ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

'ಗೇಮಿಂಗ್' ಗೀಳಿನಿಂದ ಹೊರಬರುವುದು ಹೇಗೆ?

ಇತ್ತೀಚಿಗೆ ಗೇಮಿಂಗ್ ಗೀಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಡಿಯೋ ಗೇಮ್, ಕಂಪ್ಯೂಟರ್, ಮೊಬೈಲ್ ಗೇಮ್ ಗಳ ಮೇಲಿನ ಅವಲಂಬನೆ ವ್ಯಸನಗಳ ರೀತಿಯಲ್ಲಿ ಮಾರ್ಪಡುತ್ತಿದೆ. ಇಂತಹ ಗೇಮ್ ಗಳ ಸಂಗ್ರಹಣೆ ಹಾಗೂ ಬಳಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಇತ್ತೀಚಿಗೆ ಗೇಮಿಂಗ್ ಗೀಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಡಿಯೋ ಗೇಮ್, ಕಂಪ್ಯೂಟರ್, ಮೊಬೈಲ್  ಗೇಮ್ ಗಳ ಮೇಲಿನ ಅವಲಂಬನೆ ವ್ಯಸನಗಳ ರೀತಿಯಲ್ಲಿ ಮಾರ್ಪಡುತ್ತಿದೆ.ಇಂತಹ ಗೇಮ್ ಗಳ ಸಂಗ್ರಹಣೆ ಹಾಗೂ ಬಳಕೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
ಶಾಲಾ- ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಇಂತಹ ಗೀಳಿಗೆ ಒಳಗಾಗುತ್ತಿದ್ದಾರೆ. ವ್ಯಸನದ ರೀತಿಯಲ್ಲಿ ಗೇಮಿಂಗ್ ಗೀಳು ಅಂಟಿಸಿಕೊಳ್ಳುವುದರಿಂದ ಮೆದುಳು ಹಾಗೂ ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಕಷ್ಟವಾಗದಂತೆ, ಸುಲಭವಾಗಿಯೂ ಗುರಿ ಸಾಧಿಸದಂತೆ ಇಂತಹ ಗೇಮ್ ಗಳನ್ನು ರೂಪಿಸಲಾಗಿರುತ್ತದೆ. ಗೇಮ್ ಆಡುವುದರಿಂದ ಒಂದು ರೀತಿಯ ಪ್ಯಾಂಟಿಸಿ, ಉತ್ಸಾಹ, ಕುತೂಹಲ ಮೂಡುವುದೇನೂ ನಿಜ. ಆದರೆ, ಇಂತಹ ಗೇಮ್ ಗಳು ಸಮಾಜದ ಹಿತಾಸಕ್ತಿಯನ್ನು ಹೊಂದಿರುವುದಿಲ್ಲ. ಇಂತಹ ಗೇಮಿಂಗ್ ಗೀಳು ಹಲವು ಸಂದರ್ಭಗಳಲ್ಲಿ ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಿಡಿಯೋ ಗೇಮ್ ನಲ್ಲಿ  ಸ್ಟಾಂಡರ್ಡ್ ಹಾಗೂ ಆನ್ ಲೈನ್ ಮಲ್ಟಿಪ್ಲೇಯರ್ ಎಂಬ ಎರಡು ಪ್ರಕಾರಗಳಿವೆ. ಸ್ಟಾಂಡರ್ಡ್ ವಿಡಿಯೋ ಗೇಮ್ ನ್ನು  ಒಂದು ಬಾರಿ ಡೌನ್ ಲೋಡ್ ಮಾಡಿಕೊಂಡರೆ ಅದಕ್ಕೆ ಇಂಟರ್ ನೆಟ್ ಅಗತ್ಯವಿರುವುದಿಲ್ಲ. ಸಿಂಗಲ್ ಸ್ಕ್ರೀನ್ ನಲ್ಲಿ ಇದನ್ನು ಆಡಬಹುದು. ಆದರೆ, ಆನ್ ಲೈನ್ ಮಲ್ಟಿ ಫ್ಲೇಯರ್ ಗೇಮ್ ಗಳಿಗೆ  ಮಲ್ಟಿಪಲ್ ಸ್ಕ್ರೀನ್ ಹಾಗೂ ಇಂಟರ್ ನೆಟ್ ಅಗತ್ಯವಿರುತ್ತದೆ. ಈ ಎರಡು ರೀತಿಯ ಆಟಗಳ ಮೇಲೂ ಹೆಚ್ಚಿನ ಅವಲಂಬನೆ ಕಂಡುಬರುತ್ತಿದೆ.
