ವ್ಯಾಯಾಮ ನಿಲ್ಲಿಸುವುದರಿಂದ ಖಿನ್ನತೆಯ ರೋಗ ಲಕ್ಷಣ ಉಲ್ಬಣ

ಇದಕ್ಕಿದ್ದಂತೆ ವ್ಯಾಯಾಮ ನಿಲ್ಲಿಸುವುದರಿಂದ ಖಿನ್ನತೆಯ ರೋಗಲಕ್ಷಣಗಳು ಕ್ಷಿಪ್ರವಾಗಿ ಉಲ್ಬಣಗೊಳ್ಳಲಿವೆ ಎಂಬುದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್ ಡಿಸಿ :  ಇದಕ್ಕಿದ್ದಂತೆ  ವ್ಯಾಯಾಮ ನಿಲ್ಲಿಸುವುದರಿಂದ ಖಿನ್ನತೆಯ ರೋಗಲಕ್ಷಣಗಳು ಕ್ಷಿಪ್ರವಾಗಿ ಉಲ್ಬಣಗೊಳ್ಳಲಿವೆ  ಎಂಬುದು ಸಂಶೋಧಕರು ನಡೆಸಿದ  ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಡಿಲೇಡ್ ವಿಶ್ವವಿದ್ಯಾಲಯದ  ಮನೋಶಾಸ್ತ್ರ ವಿಭಾಗದ ಸಂಶೋಧಕ ವಿದ್ಯಾರ್ಥಿನಿ  ಜ್ಯೂಲಿ ಮಾರ್ಗನ್  ಮನೋಶಾಸ್ತ್ರರ ಮೇಲೆ ನಡೆಸಿದ ಅಧ್ಯಯನ ಪ್ರಕಾರ  ಇದಕ್ಕಿದ್ದಂತೆ  ವ್ಯಾಯಾಮ ನಿಲ್ಲಿಸುವುದರಿಂದಲೂ ದಿನಿನಿತ್ಯದ ಚಟುವಟಿಕೆಯ ಮೇಲೂ ಪರಿಣಾಮ ಬೀರಲಿದೆ ಎಂಬುದು ಕಂಡುಬಂದಿದೆ.

ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ವ್ಯಾಯಾಮ ಮತ್ತಿತರ ದೈಹಿಕ ಚಟುವಟಿಯಲ್ಲಿ ಆಗಾಗ್ಗೇ ತೊಡಗಿಸಿಕೊಳ್ಳಬೇಕೆಂದು  ಅವರು ಹೇಳಿದ್ದಾರೆ.

ಆರೋಗ್ಯ ಮತ್ತು ಖಿನ್ನತೆಯ ನಿಯಂತ್ರಣಕ್ಕಾಗಿ ವಾರದಲ್ಲಿ ಎಲ್ಲಾ ದಿನ ಇಲ್ಲವೇ   ಕನಿಷ್ಠ ಪಕ್ಷ 150 ಸೆಕೆಂಡ್ ಗಳಾಷ್ಟಾದರೂ  ವ್ಯಾಯಾಮ ಮಾಡುವುದನ್ನು  ಕಡ್ಡಾಯ ಮಾಡಿಕೊಳ್ಳಬೇಕು ಎಂಬುದು ಅವರ ಪ್ರಸಕ್ತ ಸಾಲಿನ ಸಾರ್ವಜನಿಕ ಆರೋಗ್ಯ ಮಾರ್ಗದರ್ಶನದಲ್ಲಿ ಶಿಫಾರಸ್ಸು ಮಾಡಲಾಗಿದೆ.

ವ್ಯಾಯಾಮ ನಿಲ್ಲಿಸುವುದರಿಂದ ಖಿನ್ನತೆ ರೋಗಲಕ್ಷಣ ಹೇಗೆ ಉಲ್ಬಣಿಸುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗಿ, ನಿರಂತರ ವ್ಯಾಯಾಮ ಮಾಡುವುದರಲ್ಲಿ ಖಿನ್ನತೆ ಕಡಿಮೆಯಮಾಗಿರುವುದು ವೈದ್ಯಕೀಯ ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. 

ಆರೋಗ್ಯ ಕಾಪಾಡಿಕೊಳ್ಳಲು 75 ನಿಮಿಷ ವ್ಯಾಯಾಮ ಮಾಡುವುದುನ್ನು ರೂಡಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡುತ್ತಾರೆ.

 ಮಾರ್ಗನ್ 152 ವಯಸ್ಕರ ಮೇಲೆ ಈ ರೀತಿಯ ಪ್ರಯೋಗ ನಡೆಸಲಾಗಿದ್ದು, ವಾರದಲ್ಲಿ ಮೂರು ಬಾರಿಯಾದರೂ ವ್ಯಾಯಾಮ ಮಾಡಿದವರಲ್ಲಿ ಖಿನ್ನತೆ ಕಡಿಮೆ ಪ್ರಮಾಣದಲ್ಲಿದ್ದರೆ, ವ್ಯಾಯಾಮ ಮಾಡದೆ ಇರುವವರಲ್ಲಿ ಖಿನ್ನತೆ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಅಡಿಲೇಡ್ ವಿಶ್ವವಿದ್ಯಾಲಯದ ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಬರ್ನಾಡ್ ಬಾವುನೇ ತಿಳಿಸಿದ್ದಾರೆ.

ವ್ಯಾಯಾಮ ಮಾಡದೆ ಇರುವವರಲ್ಲಿ ಖಿನ್ನತೆಯ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ ಎಂದು ಹೇಳುವ ಪ್ರೋಫೆಸರ್ ಬರ್ನಾಡ್ ಬಾವುನೇ,  ಹಲವು ಮಂದಿ ನಿರಂತವಾಗಿ ಅಧ್ಯಯನ ಮಾಡುವುದರಿಂದಲೂ ಇಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು,  ಇದ್ದಕ್ಕಿದ್ದಂತೆ  ವ್ಯಾಯಾಮ ನಿಲ್ಲಿಸುವುದರಿಂದ  ಅವರ ಮಾನಸಿಕ ಸ್ಥಿತಿ ಮೇಲೆ ಉಂಟಾಗುವ ಪರಿಣಾಮವನ್ನು ಜನತೆ ಅರ್ಥಮಾಡಿಕೊಳ್ಳವುದು ಅತಿ ಮುಖ್ಯ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com