ತಾಯಿಗಿಂತ ತಂದೆಗೇ ಪೋಷಕ ಜವಾಬ್ದಾರಿಯ ಖುಷಿ ಹೆಚ್ಚು!

ಪೋಷಕ ಭಾವನೆಯನ್ನು ತಾಯಿಗಿಂತ ತಂದೆ ಹೆಚ್ಚು ಅನುಭವಿಸುತ್ತಾರೆ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಾಸ್ ಏಂಜಲೀಸ್: ಪೋಷಕ ಭಾವನೆಯನ್ನು ತಾಯಿಗಿಂತ ತಂದೆ ಹೆಚ್ಚು ಅನುಭವಿಸುತ್ತಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಸುಮಾರು 18 ಸಾವಿರ ಮಂದಿಯಲ್ಲಿ ಈ ಅಧ್ಯಯನ ಮಾಡಲಾಗಿದ್ದು ಮಕ್ಕಳನ್ನು ಹೊಂದಿರುವ ಪೋಷಕರು ಮಕ್ಕಳಿಲ್ಲದ ಪೋಷಕರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ ಎಂದು ಕೂಡ ಹೇಳುತ್ತದೆ.

ಪರ್ಸನಾಲಿಟಿ ಅಂಡ್ ಸೋಷಿಯಲ್ ಸೈಕಾಲಜಿ ಬುಲೆಟಿನ್ ನಲ್ಲಿ ಅಧ್ಯಯನ ಪ್ರಕಟವಾಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸಂಶೋಧಕರು ಸುಮಾರು 18 ಸಾವಿರ ಮಂದಿಯಲ್ಲಿ ಮೂರು ವಿಭಿನ್ನ ಅಧ್ಯಯನ ನಡೆಸಿದರು. ಪೋಷಕ ಜವಾಬ್ದಾರಿಯಿಂದ ತಂದೆ ಹೆಚ್ಚು ಸಂತೋಷವಾಗಿರುತ್ತಾರೆಯೇ ಅಥವಾ ತಾಯಿಯೇ ಎಂದು ನೋಡಲಾಗಿತ್ತು.

ತಂದೆ-ತಾಯಿಯ ಸಂತೋಷ, ಸಮಾಜದಲ್ಲಿ ಸ್ಥಾನಮಾನ, ಒತ್ತಡದ ಅನುಭವಗಳು, ಮಾನಸಿಕ ತೃಪ್ತಿ ಇತ್ಯಾದಿಗಳನ್ನು ನೋಡಲಾಗಿತ್ತು. ತಂದೆ-ತಾಯಿ ತಮ್ಮ ಮಕ್ಕಳ ಜೊತೆ ಹೇಗೆ ಕಳೆಯುತ್ತಾರೆ ಎಂಬುದನ್ನು ಅಧ್ಯಯನ ಮಾಡಲಾಯಿತು ಎನ್ನುತ್ತಾರೆ ವಿಶ್ವವಿದ್ಯಾಲಯದ ಸಂಶೋಧಕಿ ಮನಃಶಾಸ್ತ್ರಜ್ಞೆ ಸೊಂಜ ಲ್ಯುಬೊಂಮಿರ್ಸ್ಕಿ.

ಮಕ್ಕಳಿಲ್ಲದ ಪೋಷಕರಲ್ಲಿ ಒತ್ತಡದ ಮಟ್ಟ ಕೂಡ ಹೆಚ್ಚಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರು ಸಂತೋಷಪಡುತ್ತಾರೆ. ಅಲ್ಲದೆ ಮಕ್ಕಳ ಜೊತೆ ಒಡನಾಟ, ಆಟಪಾಠ ತಾಯಿಗಿಂತ ತಂದೆಗೇ ಹೆಚ್ಚು ಇರುತ್ತದೆ ಎಂದು ಸಹ ಅಧ್ಯಯನದಲ್ಲಿ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com