ಧೂಳು, ಕಲುಷಿತ ವಾತಾವರಣದಿಂದ ಚರ್ಮದ ಆರೈಕೆ ಹೇಗೆ?

ನಗರಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಧೂಳು ಹಾಗೂ ಕಲುಷಿತ ವಾತಾವರಣ ಹೆಚ್ಚಾಗುತ್ತಿದೆ. ಇದರಿಂದ ಸೌಂದರ್ಯ ಪ್ರಿಯರಿಗಂತೂ ತಲೆನೋವು ಹೆಚ್ಚಾಗಿ ಹೋಗಿದೆ. ಧೂಳು ಹಾಗೂ ಕಲುಷಿತ ವಾತಾವರಣ ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೆ, ಸೌಂದರ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಗರಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಧೂಳು ಹಾಗೂ ಕಲುಷಿತ ವಾತಾವರಣ ಹೆಚ್ಚಾಗುತ್ತಿದೆ. ಇದರಿಂದ ಸೌಂದರ್ಯ ಪ್ರಿಯರಿಗಂತೂ ತಲೆನೋವು ಹೆಚ್ಚಾಗಿ ಹೋಗಿದೆ. ಧೂಳು ಹಾಗೂ ಕಲುಷಿತ ವಾತಾವರಣ ಕೇವಲ ಆರೋಗ್ಯದ ಮೇಲಷ್ಟೇ ಅಲ್ಲದೆ, ಸೌಂದರ್ಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತವೆ. 

ಪ್ರತೀನಿತ್ಯ ಹೊರಗೆ ಓಡಾಡುವುದರಿಂದ ಚರ್ಮ ನೇರವಾಗಿ ಇಂತಹ ಕಲುಷಿತ ವಾತಾವರಣ ಹಾಗೂ ಧೂಳಿಗೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಚರ್ಮದ ಆರೈಕೆ ಅತಿ ಮುಖ್ಯವಾಗುತ್ತದೆ. ವಿಟಮಿನ್ ಸಿ, ವಿಟಮಿನ್ ಇ ಗ್ರೀನ್ ಟೀ ಸೇವನೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಕಲುಷಿತ ವಾತಾವರಣದಿಂದ ದೂರ ಇರಲು ನೈಸರ್ಗಿಕ ಪದಾರ್ಥಗಳ ಬಳಕೆ ಅತಿ ಮುಖ್ಯವಾಗುತ್ತದೆ. ಕ್ಯಾರೆಟ್ ಸೇವನೆ ಚರ್ಮದ ಆರೋಗ್ಯವನ್ನು ಹೆಚ್ಚುಸುತ್ತದೆ. ಅಲ್ಲದೆ, ಹಾಳಾದ ಚರ್ಮವನ್ನು ರಕ್ಷಣೆ ಮಾಡುತ್ತದೆ. 

ಹೊರಗೆ ಹೋಗುವುದಕ್ಕೂ ಮುನ್ನ ಎಸ್'ಪಿಎಪ್ ಇರುವ ಕ್ರೀಮ್ ಗಳನ್ನು ಹಚ್ಚುವುದು ಉತ್ತಮ. ಇದು ಚರ್ಮವನ್ನು ರಕ್ಷಣೆ ಮಾಡುತ್ತದೆ. ಚರ್ಮದ ಸೌಂದರ್ಯ ನಾವು ಹಚ್ಚುವ ಕ್ರೀಮ್ ಗಳ ಮೇಲಷ್ಟೇ ಅವಲಂಬಿತವಾಗಿಲ್ಲ. ತಿನ್ನುವಆಹಾರ ಕೂಡ ಅಂದವನ್ನು ಹೆಚ್ಚಿಸುತ್ತದೆ. ಹಣ್ಣು, ತರಕಾರಿ, ಎಳನೀರಿನ ಸೇವನೆಯಿಂದ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ದೊರೆಯುತ್ತವೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. 

ದೇಹ ಹಾಗೂ ಚರ್ಮದ ಆರೋಗ್ಯಕ್ಕೆ ನೀರು ತುಂಬಾ ಅವಶ್ಯಕವಾಗುತ್ತದೆ. ಅದರಲ್ಲೂ ಚರ್ಮದ ಕಾಂತಿ ಹೆಚ್ಚಿಸಲು ಪ್ರತೀನಿತ್ಯ 4 ಲೀಟರ್ ಗಳಷ್ಟು ನೀರು ಕುಡಿಯಲೇಬೇಕು. ತರಕಾರಿ ಹಾಗೂ ಹಣ್ಣಿನ ಸೇವನೆಯಿಂದ ದೇಹದಲ್ಲಿ ನೀರಿನಾಂಶ ಸಂಗ್ರಹವಾಗುತ್ತದೆ. 

ಸ್ನಾನಕ್ಕೂ ಮುನ್ನ ಚರ್ಮಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಅತ್ಯುತ್ತಮವಾಗಿರುತ್ತದೆ. ಇದರಿಂದ ಚರ್ಮ ಒಣಗುವುದನ್ನು ತಪ್ಪಿಸಬಹುದು. ಜೊತೆಗೆ ಪಕಳೆ ಏಳುವುದೂ ಕೂಡ ತಪ್ಪುತ್ತದೆ. ಕೆನೆಯುಳ್ಳ ಸೋಪ್ ಬಳಕೆ ಚರ್ಮಕ್ಕೆ ಬೇಕಾಗುವ ತೇವಾಂಶವನ್ನು ಒದಗಿಸುತ್ತದೆ. ಹೊರಗೆ ಹಾಗುವುದಕ್ಕೂ ಮುನ್ನ ಮುಖ ತೊಳೆದ ಅರ್ಧ ಗಂಟೆಗಳ ಬಳಿಕ ಹೊರಗೆ ಹೋಗಬೇಕು. ತಾಪಮಾನ ಬದಲಾವಣೆ ಕೂಡ ಚರ್ಮವನ್ನು ಕಳೆಕುಂದುವಂತೆ ಮಾಡುತ್ತದೆ. ಹೀಗಾಗಿ ಹೊರಗಿನಿಂದ ಬಂದ ಕೂಡಲೇ ತಣ್ಣಗಿನ ನೀರಿನಿಂದ ಮುಖ ತೊಳೆಯುವುದನ್ನು ರೂಢಿಸಿಕೊಳ್ಳಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com