* ಗೇಮಿಂಗ್ ಗೀಳು ಬಗ್ಗೆಗೆ  ಮುನ್ಸೂಚನೆಯ ವರ್ತನೆಗಳು
*  ಗೇಮ್ ಗಳನ್ನು ಗೀಳಾಗಿಸಿಕೊಂಡವರು  ಮೊಬೈಲ್ ಇಲ್ಲದೆ  ಸಮಾಧಾನದಿಂದ ಇರುವುದಿಲ್ಲ
*  ತೆಗೆದುಕೊಂಡು ಹೋದಾಗ ಕಿರಿಕಿರಿ
*  ಹೆಚ್ಚಿನ ಸಮಯ ಆಡುವುದು 
*  ಕುಟುಂಬದವರು ಮತ್ತು ಸ್ನೇಹಿತರಿಗೆ ಸುಳ್ಳು ಹೇಳುವುದು 
*  ಮೊಬೈಲ್ ನ್ನು ರಹಸ್ಯವಾಗಿ ಇಟ್ಟುಕೊಳ್ಳುವುದು
 * ನಿದ್ರಾ ಹೀನತೆ, ಶಾಲೆ- ಕಾಲೇಜುಗಳಿಗೆ ಚಕ್ಕರ್ 
 ಗೇಮಿಂಗ್ ಗೀಳಿನಿಂದಾಗಿ ಉಂಟಾಗುವ ಆರೋಗ್ಯ ಸಂಬಂಧಿತ ಪರಿಣಾಮಗಳು
* ಅಪೌಷ್ಟಿಕತೆ  ಅಥವಾ `ಬೊಜ್ಜು ಉಂಟಾಗುತ್ತದೆ 
* ಮಧುಮೇಹ,  ಆಯಾಸ
*  ಅಧಿಕ ರಕ್ತದೊತ್ತಡ
* ಮುಜುಗರ, ತಲೆನೋವು, ಕುತ್ತಿಗೆ, ಬೆನ್ನು ನೋವು
* ಅಸ್ಪಷ್ಟ ದೃಷ್ಟಿ, ಅಳುವುದು 
ವರ್ತನೆಗಳು
* ಕಿರಿಕಿರಿ, ಮಾನಸಿಕ ಖಿನ್ನತೆ, ಭೀತಿ, ಸ್ವಯಂ ನಿಯಂತ್ರಣತೆ ಕ್ಷೀಣತೆ, ತಂಬಾಕು ಮತ್ತಿತರ ವಸ್ತುಗಳ ಮೇಲೆ  ಅವಲಂಬನೆ,  ಕೆಲವು ವೇಳೆ ಇಂತಹ ಗೇಮಿಂಗ್ ಮೇಲೆ ಅವಲಂಬಿತರಾದ ವಿದ್ಯಾರ್ಥಿಗಳು ಶಾಲಾ ಕೊಠಡಿ ಅಥವಾ ಬಟ್ಟೆಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. 
ಸಾಮಾಜಿಕ ಮತ್ತು ವೃತ್ತಿ ಮೇಲಿನ ಪರಿಣಾಮಗಳು:  ಕಡಿಮೆ ಹಾಜರಾತಿ, ಉದ್ಯೋಗ ಕಳೆದುಕೊಳ್ಳುವುದು, ಆದಾಯದ ಸಾಮರ್ಥ್ಯ ಕುಂಠಿತಗೊಳ್ಳುವುದು, ಗಳಿಸಿದೆಲ್ಲಾ ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚು ಮಾಡಬೇಕಾಗುತ್ತದೆ.
ಗೇಮಿಂಗ್ ಗೀಳಿಗೆ ಬೀಳದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು: ಆರಂಭದಿಂದಲೂ ಮೊಬೈಲ್ ನಲ್ಲಿ ಆಡುವ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕು, ಅಕಾಡೆಮಿಕ್ ಮತ್ತು ದೈಹಿಕ ಚಟುವಟಿಕೆಗಳತ್ತ ಗಮನ ನೀಡುವಂತೆ ಸಮಯ ನಿಗದಿಪಡಿಸಬೇಕು, ಆಶಿಸ್ತು ಮಕ್ಕಳಲ್ಲಿ ಶಿಸ್ತು ಬೆಳೆಸಬೇಕು  ಆಹಾರದ ಬಗ್ಗೆ ಸೂಕ್ತ ತಿಳುವಳಿಕೆ ಮೂಡಿಸಬೇಕು. 
ಚಿಕಿತ್ಸೆಗಳು:  ಇಂತಹ ಗೇಮ್ ನಲ್ಲಿ ಮುಳುಗಿರುವ ಮಕ್ಕಳೊಂದಿಗೆ ಚರ್ಚೆ ನಡೆಸಬೇಕು, ಮೊಬೈಲ್ ನಿಂದ ಸಂಪೂರ್ಣವಾಗಿ ಹೊರ ಬರುವಂತೆ ಮಾಡಬೇಕು, ಸೂಕ್ತ ವೈದ್ಯಕೀಯ ಹಾಗೂ ಕೌನ್ಸಿಲಿಂಗ್ ಮಾಡಿಸಬೇಕು. ದೈಹಿಕ ಚಟುವಟಿಕೆಗಳು, ಒಳ್ಳೇಯ ಅಭ್ಯಾಸಗಳನ್ನು ಬೆಳೆಸಬೇಕು, 
ಮಿತಿಮೀರಿದಂತಹ ಸಂದರ್ಭಗಳಲ್ಲಿ ನರ ಆರೋಗ್ಯ ತಜ್ಞರಿಂದ ಸಹಾಯ ಪಡೆಯಬೇಕು. ಅಕಾಡೆಮಿಕ್ ಅಥವಾ ಸಂಬಂಧಗಳಲ್ಲಿನ ತೊಂದರೆಗಳಲ್ಲಿ ಆಪ್ತ ಸಮಾಲೋಚಕರಿಂದ ಚಿಕಿತ್ಸೆ ದೊರಕಿಸಬೇಕು. ವಯಸ್ಕರು ಮಿತಿಯಾಗಿ ಮೊಬೈಲ್ ಬಳಸಬೇಕು ಎಂದು  ನವದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯ  ಮನೋಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com