತಾರೆ. ತಣ್ಣಗಿನ ನೀರಿನ ಬಳಕೆ ಮಾಡುವುದರಿಂದ ಇದು ಕೂದಲಿನ ಕಾಂತಿಯನ್ನು ಹೆಚ್ಚಿಸುತ್ತದೆ. 
  • ತಲೆಗೆ ಸ್ನಾನ ಮಾಡುವುದಕ್ಕೂ ಮುನ್ನ ಒಮ್ಮೆ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಬೇಕು. ಸ್ನಾನದ ಮಾಡಿದ ಬಳಿಕ ಕೂದಲು ಹೆಚ್ಚು ದುರ್ಬಲಗೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಕೂದಲು ಹಾಳಾಗುವ ಸಂದರ್ಭಗಳೇ ಹೆಚ್ಚು. ಹೀಗಾಗಿ ದಪ್ಪ ಬಾಯಿಯಿರುವ ಬಾಚಣಿಕೆಯನ್ನು ತೆಗೆದುಕೊಂಡು ಬಾಚಿಕೊಳ್ಳಬೇಕು. 
  • ಕೂದಲು ಒದ್ದೆಯಿರುವಾಗಲೇ ಬನ್ ಬಳಕೆ ಮಾಡಿ, ಕೂದಲನ್ನು ತಿರುಗಿಸಿ ಮೇಲೆತ್ತಿ ಹಾಕಬೇಕು. ಗುಂಗುರು ಕೂದಲು ಇಷ್ಟ ಪಡುವವರಿಗೆ ಇದು ನೈಸರ್ಗಿಕವಾಗಿಯೇ ಗುಂಗುರು ಕೂದಲಾಗುವಂತೆ ಮಾಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com