ಕ್ಯಾನ್ಸರ್ ವಿರುದ್ಧ ಹೋರಾಟ? ಕುಟುಂಬದ ಬೆಂಬಲ ಅತ್ಯಂತ ಮುಖ್ಯ!

ಕ್ಯಾನ್ಸರ್ ಎಂದಾಕ್ಷಣ ಭಯ ಪಡುವ ಜನರೇ ಹೆಚ್ಚು. ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿರುವ ಜನರ ಸಂಖ್ಯೆ ಕೂಡ ಹೆಚ್ಚಾಗತೊಡಗಿವೆ. ವಿಶ್ವದೆಲ್ಲೆಡೆ ಲಕ್ಷಾಂತರ ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕ್ಯಾನ್ಸರ್ ಎಂದಾಕ್ಷಣ ಭಯ ಪಡುವ ಜನರೇ ಹೆಚ್ಚು. ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿರುವ ಜನರ ಸಂಖ್ಯೆ ಕೂಡ ಹೆಚ್ಚಾಗತೊಡಗಿವೆ. ವಿಶ್ವದೆಲ್ಲೆಡೆ ಲಕ್ಷಾಂತರ ಜನರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. 
ಕ್ಯಾನ್ಸರ್ ನಲ್ಲಿಯೂ ಹಲವಾರು ರೀತಿಯ ರೋಗಗಳಿವೆ. ಅದರಲ್ಲಿಯೂ ಹೈಗ್ರೇಡ್ ಕ್ಯಾನ್ಸರ್ ಅಂತೂ ದೇಹದ ಮೇಲೆ ಗಂಭೀರ ರೀತಿಯ ಪರಿಣಾಮ ಬೀರುತ್ತದೆ. ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆಯನ್ನು ತೋರಿಸುತ್ತವೆ. ಆದರೆ, ಸಾಮಾನ್ಯಕ್ಕಿಂತಲೂ ಮಿತಿ ಮೀರಿದ ಕೋಶಗಳ ವಿಭಜನೆಯಾಗುತ್ತವೆ. ಶರೀರದ ಒಂದು ಭಾಗದಲ್ಲಿ ಒಂದು ಕಡೆ ಕಾಣಿಸಿಕೊಂಡರೆ, ಅಕ್ಕಪಕ್ಕದ ಕೋಶಗಳನ್ನೂ ಕೂಡ ನಾಶಪಡಿಸುತ್ತದೆ. ದೇಹದ ಇತರೆ ಭಾಗಗಳಿಗೆ ವೇಗವಾಗಿ ಪಸರಿಸುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಎಂಬುದು ದೇಹದ ಯಕೃತ್, ಶ್ವಾಸಕೋಶಗಳು, ದುಗ್ಧರಸ ಗ್ರಂಥಿಗಳು ಹಾಗೂ ಮೂಳೆಗಳಲ್ಲಿ ಕಾಣಿಸಿಕೊಳ್ಳುತ್ತವೆ. 
ಕ್ಯಾನ್ಸರ್ ನಲ್ಲಿ ಅನೇಕ ವಿಧದ ಕ್ಯಾನ್ಸರ್ ಗಳಿದ್ದು, ಒಂದು ರೀತಿಯ ಕ್ಯಾನ್ಸರ್'ಗೂ ವಿಭಿನ್ನ ರೀತಿಯ ಚಿಕಿತ್ಸೆಗಳಿವೆ. ಟ್ಯೂಮರ್ ಎಲ್ಲಿದೆ. ಯಾವ ಹಂತದಲ್ಲಿದೆ ಎಂಬುದನ್ನು ಅರಿತು ವೈದ್ಯರು ಚಿಕಿತ್ಸೆಗಳನ್ನು ನೀಡುತ್ತಾರೆ. ಕ್ಯಾನ್ಸರ್ ರೋಗಕ್ಕೆ ವಿಕಿರಣ, ಜೈವಿಕ ಮತ್ತು ಶಸ್ತ್ರಚಿಕಿತ್ಸೆ ಎಂಬ ಮೂರು ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 
ಸಾಮಾನ್ಯವಾಗಿ ಕ್ಯಾನ್ಸರ್ ರೋಗ ದೈಹಿಕಕ್ಕಿಂತಲೂ ಮಾನಸಿಕ ರೋಗದ ಮೇಲೆಯೇ ಹೆಚ್ಚು ಪರಿಣಾಮ ಬೀರುವುದುಂಟು. ಕ್ಯಾನ್ಸರ್ ಇದೆ ಎಂದು ಗೊತ್ತಾದ ಕೂಡಲೇ ಜನರು ಅಘಾತ, ಅಪನಂಬಿಕೆ, ಕೋಪ, ದುಃಖ ಮತ್ತು ಆಯಾಸದ ಭಾವನೆಗಳಲ್ಲಿರುತ್ತಾರೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುತ್ತವೆ. 
ಕ್ಯಾನ್ಸರ್ ಎಂಬುದು ಒಬ್ಬ ವ್ಯಕ್ತಿಯ ಮೇಲಷ್ಟೇ ಅಲ್ಲದ ಕುಟುಂಬ ಹಾಗೂ ಸಂಬಂಧಗಳ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಈ ರೋಗಕ್ಕೆ ಗುರಿಯಾದ ವ್ಯಕ್ತಿ ಜೀವನ ಶೈಲಿ, ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ಜೊತೆಗೆ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. 
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಅವೆರಡನ್ನೂ ಸಮಾನವಾಗಿ ನಿಭಾಯಿಸಬೇಕು. ಕೇವಲ ವೈದ್ಯರು ನೀಡುವ ಚಿಕಿತ್ಸೆಯಷ್ಟೇ ಅಲ್ಲ, ಕುಟುಂಬದ ಬೆಂಬಲ ಹಾಗೂ ಪ್ರೀತಿ ಕೂಡ ಇಲ್ಲಿ ಮುಖ್ಯವಾಗುತ್ತದೆ. 
ರೋಗದ ವಿರುದ್ಧ ಹೋರಾಡಲು ನಿರ್ಧರಿಸುವವರು ಹೆಚ್ಚಿನ ಆರೋಗ್ಯಯುತ, ಪರಿಪೂರ್ಣ ಆಹಾರವನ್ನು ಜೀವನ ಶೈಲಿಯಲ್ಲಿ ಸೇರಿಸಿಕೊಳ್ಳಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು. ದಿನಚರಿಗಳಲ್ಲಿ ವ್ಯಾಯಾಮಕ್ಕೂ ಸಮಯವನ್ನು ಮೀಸಲಿಡಬೇಕು. 
ನಿದ್ರೆಯ ಅಭ್ಯಾಸಗಳನ್ನು ಬದಲಿಸಿಕೊಂಡು, ರಾತ್ರಿ ಪೂರ್ತಿ ನಿದ್ರೆ ಮಾಡಬೇಕು. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸಿ, ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಖುಷಿ ಕೊಡುವ ಕೆಲಸಗಳು ಹಾಗೂ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಒತ್ತಡಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು. ಭಾವನಾತ್ಮಕ ಬೆಂಬಲಕ್ಕಾಗಿ ಕುಟುಂಬ, ಸ್ನೇಹಿತರು ಹಾಗೂ ನೆರೆಹೊರೆಯವರ ಬೆಂಬಲ ಪಡೆಯಬೇಕು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com