ನಿಮ್ಮ ದೇಹದ ಬಗ್ಗೆ ನಿಮಗೇ ಆತ್ಮವಿಶ್ವಾಸದ ಕೊರತೆಯೇ? ಹಾಗಾದರೆ ಪತ್ರ ಬರೆಯಿರಿ!

ಹೆಣ್ಣು ಮಕ್ಕಳಿಗೆ ತಮ್ಮ ಶರೀರದ ಬಗ್ಗೆ ಕಾಳಜಿ ಮೂಡುವುದು ಸಹಜ. ಮದುವೆಯಾಗಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಹೆಣ್ಣು ಮಕ್ಕಳಿಗೆ ತಮ್ಮ ಶರೀರದ ಬಗ್ಗೆ ಕಾಳಜಿ ಮೂಡುವುದು ಸಹಜ. ಮದುವೆಯಾಗಿ ಮಕ್ಕಳಾದ ಮೇಲಂತೂ ಅದು ಇನ್ನೂ ಹೆಚ್ಚಾಗುತ್ತದೆ. ತಮ್ಮ ಶರೀರದ ಸೌಂದರ್ಯದ ಬಗ್ಗೆ ಚಿಂತೆ ಕಾಡಲು ಶುರುವಾಗುತ್ತದೆ. ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

ಈ ತೊಂದರೆಯನ್ನು ನಿವಾರಿಸಲು ಮಹಿಳೆಯರು ತಮಗನಿಸಿದ್ದನ್ನು ಕಾಗದದಲ್ಲಿ ಬರೆಯುವ ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯದು. ತಮ್ಮ ಶರೀರದ ಬಗ್ಗೆ ಆತ್ಮವಿಶ್ವಾಸದ ಕೊರತೆಯುಂಟಾದರೆ ಮಹಿಳೆಯರು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶರೀರದ ಬಗ್ಗೆ ತಮ್ಮ ಬಗ್ಗೆ ಮಹಿಳೆಯರಿಗೆ ಕೀಳರಿಮೆ ಉಂಟಾದರೆ ಮಾನಸಿಕ ಒತ್ತಡ ಮತ್ತು ತಿನ್ನುವ ಅಭ್ಯಾಸದಲ್ಲಿ ವ್ಯತ್ಯಾಸವಾಗುತ್ತದೆ.

ಬ್ಯೂಟಿ ಆಫ್ ಸಿಕ್ ಎಂಬ ಲೇಖನದ ಲೇಖಕ ಎಂಗೆಲ್ಮ್ ಕಾಲೇಜಿಗೆ ಹೋಗುವ ಯುವತಿಯರಲ್ಲಿ ಬರವಣಿಗೆಯಿಂದ ಅವರಲ್ಲಿನ ಸಮಸ್ಯೆಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಕಂಡುಹಿಡಿದಿದ್ದಾರೆ.

ಮೊದಲೆರಡು ಅಧ್ಯಯನಗಳಲ್ಲಿ ಮಹಿಳೆಯರು ತಮಗಾಗಿ 15 ನಿಮಿಷ ಮೀಸಲಿಟ್ಟು ಏನಾದರೂ ಬರೆದರೆ ಮತ್ತು ಅದನ್ನು ಪರಾಮರ್ಶಿಸಿದರೆ ಮಹಿಳೆಯರು ತಮ್ಮ ಶರೀರದ ಬಗ್ಗೆ ಇರುವ ವಿಶ್ವಾಸದ ಕೊರತೆಯನ್ನು ಕನಿಷ್ಠ ಅಲ್ಪಾವಧಿಗಾದರೂ ಹೋಗಲಾಡಿಸಬಹುದು ಎನ್ನುತ್ತಾರೆ.

ಪತ್ರ ಬರೆಯುವುದರಿಂದ ಮಹಿಳೆಯರಲ್ಲಿ ಸ್ವಯಂ ಸಹಾನುಭೂತಿ ಕಂಡುಬರುತ್ತದೆ. ಮೂಲ ಸ್ವಯಂ ಸಹಾನುಭೂತಿ ಪತ್ರದ ಬರವಣಿಗೆ ಮತ್ತು ಇನ್ನೊಂದು ಸ್ವಯಂ ಸಹಾನುಭೂತಿ ಪತ್ರ ನೇರವಾಗಿ ನಮ್ಮ ಶರೀರದ ಮೇಲೆ ಪ್ರಭಾವ ಬೀರುತ್ತದೆ.

ಸಂಶೋಧಕರು ತಮ್ಮ ಅಂತಿಮ ಅಧ್ಯಯನದಲ್ಲಿ ಆನ್ ಲೈನ್ ಮೂಲಕ ನಿಧಾನವಾಗಿ ಹಾಗೂ ನಂತರ ವೇಗವಾಗಿ ಬರೆಸಿ ನೋಡಿದಾಗ ಮಹಿಳೆಯರು ಹೆಚ್ಚೆಚ್ಚು ಆಸಕ್ತಿಯಿಂದ ಔಪಚಾರಿಕವಾಗಿ ಪತ್ರ ಬರೆಯುವುದನ್ನು ನೋಡಿದ್ದಾರೆ. ಸಂಶೋಧಕರು ಇದೀಗ ವೆಬ್ ಸೈಟ್ ವೊಂದನ್ನು ತಯಾರಿಸಲು ನಿರ್ಧರಿಸಿದ್ದು, ಇದರಲ್ಲಿ ಮಹಿಳೆಯರು ತಮ್ಮ ಶರೀರದ ಬಗ್ಗೆ ಪತ್ರ ಬರೆಯಬಹುದು.

ಸೈಕಾಲಜಿ ಆಫ್ ವುಮೆನ್ ಕ್ವಾರ್ಟರ್ಲಿ ಎಂಬ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com