ಮಕ್ಕಳಿಗೆ ಅಕ್ಕರೆ ಕಡಿಮೆಯಾದರೆ ಅವರಲ್ಲಿ ಸಮಾಜ-ವಿರೋಧಿ ಧೋರಣೆ ಸೃಷ್ಟಿ!

ಪಾಲಕರು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡದೆ ಹೋಗುವುದು, ಅವರನ್ನು ಪ್ರೀತಿಯಿಂದ ಕಾಣುವ ಬದಲು ಕಟ್ಟುನಿತ್ತಾಗಿ ಬೆಳೆಸುವುದರಿಂದ ಮಕ್ಕಳು ಹೆಚ್ಚು ಆಕ್ರಮಣಕಾರಿ ಹಾಗೂ ಸಮಾಜ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನ್ಯೂಯಾರ್ಕ್: ಪಾಲಕರು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡದೆ ಹೋಗುವುದು, ಅವರನ್ನು ಪ್ರೀತಿಯಿಂದ ಕಾಣುವ ಬದಲು ಕಟ್ಟುನಿತ್ತಾಗಿ ಬೆಳೆಸುವುದರಿಂದ ಮಕ್ಕಳು ಹೆಚ್ಚು ಆಕ್ರಮಣಕಾರಿ ಹಾಗೂ ಸಮಾಜ ವಿರೋಧಿಯಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಹೊಸ ಅದ್ಯಯನವೊಂದು ಹೇಳಿದೆ.
ಮನೆಯಲ್ಲಿ ಪೋಷಕರ ಕಾಳಜಿ ಕಡಿಮೆಯಾಗಿರುವುದು, ಹೆಚ್ಚು ಕಟ್ಟು ನಿತ್ತಿನ, ಕಠಿಣ ಕ್ರಮಗಳಿಂದ ಕೂಡಿರುವುದು ಮಕ್ಕಳನ್ನು ಆಕ್ರಮಣಕಾರಿಯನ್ನಾಗಿಸುತ್ತದೆ. ಅವರಲ್ಲಿ ಪರರ ಬಗ್ಗೆ ಸಹಾನುಭೂತಿ ಹಾಗೂ ನೈತಿಕ ಬದ್ದತೆಯನ್ನು ಕಾಣಲಾಗುವುದಿಲ್ಲ ಎಂದು ಅದ್ಯಯನ ವರದಿ ವಿವರಿಸಿದೆ.
ಈ ಅಧ್ಯಯನದ ಪ್ರಕಾರ ಪೋಷಕರು ಕಠಿಣ ವರ್ತನೆ ತೋರಿದರೆ ಮಕ್ಕಳು ಕಲ್ಲೆದೆಯವರಾಗಿ ಬೆಳೆಯುತ್ತಾರೆ ಎಂದು ಯು.ಎಸ್ ಮಿಚಿಗನ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್  ಲೂಕ್ ಹೈಡ್ ಹೇಳಿದ್ದಾರೆ. ಅಲ್ಲದೆ ಪೋಷಕರ ಜೀನ್ ಗಳು ಸಹ ಇಂತಹಾ ನಡವಳಿಕೆಗಳಿಗೆ ಕಾರಣವಾಗಬಲ್ಲವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವಳಿಗಳ ವಿಚಾರಕ್ಕೆ ಬಂದಾಗಲೂ ಅವುಗಳಲ್ಲಿ ಒಂದೇ ಬಗೆಯ ಡಿಎನ್ಎ ಇರುವ ಕಾರಣ ಸ್ವಭಾವದಲ್ಲಿ ಬದಲಾವಣೆ ಕಾಣುವುದು ಕಷ್ಟವೆಂದು ನಾವು ಹೆಚ್ಚು ಖಚಿತವಾಗಿ ಹೇಳಬಹುದು ಎಂಬುದಾಗಿ ಅವರು ವಿವರಿಸಿದ್ದಾರೆ.
ಅಮೇರಿಕನ್ ಅಕಾಡೆಮಿ ಆಫ್ ಚೈಲ್ಡ್ ಅಂಡ್ ಅಡಾಲಸೆಂಟ್ ಸೈಕಿಯಾಟ್ರಿ ಯಲ್ಲಿ ಪ್ರಕಟವಾದ ಅದ್ಯಯನ ವರದಿಗಾಗಿ ಸಂಶೋಧನಾ ತಂಡವು 227  ಅವಳಿ ಗಲನ್ನು ಪರೀಕ್ಷೆಗೆ ಒಳಪಡಿಸಿದೆ.
ಅದ್ಯಯನಕ್ಕೆ ಒಳಪಟ್ಟ ಪ್ರತಿ ಜೋಡಿ ಅವಳಿಗಳೂ ಪೋಷಕರ ಬಗೆಗೆ ಸಣ್ಣ ಪ್ರಮಆಣದ ಭಿನ್ನಾಭಿಪ್ರಾಯ ಹೊಂದಿರುವುಫ಼ು ಕಂಡುಬಂದಿದೆ.ಮಕ್ಕಳ ಆಕ್ರಮಣಶೀಲತೆ ಹಾಗೂ ಸಮಾಜ ವಿರೋಧಿಯಾಗಬಹುದಾದ 35 ಗುಣಲಕ್ಷಣಗಳನ್ನು ವರದಿ ಉಲ್ಲೇಖಿಸಿದ್ದು  ಮಗುವಿನ ನಡವಳಿಕೆಯನ್ನು ಸಹ ನಿರ್ಣಯಿಸಿದ್ದಾರೆ.
ಆದರೆ ದತ್ತು ಮಕ್ಕಳ ವಿಚಾರದಲ್ಲಿ ಇಂತಹದೇ ಪರಿಣಾಮ ಉಂತಾಗುತ್ತದೆ ಎನ್ನುವ ವಿಚಾರದಲ್ಲಿ ಸ್ಪಶ್ಃಟನೆ ಇಲ್ಲ. ಏಕೆಂದರೆ ದತ್ತು ಮಕ್ಕಳು ಹಾಗೂ ಪೋಷಕರ ವಂಶವಾಹಿಗಳು ಬದಳಗಿರುವ ಕಾರಣ ಅವುಗಳ ಸ್ವಭಾವದಲ್ಲಿ ಬದಲಾವಣೆ ಇರುತ್ತದೆ ಎನ್ನಲಾಗಿದೆ. "ಈ ಮಕ್ಕಳು ತಮ್ಮ ಹೆತ್ತವರೊಂದಿಗೆ ಜೀನ್ ಗಳನ್ನು ಹಂಚಿಕೊಳ್ಳುವುದಿಲ್ಲವಾದ ಕಾರಣ ನಾವು ತಳಿದೋಷದ ಕುರಿತಂತೆ ಹೇಳಲು ಸಾಧ್ಯವಿಲ್ಲ" ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್ ರೆಬೆಕಾ ವಾಲ್ಲರ್ ಹೇಳಿದ್ದಾರೆ.
ಮಗುವಿನ ಆನುವಂಶಿಕ ಗುಣಲಕ್ಷಣಗಳ ಬಗ್ಗೆ ದತ್ತು ಪಡೆದ ಪೋಷಕರಿಂದಲೂ ಪ್ರಭಾವ ಟುಮಾಡುತ್ತದೆ ಎಂಬ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ ಎಂದೂ ಅವರು ಸೇರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com